ETV Bharat / state

ನಕಲಿ ಛಾಪಾ ಕಾಗದ ಹಗರಣ ಮತ್ತೆ ಮುನ್ನೆಲೆಗೆ : Fake Stamp Paper ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್​ - ಬೆಂಗಳೂರಲ್ಲಿ ನಕಲಿ ಛಾಪಾ ಕಾಗದ ಹಗರಣ ಪತ್ತೆ

ಛೋಟಾ ತೆಲಗಿ (Chota telagi )ಎಂದು ಕುಖ್ಯಾತಿ ಪಡೆದಿರುವ ಬಂಧಿತ ಆರೋಪಿ ಹುಸೈನ್ ಬಾಬು, ಹಲವು ವರ್ಷಗಳಿಂದ ನಕಲಿ ಛಾಪಾ ಕಾಗದ ಪತ್ರಗಳನ್ನು ತಯಾರಿಸುತ್ತಿದ್ದ. ಇದೇ ಪ್ರಕರಣದಲ್ಲಿ 2013ರಂದು ಹಲಸೂರು ಗೇಟ್ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ..

Fake stamp paper scam gang arrest
ನಕಲಿ ಛಾಪಾ ಕಾಗದ ಹಗರಣದ ಆರೋಪಿಗಳು
author img

By

Published : Nov 19, 2021, 3:30 PM IST

Updated : Nov 19, 2021, 5:26 PM IST

ಬೆಂಗಳೂರು : ನಕಲಿ ಛಾಪಾ ಕಾಗದವನ್ನು ಅಸಲಿ‌ ಎಂದು ನಂಬಿಸಿ ವಂಚಿಸುತ್ತಿದ್ದ ಗ್ಯಾಂಗ್​ (scam gang arrest) ಅನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ವಿವೇಕನಗರದ ಹುಸೈನ್ ಬಾಬು, ಬಸವೇಶ್ವರ ನಗರದ ಹರೀಶ್, ನಯಾಜ್ ಅಹಮ್ಮದ್, ಸೀಮಾ, ಶಬ್ಬೀರ್ ಅಹಮ್ಮದ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್

ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ನಕಲಿ ಛಾಪಾ ಕಾಗದ ಹಗರಣ(Fake stamp paper scam)ವನ್ನು ಪತ್ತೆ ಹಚ್ಚುವಂತೆ ಕೆಲ ದಿನಗಳ ಹಿಂದೆ ನ್ಯಾಯಾಲಯ ಆದೇಶಿಸಿತ್ತು. ಇದರಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​ (Police Commissioner Kamal Pant) ಅವರು ನಗರ ಪೂರ್ವ ವಿಭಾಗದ ಡಿಸಿಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದರು.

ಆಯುಕ್ತರ ಆದೇಶದಂತೆ ಕಾರ್ಯಾರಣೆ ಕೈಗೊಂಡ ತಂಡ, ನಗರದ ವಿವಿಧೆಡೆ ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಸೀಲ್, ರಬ್ಬರ್ ಸೀಲ್​ಗಳು, 233 ಖಾಲಿ ಹಾಳೆಗಳು, ವಿವಿಧ ಮುಖ ಬೆಲೆಯ 663 ಖಾಲಿ ನಕಲಿ ಛಾಪಾ ಕಾಗದ, ಪ್ಯಾಕಿಂಗ್​ ಆಗಿರುವ 136 ನಕಲಿ ಛಾಪಾ ಕಾಗದ ಸೇರಿ 63 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತರು ಅಕ್ರಮವಾಗಿ ಹಣ ಸಂಪಾದನೆ ಮಾಡುವ ದೃಷ್ಟಿಯಿಂದ ಕಾನೂನುಬಾಹಿರವಾಗಿ 2005ರಿಂದಲೂ ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ‌. 2020ಕ್ಕಿಂತಲೂ ಹಳೆಯ ನಕಲಿ ಛಾಪಾ ಕಾಗದಗಳನ್ನು ಅಸಲಿ ಎಂದು ಬಿಂಬಿಸಿ ಪರಿಚಯಸ್ಥ ಗಿರಾಕಿಗಳಿಗೆ 3 ರಿಂದ 5 ಸಾವಿರ ಹಾಗೂ ಅಪರಿಚಿತರಿಗೆ 5ರಿಂದ 10 ಸಾವಿರವರೆಗೆ ಮಾರಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ (Police Commissioner Kamal Pant) ತಿಳಿಸಿದ್ದಾರೆ‌.

ಛೋಟಾ ತೆಲಗಿ (Chota telagi )ಎಂದು ಕುಖ್ಯಾತಿ ಪಡೆದಿರುವ ಬಂಧಿತ ಆರೋಪಿ ಹುಸೈನ್ ಬಾಬು, ಹಲವು ವರ್ಷಗಳಿಂದ ನಕಲಿ ಛಾಪಾ ಕಾಗದ ಪತ್ರಗಳನ್ನು ತಯಾರಿಸುತ್ತಿದ್ದ. ಇದೇ ಪ್ರಕರಣದಲ್ಲಿ 2013ರಂದು ಹಲಸೂರು ಗೇಟ್ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ.

ಈತನೊಂದಿಗೆ ಹರೀಶ್ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಟೈಪಿಂಗ್ ಕೆಲಸ ಮಾಡುತ್ತಿದ್ದರೆ, ಕಂದಾಯ ಭವನದಲ್ಲಿ ಸೀಮಾ ಟೈಪಿಂಗ್ ಕೆಲಸ ಮಾಡುತ್ತಿದ್ದಳು. ಆರೋಪಿಗಳೆಲ್ಲರೂ ವ್ಯವಸ್ಥಿತವಾಗಿ ಸಂಚು ರೂಪಿಸಿ ಈ ದಂಧೆ ನಡೆಸುತ್ತಿದ್ದರು‌ ಎನ್ನಲಾಗುತ್ತಿದೆ.

ನ್ಯಾಯಾಲಯಗಳಲ್ಲಿ ತಕರಾರು ಸುಳ್ಳು ದಾವೆ ಹೂಡಲು, ಸುಳ್ಳು ಜಿಪಿಎ, ವಿಲ್‌ ಹಾಗೂ ಸುಳ್ಳು ಕರಾರು ಪತ್ರಗಳನ್ನು ಮಾಡಿ ಸಾರ್ವಜನಿಕರಿಗೆ ಮತ್ತು ಸರ್ಕಾರಕ್ಕೆ ಮೋಸ ಮಾಡಲು ದಂಧೆಕೋರರು ಛಾಪಾ ಕಾಗದಗಳನ್ನು ಬಳಸಿಕೊಳ್ಳುತ್ತಿದ್ದರು ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮನೆ ಕುಸಿದು ನಾಲ್ವರು ಮಕ್ಕಳು ಸೇರಿ 9 ಜನರ ದಾರುಣ ಸಾವು!

Last Updated : Nov 19, 2021, 5:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.