ಬೆಂಗಳೂರು : ವೆಬ್ ಸೀರಿಸ್ ವೊಂದರಲ್ಲಿ ಬರುವ ಡೈಲಾಗ್ ಹೇಳುತ್ತಿದ್ದವನ್ನು ಪಾಕಿಸ್ತಾನ ಪರ ಜೈಕಾರ ಹಾಕುತ್ತಿದ್ದಾನೆ ಎಂದು ಸ್ಥಳೀಯರು, ಪೊಲೀಸರಿಗೆ ಹೇಳಿ ದಾರಿ ತಪ್ಪಿಸಿರುವ ಘಟನೆ ನಡೆದಿದೆ. ಪೊಲೀಸರಿಗೆ ಬಂದ ಅದೊಂದು ಕರೆ ಸಂಚಲನ ಸೃಷ್ಟಿಸಿತ್ತು. ಯುವಕನೊಬ್ಬ ಪಾಕಿಸ್ತಾನ ಪರ ಜೈಕಾರ ಹಾಕುತ್ತಿದ್ದಾನೆ ಎಂದು ಭಾವಿಸಿ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಡ ಮಾಡದೆ ಫೀಲ್ಡಿಗೆ ಇಳಿದ ಮೈಕೋಲೇಔಟ್ ಪೊಲೀಸರ ತಂಡ ನೇರವಾಗಿ ಸ್ಥಳಕ್ಕೆ ಬಂದು ಆರೋಪಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಮಾಡಿದ್ದ ನಂತರವೇ ಗೊತ್ತಾಗಿದ್ದು ಇಡೀ ಕಥೆಯ ಅಸಲಿಯತ್ತು ಏನು ಎಂಬುದು. ಜೈಕಾರ ಹಾಕುತ್ತಿದ್ದುದು ಪಾಕಿಸ್ತಾನ ಪರವಾಗಿ ಅಲ್ಲ. ಅದೊಂದು ವೆಬ್ ಸಿರೀಸ್ ವೊಂದರ ಡೈಲಾಗ್ ಅನ್ನೋದು ಗೊತ್ತಾಗಿದೆ.
ಪ್ರಕರಣ ಹಿನ್ನೆಲೆ ಏನು?.. ಮಾರ್ಚ್ 29ರ ಬೆಳಗ್ಗೆ ಬಿಟಿಎಂ ಲೇಔಟ್ನಲ್ಲಿ ಪಿಜಿಯೊಂದರ ಮುಂಭಾಗ ಕುಳಿತಿದ್ದ ಯುವಕನೊಬ್ಬ ಕಿವಿಗೆ ಹೆಡ್ ಫೋನ್ ಹಾಕಿಕೊಂಡು ತನ್ನ ಪಾಡಿಗೆ ತಾನು ಮೊಬೈಲ್ ನಲ್ಲಿ ವೆಬ್ ಸೀರಿಸ್ ನೋಡುತ್ತಿದ್ದ. ಈ ವೇಳೆ ಈತನ ಬಾಯಿಯಿಂದ ಪಾಕಿಸ್ತಾನ ಅನ್ನೋ ಪದ ಬರತೊಡಗಿದೆ. ಇನ್ನು ಅಲ್ಲೇ ಇದ್ದ ಸ್ಥಳೀಯರ ಕಿವಿಗೆ ಪಾಕಿಸ್ತಾನ್ ಎಂವ ಶಬ್ದ ಬೀಳುತ್ತಿದ್ದಂತೆ ಪೊಲೀಸರಿಗೆ ಕರೆ ಮಾಡಿ ಇಲ್ಲೊಬ್ಬ ಪಾಕ್ ಪರ ಘೋಷಣೆ ಕೂಗುತ್ತಿದ್ದಾನೆ ಬನ್ನಿ ಸರ್ ಎಂದು ಹೇಳಿದ್ದಾರೆ.
ಇನ್ನು ಮಾಹಿತಿ ತಿಳಿದ ತಕ್ಷಣವೇ ಎಚ್ಚೆತ್ತುಕೊಂಡ ಮೈಕೋ ಲೇಔಟ್ ಠಾಣೆ ಪೊಲೀಸರು ಸ್ವಲ್ಪವೂ ತಡ ಮಾಡದೇ ಸ್ಥಳಕ್ಕೆ ಬಂದು ಆರೋಪಿ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು. ಈ ವಿಚಾರಣೆ ವೇಳೆ ಯುವಕನು ಪಶ್ಚಿಮ ಬಂಗಾಳ ಮೂಲದವನು ಎಂಬುದು ಗೊತ್ತಾಗಿದೆ. ಈತ ಹೋಟೆಲ್ ಮ್ಯಾನೇಜ್ ಮೆಂಟ್ನಲ್ಲಿ ಪದವಿ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಪಿಜಿಯಲ್ಲಿ ನೆಲೆಸಿದ್ದಾನೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ತಮಿಳು ನಟ ವಿಜಯ್ ಸೇತುಪತಿ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಫರ್ಜಿ ಎಂಬ ಹಿಂದಿ ಭಾಷೆಯ ವೆಬ್ ಸೀರಿಸ್ನಲ್ಲಿ ಬರುವಂತ ಡೈಲಾಗ್ ಒಂದನ್ನು ಹೇಳುತ್ತಿದ್ದನಂತೆ.
ಅದನ್ನೇ ತಪ್ಪು ತಿಳಿದುಕೊಂಡಿರುವ ಸ್ಥಳೀಯರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎಂದು ಮಾಹಿತಿ ಕೊಟ್ಟಿದ್ದಾರೆ. ತನಿಖೆ ಸಂದರ್ಭದಲ್ಲಿ ಸಿಕ್ಕ ಮಾಹಿತಿ ಪ್ರಕಾರ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಅನ್ನೋದು ಸತ್ಯಕ್ಕೆ ದೂರವಾದ ಮಾತು ಎಂದು ತನಿಖೆ ನಡೆಸಿದ ಬಳಿಕ ಪೊಲೀಸರು ತಿಳಿಸಿದ್ದಾರೆ. ಆದರೂ ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮೈಕೋಲೇಔಟ್ ಪೊಲೀಸರು ಪಿಜಿ ನಲ್ಲಿದ್ದ ಆರೋಪಿ ಯುವಕನ ಸ್ನೇಹಿತರನ್ನು ಕರೆತಂದು ವಿಚಾರಣೆ ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಐಟಿ ಉದ್ಯೋಗಿಯ ಅತ್ಯಾಚಾರ, ಕೊಲೆ ಪ್ರಕರಣ: ಅಪರಾಧಿಗೆ 30 ವರ್ಷ ಜೈಲು ಶಿಕ್ಷೆ