ETV Bharat / state

ವಿದ್ಯಾಗಮ ನಿಂತಿರುವುದರಿಂದ ಮೊಬೈಲ್ ಲ್ಯಾಬ್ ವಿದ್ಯಾರ್ಥಿಗಳಿಗೆ ಅನುಕೂಲಕರ: ಸೂಲಿಬೆಲೆ - Facilitating Mobile Lab is usefull for students

ವಿಜ್ಞಾನದ ಉಪಕರಣಗಳೊಂದಿಗೆ ಮಕ್ಕಳಿದ್ದ ಸ್ಥಳದಲ್ಲಿಯೇ ಪ್ರಯೋಗಗಳನ್ನು ಮಾಡಿ ವೈಜ್ಞಾನಿಕ ಪ್ರಜ್ಞೆ ಬೆಳೆಸುವ ವಿಶಿಷ್ಟ ಯೋಜನೆ ಸ್ಪಾರ್ಕ್​ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ವಿದ್ಯಾರ್ಥಿಗಳು ‌ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಪಾಠ ಮಾಡಲ್ಲಿದ್ದೇವೆ. ನಮ್ಮ ಭಾರತದ ವಿಜ್ಞಾನದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಿದ್ದೇವೆ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

ವಿಶಿಷ್ಟ ಯೋಜನೆ ಸ್ಪಾರ್ಕ್​ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ

author img

By

Published : Oct 15, 2020, 3:28 PM IST

ಬೆಂಗಳೂರು: ಸರ್ಕಾರ ವಿದ್ಯಾಗಮ ನಿಲ್ಲಿಸಿದೆ. ಹೀಗಾಗಿ ‌ಮೊಬೈಲ್ ಲ್ಯಾಬ್ ಮಾಡಿದ್ದೇವೆ. ವಿದ್ಯಾರ್ಥಿಗಳು ‌ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಪಾಠ ಮಾಡಲ್ಲಿದ್ದೇವೆ. ನಮ್ಮ ಭಾರತದ ವಿಜ್ಞಾನದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಿದ್ದೇವೆ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

ವಿಶಿಷ್ಟ ಯೋಜನೆ ಸ್ಪಾರ್ಕ್​ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ
ವಿಶಿಷ್ಟ ಯೋಜನೆ ಸ್ಪಾರ್ಕ್​ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಯುವ ಬ್ರಿಗೇಡ್ ವತಿಯಿಂದ ಭಾರತದ ಮಾಜಿ ರಾಷ್ಟ್ರಪತಿ ಭಾರತರತ್ನ ದಿ. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಜನ್ಮದಿನದ ಪ್ರಯುಕ್ತ ಆಯೋಜಿಸಿರುವ ದ್ವಿಚಕ್ರ ವಾಹನಗಳಲ್ಲಿ ವಿಜ್ಞಾನದ ಉಪಕರಣಗಳೊಂದಿಗೆ ಮಕ್ಕಳಿದ್ದ ಸ್ಥಳದಲ್ಲಿಯೇ ಪ್ರಯೋಗಗಳನ್ನು ಮಾಡಿ ವೈಜ್ಞಾನಿಕ ಪ್ರಜ್ಞೆ ಬೆಳೆಸುವ ವಿಶಿಷ್ಟ ಯೋಜನೆ ಸ್ಪಾರ್ಕ್​ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.

ಈ ಯೋಜನೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಚಕ್ರವರ್ತಿ ಸೂಲಿಬೆಲೆ ಸಮಗ್ರ ವಿವರಣೆ ನೀಡಿ ವಿದ್ಯಾರ್ಥಿಗಳಿಗೆ ಯಾವ ರೀತಿ ಪ್ರಯೋಜನ ಆಗಲಿದೆ ಎನ್ನುವ ಮಾಹಿತಿ ನೀಡಿದರು. ಸಿಎಂ ಕೂಡ ಕುತೂಹಲದಿಂದ ಎಲ್ಲವನ್ನೂ ವೀಕ್ಷಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಕೊರೊನಾ ಏನನ್ನು ನುಂಗಿದೆಯೋ ಗೊತ್ತಿಲ್ಲ. ವಿದ್ಯಾರ್ಥಿಗಳ ಭವಿಷ್ಯವನ್ನಂತೂ ನುಂಗುತ್ತಿದೆ. ಅದಾಗಲೇ ವಿದ್ಯಾಗಮವನ್ನು ಸರ್ಕಾರ ಮರಳಿ ಇನ್ಕ್ಯುಬೇಟರ್​ಗೆ ಕಳಿಸಿದೆ. ಈಗ ಸಮಾಜವಾಗಿ ಆ ಪೀಳಿಗೆಯ ವಿದ್ಯಾಭ್ಯಾಸದ ಜವಾಬ್ದಾರಿ ನಿಸ್ಸಂಶಯವಾಗಿ ನಮ್ಮೆಲ್ಲರ ಹೊಣೆ. ಈ ಕಾರಣಕ್ಕೆ ಯುವಬ್ರಿಗೇಡ್ ಚಾಮರಾಜನಗರದ ದೀನಬಂಧು ಟ್ರಸ್ಟ್‌ನ ಸಹಯೋಗದೊಂದಿಗೆ ಸ್ಪಾರ್ಕ್ ಎನ್ನುವ ಯೋಜನೆಯನ್ನು ಇಂದಿನಿಂದ ಆರಂಭಿಸಿದೆ. ಇದನ್ನು ಸ್ವತಃ ಮುಖ್ಯಮಂತ್ರಿ ಯಡಿಯೂಪ್ಪ ಉದ್ಘಾಟಿಸಿರುವುದು ಸಂತಸದ ಸಂಗತಿ ಎಂದರು.

ದ್ವಿಚಕ್ರ ವಾಹನ ಸವಾರನೊಬ್ಬ ತನ್ನ ಹಿಂದೆ ಇರುವ ಡಬ್ಬವೊಂದರಲ್ಲಿ 40ಕ್ಕೂ ಹೆಚ್ಚು ಪ್ರಾಯೋಗಿಕ ಸಾಮಗ್ರಿಗಳನ್ನು ತುಂಬಿಸಿಕೊಂಡು ಹಳ್ಳಿ-ಹಳ್ಳಿಗೆ ಹೋಗಬಹುದಲ್ಲದೇ ನಾಲ್ಕಾರು ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ವಿಜ್ಞಾನವನ್ನು ಪ್ರಯೋಗದ ಮೂಲಕ ವಿವರಿಸಬಹುದು. ಆ ಮೂಲಕ ಶಾಲೆ ಇಲ್ಲವಾದಾಗಲೂ ಆ ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿ ಹೆಚ್ಚಿಸಲು ಸಹಕರಿಸಬಹುದು. ಇದರ ಜೊತೆಗೆ, ಭಾರತದ ವೈಜ್ಞಾನಿಕ ಮತ್ತು ಗಣಿತೀಯ ಸಾಧನೆಗಳನ್ನು ಪರಿಚಯಿಸುವ ಪುಟ್ಟದೊಂದು ಪ್ರದರ್ಶನವೂ ಇದರಲ್ಲಿ ಸೇರಿದೆ. ವಿಜ್ಞಾನದ ವಿದ್ಯಾರ್ಥಿಯಾದವ, ಸ್ವಲ್ಪಮಟ್ಟಿಗೆ ಮಕ್ಕಳನ್ನು ಸಂಭಾಳಿಸಲು ಬಲ್ಲವ ಈ ಪೆಟ್ಟಿಗೆಯೊಂದಿಗೆ ನೂರಾರು ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿಯನ್ನು ಹುಟ್ಟಿಸಿಬಿಡಬಲ್ಲ, ಹಾಗೆಯೇ ಇದನ್ನು ರೂಪುಗೊಳಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಜಿಲ್ಲೆಗೊಂದು ಈ ಬಗೆಯ ಪೆಟ್ಟಿಗೆಯನ್ನು ಮಾಡಿಕೊಟ್ಟು ಶಿಕ್ಷಣದಿಂದ ಯಾರೂ ವಂಚಿತರಾಗದಂತೆ ಪ್ರಾಮಾಣಿಕ ಪ್ರಯತ್ನವನ್ನು ನಾವೆಲ್ಲರೂ ಮಾಡುತ್ತೇವೆ. ಈ ಯೋಜನೆಯಲ್ಲಿ ಭಾಗಿಯಾಗಬೇಕೆಂದವರು ಸಂಪರ್ಕಿಸಿ ಎಂದು ದೂರವಾಣಿ ಸಂಖ್ಯೆ( 8660572670) ಯನ್ನು ನೀಡಿದ್ದಾರೆ.

ಕಳೆದ ವರ್ಷ ‌ಉತ್ತರ ಕರ್ನಾಟಕದಲ್ಲಿ ‌ಭಾರಿ‌ಮಳೆಯೆಗಿತ್ತು.ಮಳೆಯಿಂದ ‌ಶಾಲೆಗಳು ಹಾನಿಯಾಗಿದ್ದವು.ಯುವ ಬ್ರಿಗೇಡ್ ನಿಂದ 10 ಶಾಲೆ‌ ದತ್ತು ತೆಗೆದುಕೊಂಡಿದ್ದೆವು.ಅವುಗಳಿಗೆ ಸುಣ್ಣ ಬಣ್ಣ ಬಳೆಯುವ ಕೆಲಸ ಮಾಡಿದ್ದೇವೆ.ಆದರೆ ಕೊರೊನಾ ಇರುವುದರಿಂದ ಶಾಲೆ ಆರಂಭವಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.