ಬೆಂಗಳೂರು: ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಹೆಸರಿನಲ್ಲಿ ಫೇಕ್ ಫೇಸ್ಬುಕ್ ಅಕೌಂಟ್ ಮಾಡಿ ಹಣ ಕಬಳಿಸುತ್ತಿದ್ದ ಸೈಬರ್ ಖದೀಮರ ವಿರುದ್ಧ ಬೆಂಗಳೂರು ಸೈಬರ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಹೆಸರಿನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ, ಅವರ ಫೋಟೋ ಬಳಸಿಕೊಂಡು ಸೈಬರ್ ಖದೀಮರು ಹಣ ಪೀಕುತ್ತಿದ್ದಾರೆ. ಸಕೋಲಿನ್ ಚೌದ್ರಿ ಶರ್ಮಾ ಎಂಬ ಫೇಸ್ಬುಕ್ ಅಕೌಂಟ್ಗೆ ಡಿ.ರೂಪಾ ಅವರ ಫೋಟೋ ಬಳಸಿ ಹಲವು ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ನಂತರ ಮೆಸ್ಸೇಂಜರ್ನಲ್ಲಿ ನಾನು ಅಸ್ಸೋಂ ಸಿವಿಲ್ ಸರ್ವಂಟ್ ಎಂದು ಸಂದೇಶ ಕಳುಹಿಸಿ, ಮೊಬೈಲ್ ನಂಬರ್ ಪಡೆಯುತ್ತಿದ್ದರು. ಬಳಿಕ 4-5 ವಾಟ್ಸ್ಆ್ಯಪ್ ಗ್ರೂಪ್ ಮೂಲಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಡಿ. ರೂಪಾ ದೂರು ನೀಡಿದ್ದಾರೆ.
ಇದನ್ನೂ ಓದಿ:ಬ್ರಿಟನ್ನಿಂದ ಬಳ್ಳಾರಿಗೆ ಆಗಮಿಸಿದ 15 ಮಂದಿ : ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಡಳಿತ ಸಿದ್ಧತೆ
ತದನಂತರ ಚಾರಿಟೇಬಲ್ ಟ್ರಸ್ಟ್ಗೆ ಹಣ ನೀಡುವಂತೆ ಗ್ರೂಪ್ನಲ್ಲಿ ವಾಯ್ಸ್ ಮೆಸ್ಸೇಜ್ ಮಾಡುತ್ತಾರೆ. ಚಾರಿಟೇಬಲ್ ಟ್ರಸ್ಟ್ಗೆ ಹಣ ನೀಡುವಂತೆ ಕೇಳುತ್ತಾರೆ. ಇದನ್ನು ನಂಬಿದ ಹಲವಾರು ಜನ ಹಣವನ್ನು ಕಳುಹಿಸುತ್ತಿದ್ದರು. ಈ ಬಗ್ಗೆ ಇದೀಗ ಗೃಹ ಇಲಾಖೆ ಕಾರ್ಯದರ್ಶಿ ಡಿ.ರೂಪಾ ಅವರಿಗೆ ಮಾಹಿತಿ ದೊರಕಿದ್ದು, ಬೆಂಗಳೂರು ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.