ಬೆಂಗಳೂರು: ಮಹಾ ನಗರದಲ್ಲಿ ಪರಿಸರಸ್ನೇಹಿ ಬ್ಯಾಟರಿಚಾಲಿತ ಬಸ್‌ಗಳು ಸಂಚರಿಸುತ್ತಿವೆ. ಇವುಗಳ ಚಾರ್ಜಿಂಗ್‌ಗೆ ಮೂರು ನಿಲ್ದಾಣಗಳಲ್ಲಿ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಮಾಡಲಾಗಿದ್ದು, ಸುಗಮ ಸಂಚಾರಕ್ಕೆ ಬಿಎಂಟಿಸಿ ಸಂಸ್ಥೆ ಮುನ್ನುಡಿ ಬರೆದಿದೆ.
ಎಲೆಕ್ಟ್ರಿಕ್ ಬಸ್‌ಗಳನ್ನು ಕೆಂಪೇಗೌಡ ಬಸ್ ನಿಲ್ದಾಣ, ಯಲಹಂಕ ಮತ್ತು ಪುಟ್ಟೇನಹಳ್ಳಿ ನಿಲ್ದಾಣಗಳಲ್ಲಿ ಪ್ರತಿದಿನ ಚಾರ್ಜ್ ಮಾಡಲಾಗುತ್ತಿದೆ. ಈ ನಿಲ್ದಾಣಗಳಲ್ಲಿ ಫಾಸ್ಟ್ ಚಾರ್ಜರ್ ವ್ಯವಸ್ಥೆ ಮಾಡಲಾಗುತ್ತಿದೆ. ಬಸ್ ಸಂಪೂರ್ಣ ಚಾರ್ಜ್ ಆಗಲು 45 ನಿಮಿಷದಿಂದ 1 ಗಂಟೆ ಸಮಯ ಬೇಕು. ಇದರಿಂದ 200 ಕಿಲೋಮೀಟರ್ ದೂರ ಓಡಾಡಲು ಸಾಧ್ಯ.
ಸುಮಾರು 100 ನಾನ್-ಎಸಿ ಎಲೆಕ್ಟ್ರಿಕ್ ಬಸ್ಸುಗಳು ಓಡಾಡುತ್ತಿವೆ. ಈ ಬಸ್‌ಗಳು 12 ಮೀಟರ್ ಉದ್ದವಿದೆ. ಚಾಲಕ ಹೊರತುಪಡಿಸಿ 40 ಜನರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ವೀಲ್ಚೇರ್ ಸೌಲಭ್ಯವಿದೆ. ಎಲೆಕ್ಟ್ರಿಕ್ ಬಸ್ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ತುರ್ತು ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗಿದೆ.
ವಾಯುಮಾಲಿನ್ಯ ನಿಯಂತ್ರಣ: 2030ರ ವೇಳೆಗೆ ಎಲ್ಲಾ ಬಸ್‌ಗಳೂ ಎಲೆಕ್ಟ್ರಿಕ್ ಆಗಬೇಕೆಂಬ ಗುರಿಯನ್ನು ಸಂಸ್ಥೆ ಹೊಂದಿದೆ. ಇಂಥ ಬಸ್ ಬಳಸುವುದರಿಂದ ವಾಯುಮಾಲಿನ್ಯ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ.
ನಗರದಲ್ಲಿ 6,700 ಬಸ್ ಸಂಚಾರ: ಕರ್ನಾಟಕದಲ್ಲಿ ಸುಮಾರು 24,000 ಬಸ್‌ಗಳಿವೆ. ಇದರಲ್ಲಿ 6,700 ಬಿಎಂಟಿಸಿ ಬಸ್‌ಗಳು ನಗರದಲ್ಲಿ ಸಂಚರಿಸುತ್ತಿವೆ. ಪ್ರತಿ ಲಕ್ಷ ಜನಸಂಖ್ಯೆೆಗೆ 36 ಬಸ್‌ಗಳನ್ನು ಹೊಂದಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದೇಶದಲ್ಲೇ ಅತಿ ಹೆಚ್ಚು ಬಸ್‌ಗಳನ್ನು ಹೊಂದಿದೆ. ಇನ್ನುಳಿದಂತೆ, ತಮಿಳುನಾಡು (28.4), ಆಂಧ್ರಪ್ರದೇಶ (26.5), ಮಹಾರಾಷ್ಟ್ರ (22.8) ಮತ್ತು ಕೇರಳ (16.9) ದಲ್ಲಿ ಈ ರೀತಿಯ ಬಸ್ ಮತ್ತು ಪ್ರಯಾಣಿಕರ ಅನುಪಾತವಿದೆ.
ಇದನ್ನೂ ಓದಿ: ಆಗಸ್ಟ್ 15ರಿಂದ ಬೆಂಗಳೂರಿನಲ್ಲಿ ಮತ್ತಷ್ಟು ಎಲೆಕ್ಟ್ರಿಕ್ ಬಸ್‌ಗಳ ಸಂಚಾರ