ಬೆಂಗಳೂರು: ಉದ್ಯಾನ ನಗರಿಯಲ್ಲಿ ಬೆಚ್ಚಿ ಬೀಳಿಸುವ ಕ್ರೈಂವೊಂದು ನಡೆದಿದೆ. ಕೌಟುಂಬಿಕ ಕಲಹಕ್ಕೆ ಮನನೊಂದ ಮಹಿಳೆ ಏಳು ವರ್ಷದ ಮಗಳನ್ನು ಕೊಂದು ಬಳಿಕ ತಾನು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಜ್ಯೋತಿ ಎಂಬ ಮಹಿಳೆ ತನ್ನ 7 ವರ್ಷದ ಮಗಳು ಶಾಬುನಾಳನ್ನು ಕೊಂದು ತಾನು ಕಟ್ಟಡದ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಜ್ಯೋತಿ ಅವರು ಪಂಕಜ್ ಎಂಬಾತನೊಂದಿದೆ 12 ವರ್ಷದ ಹಿಂದೆ ಮದುವೆಯಾಗಿದ್ದರು. ಪಂಕಜ್ ಅಶೋಕ ಪಿಲ್ಲರ್ ಬಳಿಯ ಹಾರ್ಡ್ ವೇರ್ ಶಾಪ್ ಮಾಲೀಕ. ಜ್ಯೋತಿ ಗೃಹಿಣಿಯಾಗಿದ್ದು, ಈಚೆಗೆ ಡಾನ್ಸ್ ಕ್ಲಾಸ್ ಗೆ ಸೇರಿದ್ದಳು.
ಹೆಂಡತಿ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಪ್ರತಿದಿನ ಈ ವಿಷಯದ ಬಗ್ಗೆ ಪಂಕಜ್ ಜಗಳವಾಡುತ್ತಿದ್ದ. ನಿನ್ನೆ ಸಹ ಜಗಳವಾಡಿ ಮನೆ ತೊರೆದು ಜಯನಗರದ ಲಾಡ್ಜ್ ವೊಂದರಲ್ಲಿ ಉಳಿದುಕೊಂಡಿದ್ದ. ಗಂಡ ಮನೆ ಬಿಟ್ಟು ಹೋಗಿರುವ ಬಗ್ಗೆ ಬೇಸರಗೊಂಡ ಜ್ಯೋತಿ, ಮಗುವನ್ನು ಕೊಂದು ಬಳಿಕ ತಾನು ವಾಸ ಮಾಡುತ್ತಿದ್ದ ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.