ETV Bharat / state

ಬೆಂಗಳೂರು: ರಸ್ತೆ ಬದಿಯಲ್ಲಿ ಸಿಕ್ಕ 2 ಸಾವಿರ ಮುಖ ಬೆಲೆಯ ಗರಿ ಗರಿ ನೋಟುಗಳು.. ಹತ್ತಿರ ಹೋಗಿ ನೋಡಿದಾಗ ಗೊತ್ತಾಯ್ತು ಅಸಲಿಯತ್ತು! - ನಕಲಿ ನೋಟುಗಳ ವಶ

ಬೆಂಗಳೂರು ನಗರದ ಹೊರವಲಯದ ಕನಕಪುರ ರಸ್ತೆಯಲ್ಲಿ ಲಕ್ಷಾಂತರ ಮೌಲ್ಯದ 2 ಸಾವಿರ ಮುಖಬೆಲೆಯ ನಕಲಿ ನೋಟುಗಳು ಸಿಕ್ಕಿವೆ.

2 ಸಾವಿರ ಮುಖಬೆಲೆಯ ನಕಲಿ ನೋಟು
2 ಸಾವಿರ ಮುಖಬೆಲೆಯ ನಕಲಿ ನೋಟು
author img

By

Published : Jul 25, 2023, 6:26 PM IST

Updated : Jul 25, 2023, 6:35 PM IST

ಬೆಂಗಳೂರು: ನಗರದ ಹೊರವಲಯದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ 2 ಸಾವಿರ ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ. ಕನಕಪುರ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಎರಡು ಬಾಕ್ಸ್​​ಗಳಲ್ಲಿ ಎರಡು ಸಾವಿರ ಮುಖಬೆಲೆಯ ನಕಲಿ ನೋಟುಗಳು ಸಿಕ್ಕಿವೆ.

ಕನಕಪುರ ರಸ್ತೆಯೊಂದರ ಪಕ್ಕದಲ್ಲಿ ಖಾಲಿ ಜಾಗದಲ್ಲಿ ಪ್ಯಾಕಿಂಗ್ ಮಾಡಿದ ಸ್ಥಿತಿಯಲ್ಲಿ ಎರಡು ಬಾಕ್ಸ್ ಗಳನ್ನ ಕಂಡ ಸ್ಥಳೀಯರು ಅನುಮಾನಗೊಂಡ ಸಮೀಪದಲ್ಲೇ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕೂಡಲೇ ತಲಘಟ್ಟಪುರ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರನ್ನ ಕರೆಯಿಸಿ ಬಾಕ್ಸ್ ಬಿಚ್ಚಿ ಪರಿಶೀಲಿಸಿದಾಗ ಕಂತೆ-ಕಂತೆ ನೋಟುಗಳು ದೊರಕಿದ್ದು, ಒಂದು ಕ್ಷಣ ದಂಗಾಗಿದ್ದಾರೆ.

ಸಂಪೂರ್ಣವಾಗಿ ಪರಿಶೀಲಿಸಿದಾಗ ಅವು ನಕಲಿ ನೋಟುಗಳು ಅನ್ನೋದು ಗೊತ್ತಾಗಿದೆ. ಯಾರೋ ಅಪರಿಚಿತರು ಈ ನೋಟುಗಳನ್ನು ಎಸೆದಿರಬಹುದು. ಸದ್ಯ ಈ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಸಾಲ ಕೊಡುವುದಾಗಿ ನಕಲಿ ನೋಟು ನೀಡಿ ವಂಚನೆ : ಬೆಂಗಳೂರಿನ ಜಯನಗರದಲ್ಲಿ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ಕಮಿಷನ್ ಪಡೆದು ನಕಲಿ ನೋಟುಗಳನ್ನು ನೀಡಿ ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಜಯನಗರ ಠಾಣಾ ಪೊಲೀಸರು (ಡಿಸೆಂಬರ್ 25-2022) ಬಂಧಿಸಿದ್ದರು. ಮನ್ನಾ ಶರಣು, ವಿಷ್ಣುರಾಜನ್ ಹಾಗೂ ಪ್ರವೀಣ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿತ್ತು.

ರಾಮಮೂರ್ತಿ ನಗರದಲ್ಲಿ ಮನೆ ಹಾಗೂ ಆಫೀಸ್ ಹೊಂದಿದ್ದ ಬಂಧಿತ ಆರೋಪಿಗಳು ಸಾಲ ಅಗತ್ಯವಿರುವವರನ್ನು ಟಾರ್ಗೆಟ್ ಮಾಡುತ್ತಿದ್ದರು. ಅದೇ ರೀತಿ ಬ್ಯಾಂಕ್ ಸಾಲ ಮರಳಿ ತೀರಿಸಲು ಫೈನಾನ್ಸ್ ಎದುರು ನೋಡುತ್ತಿದ್ದವರನ್ನು ಹುಡುಕುತ್ತಿದ್ದರು. ಬಿಲ್ಡರ್ ಆಗಿರುವ​ ಪಾರ್ಥಸಾರಥಿ ಖಾಸಗಿ ಬ್ಯಾಂಕ್​ನಲ್ಲಿ ಸುಮಾರು 1.75 ಕೋಟಿ ಸಾಲ ಪಡೆದು ವಾಪಸ್​ ತೀರಿಸಲಾಗದೆ ಪರದಾಡುತ್ತಿದ್ದರು. ಇದೆಲ್ಲದರ ಬಗ್ಗೆ ತಿಳಿದುಕೊಂಡಿದ್ದ ಆರೋಪಿಗಳಾದ ಮನ್ನಾ ಶರಣು, ವಿಷ್ಣುರಾಜನ್​ ಹಾಗೂ ಪ್ರವೀಣ್​ ಸಾಲವನ್ನು ನೀಡುವುದಾಗಿ ಇವರನ್ನು ಸಂಪರ್ಕಿಸಿ ಪಾರ್ಥಸಾರಥಿ ಬಳಿ ಹಣದ ವರ್ಗಾವಣೆಗಾಗಿ, ಅವರಿಂದ ಖಾಲಿ ಚೆಕ್​ಗಳನ್ನ ಹಾಗೂ ಇನ್ನಿತರ ದಾಖಲೆಗಳನ್ನು ಪಡೆದಿದ್ದರು.

ದಾಖಲಾತಿಗಳನ್ನು ಪಡೆದ ಆರೋಪಿಗಳು ನಂತರ ನಮ್ಮ ಬಳಿ 13 ಕೋಟಿ ರೂಪಾಯಿ ನಗದು ಹಣವಿದೆ, ಅದನ್ನ ಸಾಲವಾಗಿ ಪಡೆದರೆ ನಿಮಗೆ 5% ರಿಯಾಯಿತಿ ನೀಡುವುದಾಗಿ ನಂಬಿಸಿದ್ದರು. ನಂತರ ಪ್ರೊಸೆಸಿಂಗ್ ಶುಲ್ಕವಾಗಿ ಪಾರ್ಥಸಾರಥಿಯವರಿಂದ 27 ಲಕ್ಷ ರೂ ಹಣವನ್ನು ಪಡೆದುಕೊಂಡಿದ್ದರು. ಇದಕ್ಕೆ ನಂಬಿಕೆ ಬರುವಂತೆ ನಾಟಕವಾಡಿದ ಆರೋಪಿಗಳು ಮುಂಗಡ ಹಣವಾಗಿ 1 ಕೋಟಿ ರೂಪಾಯಿ ಕೊಡುವುದಾಗಿ ಸೂಟ್​ಕೇಸಿನ ಮೇಲ್ಭಾಗದಲ್ಲಿ ಮಾತ್ರ ಅಸಲಿ ನೋಟುಗಳನ್ನು ಇರಿಸಿ ಕೆಳ ಭಾಗದಲ್ಲಿ 1 ಕೋಟಿ ರೂ. ನಕಲಿ ಹಣವನ್ನ ನೀಡಿದ್ದರು.

ಜಯನಗರ ಪೊಲೀಸ್​ ಠಾಣೆಯಲ್ಲಿ‌ ಪ್ರಕರಣ: ಹಣ ಪಡೆದಿದ್ದ ಪಾರ್ಥಸಾರಥಿ ಮನೆಗೆ ಕೊಂಡೊಯ್ದು ಹಣವನ್ನು ಪರಿಶೀಲಿಸಿದಾಗ ನಕಲಿ ನೋಟುಗಳನ್ನು ನೀಡಿರುವುದು ತಿಳಿದುಬಂದಿತ್ತು. ಈ ಬಗ್ಗೆ ಹಣ ನೀಡಿದ್ದವರನ್ನು ಪ್ರಶ್ನಿಸಲು ಹೋದಾಗ ನಾವು ಅಸಲಿ‌ ನೋಟು ಕೊಟ್ಟಿದ್ದೇವೆ, ನೀವೇ ನಕಲಿ‌ ನೋಟುಗಳನ್ನು ತಂದಿದ್ದೀರಿ ಎಂದು ಧಮ್ಕಿ ಹಾಕಿ ಪಾರ್ಥಸಾರಥಿಯವರನ್ನು ಬೆದರಿಸಿ‌ ಕಳುಹಿಸಿದ್ದರು. ಈ ಬಗ್ಗೆ ಜಯನಗರ ಪೊಲೀಸ್​ ಠಾಣೆಯಲ್ಲಿ‌ ಮೋಸ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಸಾಲ ಕೊಡುವುದಾಗಿ ನಕಲಿ ನೋಟು ನೀಡಿ ವಂಚನೆ: ಬೆಂಗಳೂರಲ್ಲಿ ಮೂವರು ಆರೋಪಿಗಳ ಬಂಧನ

Last Updated : Jul 25, 2023, 6:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.