ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಸಹಿ ಇರುವ ನಕಲಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಈಗ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ.ಇಬ್ರಾಹಿಂ ಅವರನ್ನು ವಜಾಗೊಳಿಸಲಾಗಿದೆ ಎಂಬ ಪ್ರಕಟಣೆ ಪತ್ರವೊಂದು ಇಂದು ವೈರಲ್ ಆಗಿದೆ.
ಇಬ್ರಾಹಿಂ ಅವರನ್ನು ಜಾತ್ಯಾತೀತ ಜನತಾ ದಳದ ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರ ಲೆಟರ್‌ಹೆಡ್ ಜತೆಗೆ ಅವರ ಸಹಿ ಇರುವ ಪತ್ರಿಕಾ ಪ್ರಕಟಣೆ ವೈರಲ್ ಆಗಿದೆ. ಮೇಲ್ನೋಟಕ್ಕೆ ಇದೊಂದು ನಕಲಿ ಪತ್ರ ಎನ್ನುವುದು ಗೊತ್ತಾಗಿದೆ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಉಚ್ಛಾಟನೆ ಪತ್ರ ವೈರಲ್ ಮಾಡಿದ್ದಕ್ಕೆ ಇಬ್ರಾಹಿಂ ಅವರನ್ನು ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಲಾಗಿದೆ ಎನ್ನುವ ನಕಲಿ ಪತ್ರವನ್ನು ಸೃಷ್ಟಿಸಲಾಗಿದೆ.
ಸೋಮವಾರ ಸಮಾನಮನಸ್ಕ ಮುಖಂಡರೊಂದಿಗೆ ಇಬ್ರಾಹಿಂ ಸಭೆ ನಡೆಸಿದ್ದರು. ಪಕ್ಷದ ಅಧ್ಯಕ್ಷರು ಮತ್ತು ನಾಯಕರೊಂದಿಗೆ ಚರ್ಚಿಸದೆ ಬಿಜೆಪಿಯೊಂದಿಗೆ ಮೈತ್ರಿ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಹೆಚ್ಡಿಕೆ, ನಿಖಿಲ್ ಉಚ್ಛಾಟನೆ ನಕಲಿ ಪತ್ರ ವೈರಲ್; ಇಬ್ರಾಹಿಂ ಬಂಡಾಯದ ಹಿಂದೆ ಕಾಂಗ್ರೆಸ್ ಕೈವಾಡ ಎಂದ ಜಿಟಿಡಿ