ಬೆಂಗಳೂರು: ಕೊರೊನಾ ಗುಣಪಡಿಸಲು ಹೋಗಿ ವೈದ್ಯರಿಗೆ ಸೋಂಕು ತಗುಲಿ ಸಾವಿಗೀಡಾಗಿದ್ದಾರೆ ಎಂಬುದಾಗಿ ತಮ್ಮ ಬಗ್ಗೆ ಬರೆಯಲಾಗಿದ್ದ ಸುಳ್ಳು ಪೋಸ್ಟ್ ನೋಡಿ ಖುದ್ದು ಅವರೇ ಶಾಕ್ ಆಗಿದ್ದಾರೆ.
ಭಾರತ ಮೂಲದ ವೈದ್ಯ ಡಾ. ರಿಯಾಸ್ ಉಸ್ಮಾನ್ ದುಬೈನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ದೆಹಲಿಯ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ನೀಡುವ ವೇಳೆ ಇವರು ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಮಾಹಿತಿ ಹರಿಬಿಡಲಾಗಿದೆ.
ಇದನ್ನು ಕಂಡು ಬೆಚ್ಚಿಬಿದ್ದ ವೈದ್ಯ , ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನನಗೆ ಏನೂ ಆಗಿಲ್ಲ. ನಾನು ದುಬೈನಲ್ಲಿ ಕ್ಷೇಮವಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.