ETV Bharat / state

ದೇಶದ ಹಳ್ಳಿಹಳ್ಳಿಗೂ ತೆರಳಿ ಬಿಜೆಪಿಗೆ ಮತ ಹಾಕದಂತೆ ಪ್ರಚಾರ : ರೈತಸಂಘದಿಂದ ಎಚ್ಚರಿಕೆ - Punjab farmer leader Jangavir Singh

ಪ್ರತಿ ಹಳ್ಳಿ ಹಳ್ಳಿಗೂ ಹೋಗಿ, ಮಹಾ ಪಂಚಾಯತ್ ನಡೆಸಿ, ಕೇಂದ್ರ ಸರ್ಕಾರದ ಕಾಯ್ದೆಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಎಲ್ಲೆಲ್ಲಿ ಚುನಾವಣೆ ನಡೆಯುತ್ತದೆ ಅಲ್ಲಿ ರೈತ ಸಂಘಟನೆಗಳು ಹೋಗಿ ಬಿಜೆಪಿಗೆ ಮತ ಹಾಕದಂತೆ ಮನವಿ ಮಾಡಲಿದ್ದೇವೆ. ಯಾವುದೇ ಪಕ್ಷಕ್ಕೆ ಮತ ಹಾಕಲಿ. ಆದರೆ, ಬಿಜೆಪಿಗೆ ಮಾತ್ರ ಬೇಡ ಎನ್ನಲಿದ್ದೇವೆ‌. ಅಲ್ಲದೆ 26ಕ್ಕೆ ಸಂಪೂರ್ಣ ಭಾರತ್ ಬಂದ್ ನಡೆಸಲಿದ್ದೇವೆ..

farmers-planing-to-build-propoganda-against-central-govt
ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು
author img

By

Published : Mar 19, 2021, 9:25 PM IST

ಬೆಂಗಳೂರು : ದೇಶಾದ್ಯಂತ 307 ರೈತರು ಪ್ರತಿಭಟನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ. ಆದರೆ, ಈ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಸದೇ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಹಾಗಾಗಿ, ಬಿಜೆಪಿ ಸರ್ಕಾರಕ್ಕೆ ಯಾರೂ ಮತ ಹಾಕಬೇಡಿ ಎಂದು ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಪ್ರಚಾರ ಮಾಡುವುದಾಗಿ ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು ಎಚ್ಚರಿಸಿದ್ದಾರೆ.

ನಗರದ ಸ್ಕೌಟ್ಸ್-ಗೈಡ್ಸ್ ಭವನದಲ್ಲಿ ಐಕ್ಯ ಹೋರಾಟ ಸಂಘಟನೆಯಿಂದ ದೆಹಲಿಯಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಸಮರ್ಪಣಾ ಸಮಾವೇಶ ನಡೆಸಲಾಯಿತು. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಅಖಿಲ ಭಾರತದಲ್ಲಿ ಮಾರ್ಚ್ 26ರಂದು ಬಂದ್​ಗೆ ಕರೆ ನೀಡಲಾಗಿದೆ. ಇದಕ್ಕೆ ಐಕ್ಯ ಹೋರಾಟದ ಸಂಘಟನೆಗಳ ಜೊತೆಗೂ ಮಾತುಕತೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ರಾಷ್ಟ್ರೀಯ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರು ಮಾತನಾಡಿದರು

ರಾಜ್ಯದಲ್ಲಿ ನಾಳೆಯಿಂದ ಕಿಸಾನ್ ಮಹಾಪಂಚಾಯತ್ ಆರಂಭಿಸುತ್ತೇವೆ. ನಾಳೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರ್ಯಾಲಿ ಹೊರಡಲಿದ್ದೇವೆ. ಮೌರ್ಯ ಸರ್ಕಲ್‌ನಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಾಹನಗಳ ಮೂಲಕ ರ್ಯಾಲಿ ಹೊರಡಲಾಗುತ್ತದೆ.

ಅಲ್ಲಿ ಬೃಹತ್ ಸಮಾವೇಶ ಮಾಡಿ ರೈತರನ್ನ ಸಂಘಟಿಸುತ್ತೇವೆ ಎಂದು ತಿಳಿಸಿದ ಅವರು, ದೇಶದ್ಯಾಂತ 80 ಕೋಟಿ ರೈತ ಕುಟುಂಬದಿಂದ 10 ರೂ. ಸಂಗ್ರಹಿಸಿ ಮೃತಪಟ್ಟ ರೈತರಿಗೆ ತಲಾ 3 ಕೋಟಿ ರೂ. ನೀಡುತ್ತೇವೆ ಎಂದರು.

ಪಂಜಾಬ್​ನ ರೈತ ಮುಖಂಡ ಜಂಗವೀರ್ ಸಿಂಗ್ ಮಾತನಾಡಿ, ಪ್ರತಿ ಹಳ್ಳಿ ಹಳ್ಳಿಗೂ ಹೋಗಿ, ಮಹಾ ಪಂಚಾಯತ್ ನಡೆಸಿ, ಕೇಂದ್ರ ಸರ್ಕಾರದ ಕಾಯ್ದೆಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಎಲ್ಲೆಲ್ಲಿ ಚುನಾವಣೆ ನಡೆಯುತ್ತದೆ ಅಲ್ಲಿ ರೈತ ಸಂಘಟನೆಗಳು ಹೋಗಿ ಬಿಜೆಪಿಗೆ ಮತ ಹಾಕದಂತೆ ಮನವಿ ಮಾಡಲಿದ್ದೇವೆ. ಯಾವುದೇ ಪಕ್ಷಕ್ಕೆ ಮತ ಹಾಕಲಿ. ಆದರೆ, ಬಿಜೆಪಿಗೆ ಮಾತ್ರ ಬೇಡ ಎನ್ನಲಿದ್ದೇವೆ‌. ಅಲ್ಲದೆ 26ಕ್ಕೆ ಸಂಪೂರ್ಣ ಭಾರತ್ ಬಂದ್ ನಡೆಸಲಿದ್ದೇವೆ ಎಂದರು.

ಹರಿಯಾಣದ ರೈತಮುಖಂಡ ಅಭಿಮನ್ಯು ಕೊಹ್ರಾ ಮಾತನಾಡಿ, 23ರಂದು ಭಗತ್​ ಸಿಂಗ್​ ಹುತಾತ್ಮರಾದ ದಿನದಂದು ಎಲ್ಲಾ ಯುವಕರಿಗೆ ಕರೆ ನೀಡಲಾಗಿದೆ. ಅಂದು ಹುತಾತ್ಮರಾದ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದೇವೆ. ದೆಹಲಿ ಗಡಿಭಾಗದ ಆರು ಗಡಿಗಳನ್ನು ಬಂದ್ ಮಾಡಲಿದ್ದೇವೆ ಎಂದು ಎಚ್ಚರಿಸಿದರು.

ಓದಿ: ಬೀದಿಯಲ್ಲೇ ಮಲಗಿದ ಸೇನಾ ರ್ಯಾಲಿ ಅಭ್ಯರ್ಥಿಗಳು.. ಇದಕ್ಕೆ ಹೀಗಂತಾರೆ ಜಿಲ್ಲಾಧಿಕಾರಿಗಳು

ಇನ್ನು, ರಾಷ್ಟ್ರೀಯ ಕಿಸಾನ್ ಮಹಾಸಂಘದ ಪ್ರಧಾನ ಸಂಚಾಲಕ ಶಿವಕುಮಾರ್ ಕಕ್ಕಾಜಿ ಮಾತನಾಡಿ, ನಮ್ಮನ್ನ ದೇಶದ್ರೋಹಿ‌ ಅಂದರು, ಪಾಕಿಸ್ತಾನಿ, ಖಲಿಸ್ತಾನಿಗಳು ಎಂದರು. ಆದ್ರೆ, ನಾವು ಗಾಂಧಿ ಮಾರ್ಗದ ಮೂಲಕ ವಿಶ್ವದ ದೊಡ್ಡ ಹೋರಾಟವನ್ನ ರೂಪಿಸಿದ್ದೇವೆ.‌ ನಿಮ್ಮ ಸುಗ್ರೀವಾಜ್ಞೆಗಳು ರೈತರಿಗೆ ಅರ್ಥವಾಗೋದಿಲ್ಲ. ಹೀಗಾಗಿ, ಮಹಾ ಪಂಚಾಯತ್ ಆಂದೋಲನದ ಮೂಲಕ ರೈತರಿಗೆ ಅರಿವು‌ ಮೂಡಿಸುತ್ತಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.