ETV Bharat / state

ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ: ಎಐಎಡಿಎಂಕೆ ಆಭ್ಯರ್ಥಿ ವಿರುದ್ಧ ಪ್ರಕರಣ ದಾಖಲು

ನಕಲಿ ಎ ಫಾರಂ ಹಾಗೂ ಬಿ ಫಾರಂ ಸಲ್ಲಿಸಿ ಚುನಾವಣಾ ಆಯೋಗಕ್ಕೆ ವಂಚಿಸಲು ಯತ್ನಿಸಿದ ಆರೋಪ ಹಿನ್ನೆಲೆ ಎಐಎಡಿಎಂಕೆ ಪಕ್ಷದ ಆಭ್ಯರ್ಥಿ ಕುಮಾರ್ ಕಣ್ಣನ್ ಪ್ರಕರಣ ದಾಖಲಾಗಿದೆ.

false-information-to-election-commission-case-filed-against-aiadmk-candidate
ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ: ಎಐಎಡಿಎಂಕೆ ಆಭ್ಯರ್ಥಿ ವಿರುದ್ಧ ಪ್ರಕರಣ ದಾಖಲು
author img

By

Published : Apr 27, 2023, 6:55 PM IST

ಬೆಂಗಳೂರು: ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ‌ ಸುಳ್ಳು ಮಾಹಿತಿ ನೀಡಿ ವಂಚಿಸಿದ ಆರೋಪದಡಿ ಎಐಎಡಿಎಂಕೆ ಪಕ್ಷದ ಆಭ್ಯರ್ಥಿ ಕುಮಾರ್ ಕಣ್ಣನ್ ಎಂಬುವರ ವಿರುದ್ಧ‌ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಎಐಎಡಿಎಂಕೆ (ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷದ ಆಭ್ಯರ್ಥಿಯಾಗಿ ಕುಮಾರ್ ಕಣ್ಣನ್ ಎಂಬುವರು ಸ್ಪರ್ಧಿಸಲು ಮುಂದಾಗಿದ್ದರು. ಇದರಂತೆ ನಕಲಿ ಎ ಫಾರಂ ಹಾಗೂ ಬಿ ಫಾರಂ ಸಲ್ಲಿಸಿದ್ದರು. ಸಲ್ಲಿಸಿದ್ದ ಅರ್ಜಿಯಲ್ಲಿ ಓ ಪನ್ನೀರ್ ಸೆಲ್ವಂ ಸಹಿಯಿತ್ತು. ವಾಸ್ತವವಾಗಿ AIADMK ಪದಾಧಿಕಾರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ‌ ಕಾರ್ಯನಿರ್ವಹಿಸುತ್ತಿದ್ದಾರೆ.

ಹೀಗಾಗಿ ಕುಮಾರ್ ಕಣ್ಣನ್ ಅವರನ್ನು ಪಕ್ಷೇತರ ಅಭ್ಯರ್ಥಿ ಎಂದು ಚುನಾವಣಾ ಆಯೋಗ ಪರಿಗಣಿಸಿತ್ತು. ಅಲ್ಲದೇ ಆಯೋಗಕ್ಕೆ ವಂಚಿಸಲು ಯತ್ನಿಸಿದ ಆರೋಪದ ಹಿನ್ನೆಲೆ ಚುನಾವಣಾ ಅಧಿಕಾರಿಯೊಬ್ಬರು ಕುಮಾರ್ ಕಣ್ಣನ್ ವಿರುದ್ಧ ದೂರು ನೀಡಿದ ಮೇರೆಗೆ ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರಚಾರದಲ್ಲಿ ಭಾಗವಹಿಸದಂತೆ ಶೋಭಾ ಕರಂದ್ಲಾಜೆಗೆ ಸೂಚಿಸುವಂತೆ ಚುನಾವಣಾ ಆಯೋಗಕ್ಕೆ ಸಿದ್ದರಾಮಯ್ಯ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.