ETV Bharat / state

ಬಾದಾಮಿ, ವರುಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಭಿಮಾನಿಗಳ ದುಂಬಾಲು.. ಸಿದ್ದರಾಮಯ್ಯ ನಡೆ ಏನು? - ETV Bharat Karnataka

ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ನಿಗೂಢವಾಗಿಯೇ ಉಳಿದಿದೆ - ಮಾಜಿ ಸಿಎಂಗೆ ಹೆಚ್ಚಿದ ಒತ್ತಡ - ಏನ್ಮಾಡ್ತಾರೆ ಬಾದಾಮಿ ಕ್ಷೇತ್ರದ ಶಾಸಕ?

Fans urge Siddaramaiah
ಅಭಿಮಾನಿಗಳಿಂದ ಸಿದ್ದರಾಮಯ್ಯಗೆ ಒತ್ತಾಯ
author img

By

Published : Feb 14, 2023, 11:38 AM IST

ಬೆಂಗಳೂರು :ತಮ್ಮ ಸ್ಪರ್ಧೆಯ ವಿಧಾನಸಭೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಹೆಣಗಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಳೆದ ಸಾರಿ ತಮ್ಮನ್ನು ಗೆಲ್ಲಿಸಿದ ಬಾದಮಿ ಮತ್ತು ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಂದ ಒತ್ತಡ ಹೆಚ್ಚಾಗಿದೆ. ಮೈಸೂರಿನ ವರುಣ ಕ್ಷೇತ್ರವನ್ನು ಒಂದು ಆಯ್ಕೆಯಾಗಿಟ್ಟುಕೊಂಡು ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿಕೊಂಡು ಕ್ಷೇತ್ರ ಅಂತಿಮಗೊಳಿಸುವ ಯತ್ನದಲ್ಲಿ ಇರುವ ಸಿದ್ದರಾಮಯ್ಯಗೆ, ಇಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ನಾಯಕರು ಭೇಟಿಯಾಗಿ ಅಲ್ಲಿಂದಲೇ ಮರು ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯರ ಸರ್ಕಾರಿ ನಿವಾಸಕ್ಕೆ ಇಂದು ಆಗಮಿಸಿದ್ದ 50 ಕ್ಕೂ ಹೆಚ್ಚು ಮುಖಂಡರು ಬದಾಮಿಯಿಂದಲೇ ಸ್ಪರ್ಧಿಸಬೇಕು. ನಿಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು. ನಿಮಗೆ ಗೆಲ್ಲುವ ಎಲ್ಲಾ ಅವಕಾಶ ಅಲ್ಲಿದೆ ಎಂದು ಒತ್ತಾಯ ಮಾಡಿದ್ದಾರೆ. ಆದರೆ ಹಿಂದೆ ತಮಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಈ ಸಾರಿ ತಾವು ಕ್ಷೇತ್ರ ಬಿಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಅಲ್ಲಿ ಗೆಲ್ಲುವ ಯಾವುದೇ ನಿರೀಕ್ಷೆ ಸಿದ್ದರಾಮಯ್ಯಗೆ ಉಳಿದಿಲ್ಲ. ಹಾಗೂ ಬೆಂಗಳೂರಿನಿಂದ ದೂರದಲ್ಲಿರುವ ಹಿನ್ನೆಲೆ ಹೋಗಿ ಬರುವುದೂ ಕಷ್ಟಸಾಧ್ಯವಾಗಿದೆ.

ಸಿದ್ದರಾಮಯ್ಯ ಮತ್ತೆ ವರುಣಾ ಆಖಾಡಕ್ಕೆ ಬರುತ್ತಾರಾ ? : ಕಳೆದ ಬಾರಿ ಚಾಮುಂಡೇಶ್ವರಿಯಿಂದ ಗೆಲ್ಲುವುದು ಕಷ್ಟ ಎನ್ನುವುದು ಅರಿವಾಗುತ್ತಿದ್ದಂತೆ ಗೆಲ್ಲಬಲ್ಲ ಕ್ಷೇತ್ರ ಹುಡುಕಾಡಿ ಬದಾಮಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಕೇವಲ 1500 ಮತಗಳ ಅಂತರದ ಗೆಲುವು ಬಿಜೆಪಿಯ ಶ್ರೀರಾಮುಲು ವಿರುದ್ಧ ಲಭಿಸಿತ್ತು. ಈ ಸಾರಿ ಗೆಲ್ಲುವುದು ಅಸಾಧ್ಯ ಎನ್ನುವ ಅರಿವು ಸಿದ್ದರಾಮಯ್ಯಗೆ ಆಗಿದೆ. ಆದ್ದರಿಂದ ಚಾಮುಂಡೇಶ್ವರಿ, ಬದಾಮಿ ಬಿಟ್ಟು ಬೇರೆ ಕ್ಷೇತ್ರ ಹುಡುಕಾಡಿದ್ದಾರೆ. ವರುಣಾ ಅತ್ಯಂತ ಸುಭದ್ರ ಕ್ಷೇತ್ರ ಎಂದು ಲೆಕ್ಕ ಹಾಕಿಕೊಂಡಿದ್ದಾರೆ. ಉಳಿದಂತೆ ಚಾಮರಾಜಪೇಟೆ, ಕೋಲಾರ, ಚಿಕ್ಕಮಗಳೂರು, ತುಮಕೂರು ಸೇರಿದಂತೆ ಹಲವು ಕ್ಷೇತ್ರಗಳ ಹೆಸರು ಓಡಾಡಿವೆ. ಸದ್ಯ ತಾವು ಕೋಲಾರದಿಂದ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಆದರೆ ಅಂತಿಮವಾಗಿ ಅವರು ವರುಣಾ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ.

ಕೋಲಾರ ನಿರೀಕ್ಷೆ : ಒಂದೆಡೆ ಕೋಲಾರದಿಂದ ಸ್ಪರ್ಧಿಸುವ ಘೋಷಣೆ ಮಾಡಿರುವ ಸಿದ್ದರಾಮಯ್ಯಗೆ ಅಲ್ಲಿನ ಕಾಂಗ್ರೆಸ್ ಆಂತರಿಕ ವರದಿ ಸೋಲಿನ ಸುಳಿವು ನೀಡಿದೆ. ಪಕ್ಷದ ಆಂತರಿಕ ವರದಿಯಲ್ಲಿ ಈ ಸಾರಿ ಕೋಲಾರ ಕಾಂಗ್ರೆಸ್​ಗೆ ಪೂರಕವಾಗಿಲ್ಲ ಎಂದು ಹೇಳಿದೆ. ಇದರಿಂದ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಿದ್ದ ಸಿದ್ದರಾಮಯ್ಯ ನಿನ್ನೆ ದಿಢೀರ್ ಕಾರ್ಯಕ್ರಮ ಬದಲಿಸಿ ಕೋಲಾರಕ್ಕೆ ದೌಡಾಯಿಸಿ ಇನ್ನೊಂದು ಸುತ್ತು ಅಲ್ಲಿನ ಮುಖಂಡರ ಜತೆ ಮಾತುಕತೆ ನಡೆಸಿದ್ದಾರೆ.

ಸಿದ್ದರಾಮಯ್ಯ ಸ್ಪರ್ಧೆಯ ಘೋಷಣೆ ಮಾಡುವವರೆಗೂ ಅವರಿಗೆ ಬೆನ್ನಿಗಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಈಗ ತಟಸ್ಥರಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಮುನಿಯಪ್ಪ ವಿಧಾನಸಭೆಯತ್ತ ಆಸೆ ತೋರಿ, ದೇವನಹಳ್ಳಿಯಿಂದ ಸ್ಪರ್ಧಿಸುವ ಸಿದ್ಧತೆ ನಡೆಸಿದ್ದಾರೆ. ಇದರ ಜತೆ ಕೋಲಾರದಿಂದಲೇ ತಮ್ಮ ಇಬ್ಬರು ಪುತ್ರಿಯರಿಗೆ (ಒಬ್ಬರು ಹಾಲಿ ಕೆಜಿಎಫ್ ಶಾಸಕಿ) ಟಿಕೆಟ್ ಕೊಡಿಸಲು ಆತುರದಿಂದ ಓಡಾಡಿಕೊಂಡಿದ್ದಾರೆ.

ಕೋಲಾರದಿಂದ ಸ್ಪರ್ಧಿಸುವ ಘೋಷಣೆ ಮಾಡುವವರೆಗೆ ಜತೆಗಿದ್ದ ನಾಯಕರು ಈಗ ಸುಮ್ಮನಾಗಿರುವುದು ಸಿದ್ದರಾಮಯ್ಯಗೆ ತಲೆಬಿಸಿಯಾಗಿದೆ. ನಿನ್ನೆ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಬೇಕಿದ್ದ ಸಿದ್ದರಾಮಯ್ಯ ಕೋಲಾರಕ್ಕೆ ತೆರಳಿ ಸಭೆ ನಡೆಸಿದ್ದಾರೆ. ಸ್ಪರ್ಧೆ ಸಂಬಂಧ ಇನ್ನೊಂದು ಸುತ್ತು ಸ್ಥಳೀಯ ನಾಯಕರ ವಿಶ್ವಾಸ ಪಡೆದಿದ್ದಾರೆ.

ಸಿದ್ದರಾಮಯ್ಯಗೆ ಹೆಚ್ಚಿದ ಒತ್ತಡ : ಆದರೆ ಇಂದು ಬೆಳಗ್ಗೆ ಮನೆ ಮುಂದೆ ಬದಾಮಿ ಕ್ಷೇತ್ರದ ನಾಯಕರು ಬಂದು ಮತ್ತೆ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಯಾವುದೇ ಕಾರಣಕ್ಕೂ ಬದಾಮಿಯ ಜನ ತಮ್ಮನ್ನು ಗೆಲ್ಲಿಸುವುದಿಲ್ಲ ಎನ್ನುವ ಅರಿವು ಸಿದ್ದರಾಮಯ್ಯಗೆ ಇದೆ. ಕಳೆದ ಸಾರಿಯೇ ಬೆರಳೆಣಿಕೆಯಷ್ಟು ಮತಗಳಿಂದ ಶ್ರೀರಾಮುಲು ವಿರುದ್ಧ ಗೆದ್ದಿದ್ದ ತಾವು ಮರಳಿ ಯತ್ನ ಮಾಡಿದರೆ ಮಣ್ಣುಮುಕ್ಕುವುದು ಶತಸಿದ್ಧ ಎನ್ನುವ ಅರಿವಿದೆ.

ಬಾದಾಮಿಯಿಂದ ಮೂರನೇ ಬಾರಿ ಬೆಂಗಳೂರಿಗೆ ಬಂದು ಸಿದ್ದರಾಮಯ್ಯಗೆ ಒತ್ತಡ ಹೇರುತ್ತಿರುವ ಅವರ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು ಶತಾಯಗತಾಯ ತಾವು ಬದಾಮಿಗೇ ಬಂದು ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ ನಿವಾಸಕ್ಕೆ ಇದೇ ಸಂದರ್ಭ ವರುಣಾ ಕ್ಷೇತ್ರದ ಅಭಿಮಾನಿಗಳು ಸಹ ಆಗಮಿಸಿದ್ದರು. ವರುಣ ಕ್ಷೇತ್ರದ ಬೆಂಬಲಿಗರಿಂದಲೂ ವರುಣದಲ್ಲಿಯೇ ಸ್ಪರ್ಧೆ ಮಾಡುವಂತೆ ಒತ್ತಡ ಹೇರಲಾಯಿತು.

ಈಗಾಗಲೇ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ನಿರ್ಧರಿಸಿರುವ ಸಿದ್ದರಾಮಯ್ಯಗೆ ದಿನಕ್ಕೊಂದು ಕ್ಷೇತ್ರದ ಅಭಿಮಾನಿಗಳು ಬಂದು ಒತ್ತಡ ಹೇರುತ್ತಿರುವುದು ಸಾಮಾನ್ಯವಾಗಿದೆ. ಕೋಲಾರ ಆಯ್ಕೆ ಬಳಿಕವೂ ಸುಮ್ಮನಾಗದ ಸಿದ್ದರಾಮಯ್ಯ ಬೆಂಬಲಿಗರು ತಮ್ಮ ಕ್ಷೇತ್ರಕ್ಕೆ ಬಂದು ಸ್ಪರ್ಧಿಸುವಂತೆ ಒತ್ತಾಯಿಸುತ್ತಲೇ ಇದ್ದಾರೆ. ಕಳೆದ ವಾರ ಚಾಮುಂಡೇಶ್ವರಿ ಕ್ಷೇತ್ರದ ಜನರಿಂದ ಚಾಮುಂಡೇಶ್ವರಿಯಲ್ಲಿಯೇ ಮತ್ತೊಮ್ಮೆ ಸ್ಪರ್ಧಿಸುವಂತೆ ಬೆಂಗಳೂರಿಗೆ ಬಂದು ಒತ್ತಾಯಿಸಿದ್ದರು. ತಾವು ಕೋಲಾರದಿಂದ ಸ್ಪರ್ಧಿಸುವುದಾಗಿ ಬಹಿರಂಗವಾಗಿ ಹೇಳಿಕೊಂಡಿದ್ದರೂ, ಸಿದ್ದರಾಮಯ್ಯ ನಡೆ ಮಾತ್ರ ಈಗಲೂ ನಿಗೂಢವಾಗಿಯೇ ಉಳಿದಿದೆ.

ಇದನ್ನೂ ಓದಿ :ಮಾತಿನ ಭರದಲ್ಲಿ 'ನಮ್ಮ ಮೇಲೆ ವಿಶ್ವಾಸವಿದ್ರೆ ಬಿಜೆಪಿಗೆ ಮತ ಹಾಕಿ' ಎಂದ ಸಿದ್ದರಾಮಯ್ಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.