ETV Bharat / state

ಸಿಬಿಐ ಅಧಿಕಾರಿ ಎಂದು ಹೇಳಿ ಹಣ ಪೀಕುತ್ತಿದ್ದವನ ಅಸಲಿಯತ್ತು ಬಯಲು: ಎರಡು ಬೆಂಜ್​ ಕಾರು ವಶಕ್ಕೆ

ಮಹಾನಗರ ಸಿಸಿಬಿ ಪೊಲೀಸರಿಂದು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಪ್ರತಿಷ್ಠಿತ ಶ್ರೀಮಂತ ವ್ಯಕ್ತಿಗಳಿಂದ ಹಣ ಪೀಕುತ್ತಿದ್ದ ನಕಲಿ ಸಿಬಿಐ ಅಧಿಕಾರಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಶ್ರೀಮಂತರಿಂದ ಹಣ ವಸೂಲಿ ಮಾಡಿ ಶೋಕಿ ಜೀವನ ನಡೆಸುತ್ತಿದ್ದ ಆರೋಪಿ ಸಿಸಿಬಿ ಬಲೆಗೆ ಬಿದ್ದಿದ್ದಾನೆ.

ನಕಲಿ ಪೊಲೀಸಪ್ಪನ ಬಂಧನ
author img

By

Published : Nov 22, 2019, 12:11 PM IST

ಬೆಂಗಳೂರು: ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಶ್ರೀಮಂತ ವ್ಯಕ್ತಿಗಳಿಂದ ಹಣ ಪೀಕುತ್ತಿದ್ದ ನಕಲಿ ಸಿಬಿಐ ಅಧಿಕಾರಿಯನ್ನು ಬಂಧಿಸುವಲ್ಲಿ ಸಿಲಿಕಾನ್​ ಸಿಟಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಭಿಲಾಷ್(34) ಬಂಧಿತ ಆರೋಪಿ. ಈತ ನಗರದ ಖಾಸಗಿ ಹೋಟೆಲ್ ನಲ್ಲಿ ವಾಸವಿದ್ದು, ಶ್ರೀಮಂತ‌ ವ್ಯಕ್ತಿಗಳನ್ನೇ ಟಾರ್ಗೆಟ್ ‌ಮಾಡಿಕೊಂಡು ಅವರ ಹಿನ್ನೆಲೆ ಕಲೆ ಹಾಕುತ್ತಿದ್ದ. ನಂತರ ನಾನು ಸಿಬಿಐ ಎಕಾನಾಮಿಕ್ ಇನ್ ವೆಸ್ಟಿಗೇಷನ್​​ ಆಫೀಸರ್, ನಿಮ್ಮ ಮೇಲೆ ದಾಳಿ ಮಾಡುತ್ತೇನೆ ಎಂದು ಹೆದರಿಸಿ, ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದ.

ಇತ್ತೀಚೆಗೆ ದೇವನಹಳ್ಳಿಯ ನಿವಾಸಿವೋರ್ವನನ್ನು ಹೋಟೆಲ್​ಗೆ ಕರೆಯಿಸಿಕೊಂಡು ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದ. ನಂತರ ಅವರ ಹಿನ್ನೆಲೆ ಕಲೆ ಹಾಕಿ 24 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ. ಈ ವಿಚಾರ ತಿಳಿದ ಸಿಸಿಬಿ ಡಿಸಿಪಿ ರವಿ ದಾಳಿ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

ಸದ್ಯ ನಕಲಿ ಅಧಿಕಾರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಪದವಿ ಮುಗಿಸಿ ಶೋಕಿ ಜೀವನ ನಡೆಸಲು ಅಡ್ಡ ದಾರಿ ಹಿಡಿದಿದ್ದ ಅನ್ನೋದು ತಿಳಿದುಬಂದಿದೆ. ಆರೋಪಿಯಿಂದ ಎರಡು ಬೆಂಜ್​ ಕಾರನ್ನು ಜಪ್ತಿ ಮಾಡಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

Intro:ಫೇಕ್ ನಕಲಿ ಸಿಬಿಐ ಅಧಿಕಾರಿಯ ಬಂಧನ
ಆರೋಪಿಯನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಸಿಬಿಐ

ಬೆಂಗಳೂರಿನಲ್ಲಿ ನಕಲಿ ಸಿಬಿಐ ಅಧಿಕಾರಿಯ ಬಂಧನ ಮಾಡುವಲ್ಲಿ ಸಿಸಿಬಿ ಪೊಲಿಸ್ರು ಯಶಸ್ವಿಯಾಗಿದ್ದಾರೆ .ಅಭಿಲಾಷ್(34) ವರ್ಷ ಬಂಧಿತ ಆರೋಪಿ .ಈತ ನಗರದ ಶ್ಯಾಗ್ರಿಲಾ ಹೋಟೆಲ್ ನಲ್ಲಿ ವಾಸವಿದ್ದು ಶೋಕಿ ಜೀವನ ಮಾಡೋಕ್ಕೆ ಪ್ರತಿಷ್ಠಿತ ಶ್ರೀಮಂತ‌ ವ್ಯಕ್ತಿಗಳನ್ನ ಟಾರ್ಗೆಟ್ ‌ಮಾಡಿಕೊಂಡು ಲೋನ್ ಕೊಡಿಸುವುದಾಗಿ ನಂಬಿಸಿ ನಂತ್ರ ಅವರ ಹಿನ್ನೆಲೆ ಕಲೆ ಹಾಕ್ತಿದ್ದ.

ನಂತ್ರ ಸಿಬಿಐ ಎಕಾನಾಮಿಕ್ ಇನ್ ವೇಸ್ಟ್ಗೇಷನ್ ಆಫಿಸರ್ ನಿಮ್ಮ ಮೇಲೆ ದಾಳಿ ನಡೆಸ್ತಿವಿ ಇಲ್ಲಂದ್ರೆ ಹಣ ನೀಡಿ ಎಂದು ಬೆದರಿಕೆ ಹಾಕ್ತಿದ್ದ. ಇತ್ತಿಚ್ಚೆಗೆ ದೇವನಹಳ್ಳಿಯ ನಿವಾಸಿಯೊಬ್ಬರನ್ನ ಶ್ಯಾಗ್ರಿಲ್ಲಾ ಹೋಟೇಲ್ಗೆ ಕರೆಸಿ ಲೊನ್ ಕೊಡಿಸುವುದಾಗಿ ಮಾತುಕತೆ ಮಾಡಿದ್ದ ನಂತ್ರ ಅವರ ಹಿನ್ನೆಲೆ ಕಲೆ ಹಾಕಿ ನಾನು ಸಿಬಿಐ ಅಧಿಕಾರಿ ನಿಮ್ಮ ಮೇಲೆ ದಾಳಿ ನಡೆಸ್ತಿನಿ 24 ಲಕ್ಷ ಹಣ ನೀಡಿ ಎಂದಿದ್ದಾನೆ. ಈ ವಿಚಾರ ಸಿಸಿಬಿ ಡಿಸಿಪಿ ರವಿ ಅವರಿಗೆ ದೇವನಹಳ್ಳಿ ನಿವಾಸಿ ತಿಳಿಸಿದ್ದು ಡಿಸಿಪಿ ರವಿ ಟೀಂ ದಾಳಿ ನಡೆಸಿ ಆರೋಪಿ ಬಂಧನ ಮಾಡಿದ್ದಾರೆ.

ಸದ್ಯ ಫೇಕ್ ಆಫೀಸರನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಡಿಗ್ರಿ ಮುಗಿಸಿ ಶೋಕಿ ಜಿವನ ನಡೆಸಲು ಅಡ್ಡ ದಾರಿ ಹಿಡಿದಿದ್ದ .ಸದ್ಯ ಈತನ ಬಳಿ ಎರಡು ಬೇನ್ಜ್ ಕಾರು ಇದ್ದು ಇದನ್ನ ಜಪ್ತಿ ಮಾಡಿದ್ದಾರೆ.ಹಾಗೆ ಆರೋಪಿಯನ್ನ ನ್ಯಾಯಾಲಯ ಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಗೆ ಒಳಪಡಿಸಲಿದ್ದಾರೆ

Body:KN_BNG_03_CBI_7204498Conclusion:KN_BNG_03_CBI_7204498

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.