ಬೆಂಗಳೂರು : ವಿಧಾನ ಪರಿಷತ್ನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ದೊರೆತಿದೆ. ಕಾಂಗ್ರೆಸ್ ಒತ್ತಾಯದಂತೆ ವಿಧೇಯಕವನ್ನು ಮತಕ್ಕೆ ಹಾಕಿದ್ದ ಹಿನ್ನೆಲೆಯಲ್ಲಿ 37-21 ಮತಗಳ ಅಂತರದಲ್ಲಿ ವಿಧೇಯಕ ಅನುಮೋದನೆ ಪಡೆಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮತಕ್ಕೆ ಹಾಕುವ ಮೊದಲು ಸಚಿವ ಆರ್.ಅಶೋಕ್ 'ಕೈ ಎತ್ತಿ' ಮತ ಚಲಾಯಿಸಿ ಎಂದು ಸಲಹೆ ನೀಡಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಮತಕ್ಕೆ ಹಾಕುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸದಸ್ಯರಿಗೆ ವಿಧೇಯಕದ ಪರ ಮತ ಹಾಕಲು ಅವಕಾಶ ನೀಡಲಾಯಿತು.
ಇದನ್ನೂ ಓದಿ: ಭೂ ಸುಧಾರಣಾ ತಿದ್ದುಪಡಿ, ರೈತರ ಶವಪೆಟ್ಟಿಗೆಗೆ ಹೊಡೆಯುವ ಕೊನೆಯ ಮೊಳೆ : ಎಸ್.ಆರ್.ಪಾಟೀಲ್
ಕೊನೆಯಲ್ಲಿ ವಿಧೇಯಕಕ್ಕೆ ಪರಿಷತ್ನಲ್ಲಿ ಅನುಮೋದನೆ ದೊರೆತಿದ್ದು, ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೌರ್ಯ ಸರ್ಕಲ್ನಲ್ಲಿ ರಸ್ತೆ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐಕ್ಯ ಹೋರಾಟ ಸಂಘಟನೆಯ ಸದಸ್ಯರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಕುರುಬೂರು ಶಾಂತ ಕುಮಾರ್, ಬಡಗಲೂರು ನಾಗೇಂದ್ರ ಹಾಗೂ ಹಲವು ರೈತರು ಭಾಗಿಯಾಗಿದ್ದಾರೆ.