ETV Bharat / state

ಅಪರಾಧಗಳಲ್ಲಿ ಭಾಗಿಯಾದವರಿಗೆ ನಕಲಿ ಶ್ಯೂರಿಟಿ ನೀಡುವುದನ್ನೇ ದಂಧೆಯಾಗಿಸಿಕೊಂಡಿದ್ದವ ಅಂದರ್​ - fake Surety Accused Arrest at at Bengaluru

ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಡಕಾಯಿತಿ, ಅತ್ಯಾಚಾರ ಹೀಗೆ ನಾನಾ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಂದ ಎರಡರಿಂದ ಮೂರು ಸಾವಿರ ರೂಪಾಯಿ ಹಣ ಪಡೆದು ಜಾಮೀನಿಗೆ ಶ್ಯೂರಿಟಿ ನೀಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಲಸೂರು ಗೇಟ್​ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಕಲಿ ಶ್ಯೂರಿಟಿ ನೀಡುತ್ತಿದ್ದವ ಅಂದರ್​
author img

By

Published : Nov 24, 2019, 4:23 PM IST

ಬೆಂಗಳೂರು: ವಿವಿಧ ಪ್ರಕರಣಗಳಲ್ಲಿ ಭಾಗಿಯಾದವರ ಜಾಮೀನಿಗೆ ನಕಲಿ ಶ್ಯೂರಿಟಿ ನೀಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಲಸೂರು ಗೇಟ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಮೂಲದ ಪೆಮ್ಮಾರೆಡ್ಡಿ(65) ಬಂಧಿತ ಆರೋಪಿ. ನಗರದ ಹಲವಾರು ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ಡಕಾಯಿತಿ, ಅತ್ಯಾಚಾರ ಹೀಗೆ ನಾನಾ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಂದ ಎರಡರಿಂದ ಮೂರು ಸಾವಿರ ರೂಪಾಯಿ ಹಣ ಪಡೆದು ಜಾಮೀನಿಗೆ ಶ್ಯೂರಿಟಿ ನೀಡುತ್ತಿದ್ದ.

ಎಂದಿನಂತೆ ಶುಕ್ರವಾರ ಶ್ಯೂರಿಟಿ ನೀಡಲು ನಗರದ ಸಿಟಿ ಸಿವಿಲ್ ಕೋರ್ಟಿಗೆ ಪೆಮ್ಮಾರೆಡ್ಡಿ ಬಂದ ವೇಳೆ ಖಚಿತ ಮಾಹಿತಿ ಆಧರಿಸಿ, ನ್ಯಾಯಾಲಯದ ಬಳಿ ಕರ್ತವ್ಯದಲ್ಲಿದ್ದ ಎಎಸ್ಐ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈತನ ವಿಚಾರಣೆ ನಡೆಸಿದಾಗ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಸುಮಾರು 50 ರಿಂದ 60 ಆರೋಪಿಗಳಿಗೆ ಶ್ಯೂರಿಟಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.

ಸದ್ಯ ಆರೋಪಿಯ ಡೈರಿ, ತಹಶೀಲ್ದಾರ್ ಕಚೇರಿಯ ನಕಲಿ ಸೀಲ್​, ಜಮೀನು ದಾಖಲೆಗಳನ್ನು ವಶಕ್ಕೆ ಪಡೆದಿರುವ‌ ಹಲಸೂರು ಗೇಟ್​ ಠಾಣಾ ಪೊಲೀಸರು, ನಕಲಿ ಮುದ್ರೆ ಸೃಷ್ಟಿ, ವಂಚನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

Intro:ನಕಲಿ ಶ್ಯೂರಿಟಿ ನೀಡುತ್ತಿದ್ದ ಆರೋಪಿ
ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧನ

ನಕಲಿ ಶ್ಯೂರಿಟಿ ನೀಡುತ್ತಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ
ಹಲಸೂರು ಗೇಟ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಕ್ಕಬಳ್ಳಾಪುರ ಮೂಲದ ಪೆಮ್ಮಾರೆಡ್ಡಿ (65) ವರ್ಷ ಬಂಧಿತ ಆರೋಪಿ.

ಹಲಸೂರು ಗೇಟ್ ಠಾಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಆರೋಪಿ ನಗರದ ಹಲವಾರು ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ಡಕಾಯಿತಿ, ಕೊಲೆ ಅತ್ಯಾಚಾರ ಹೀಗೆ ನಾನಾ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಂದ 2-3 ಸಾವಿರ ರೂಪಾಯಿ ಹಣ ಪಡೆದು ಜಾಮೀನಿಗೆ ಶ್ಯೂರಿಟಿ ನೀಡುತ್ತಿದ್ದ.

ಇದೇ ಶುಕ್ರವಾರ ಶ್ಯೂರಿಟಿ ನೀಡಲು ಸಿಟಿ ಸಿವಿಲ್ ಕೋರ್ಟಿಗೆ ಪೆಮ್ಮಾರೆಡ್ಡಿ ಬಂದ ವೇಳೆ ಖಚಿತ ಮಾಹಿತಿ ಆಧರಿಸಿ ನ್ಯಾಯಾಲಯದ ಕರ್ತವ್ಯದಲ್ಲಿದ್ದ ಎಎಸ್ಐ ವಶಕ್ಕೆ ಪಡೆದಿದ್ದಾರೆ. ಇನ್ನು ಈತನನ್ನ ವಿಚಾರಣೆ ಮಾಡಿದಾಗ ವಿವಿಧ ಪ್ರಕರಣದ ಸುಮಾರು 50 ರಿಂದ 60 ಆರೋಪಿಗಳಿಗೆ ಶ್ಯೂರಿಟಿ ನೀಡಿರುವ ವಿಚಾರ ಬೆಳಕಿಗೆ ಬಂದಿದ್ದು ಸದ್ಯ ಆರೋಪಿಯ ಡೈರಿ, ತಹಶೀಲ್ದಾರ್ ಕಚೇರಿಯ ನಕಲಿ ಸೀಲು, ಜಮೀನು ದಾಖಲೆಗಳು ವಶಕ್ಕೆ ಪಡೆದು‌ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ನಕಲಿ ಮುದ್ರೆ ಸೃಷ್ಟಿ, ವಂಚನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ
Body:KN_BNG_COURT_7_7204498Conclusion:KN_BNG_COURT_7_7204498

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.