ಬೆಂಗಳೂರು: ಕೋವಿಡ್ ಸಂಬಂಧ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆಯನ್ನು ನಡೆಸುವ ಕಾರ್ಯಕ್ಕೆ ನಿಯೋಜಿಸಲಾಗಿರುವ ಶಿಕ್ಷಕರಿಗೆ ಸಂಚಾರ ಹಾಗೂ ಸುರಕ್ಷತಾ ಸೌಲಭ್ಯಗಳನ್ನು ಒದಗಿಸುವಂತೆ ಸಚಿವ ಸುರೇಶ್ ಕುಮಾರ್ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ವಿಶೇಷವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕಷ್ಟು ಸರ್ಕಾರಿ ಮತ್ತು ಅನುದಾನಿತ ಶಿಕ್ಷಕರು ಲಭ್ಯವಿಲ್ಲದೆ ಇರುವ ಕಾರಣ ಅನುದಾನ ರಹಿತ ಶಿಕ್ಷಕರನ್ನು ಸಹ ಈ ಸೇವೆಗೆ ಬಳಸಿಕೊಳ್ಳಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಆದರೆ, ಬಹುಪಾಲು ಶಿಕ್ಷಕರುಗಳಿಗೆ ಅವರ ವಾಸಸ್ಥಳದಿಂದ ಬಹಳ ದೂರದಲ್ಲಿ ಈ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
![facilitate-teachers-who-assigned-to-the-covid-19-survey](https://etvbharatimages.akamaized.net/etvbharat/prod-images/kn-bng-6-teachers-surway-script-7201801_11052020191028_1105f_1589204428_800.jpg)
50 ವರ್ಷ ಮೀರಿದ ಶಿಕ್ಷಕರುಗಳು ಯಾವುದೇ ಪ್ರಯಾಣ ಸೌಲಭ್ಯ ಸುರಕ್ಷತಾ ಸೌಲಭ್ಯಗಳಿಲ್ಲದೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದಾರೆ.ಹೀಗಾಗಿ, ಕನಿಷ್ಟ ಸೌಲಭ್ಯವನ್ನು ಕಲ್ಪಿಸಿ ಅಂತ ಮನವಿ ಮಾಡಲಾಗಿದೆ.