ETV Bharat / state

ಶಿಕ್ಷಕ - ಪದವೀಧರ ಕ್ಷೇತ್ರದ ಚುನಾವಣೆ ಮತದಾನದ ಅವಧಿ ವಿಸ್ತರಿಸಿ: ಬಿಜೆಪಿ ಮನವಿ

ಜೂ.13 ರಂದು ಶಿಕ್ಷಕರ ಎರಡು ಕ್ಷೇತ್ರಕ್ಕೆ ಹಾಗೂ ಪದವೀಧರರ ಎರಡು ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಆಗಿದೆ. ಈ ಹಿನ್ನೆಲೆ ಕೆಲ ಸಾಂದರ್ಭಿಕ ಸಮಸ್ಯೆಗಳಿಂದ ಮತದಾನದ ಅವಧಿ ವಿಸ್ತರಣೆ ಮಾಡಬೇಕು ಎಂದು ಬಿಜೆಪಿ ಮನವಿ ಮಾಡಿಕೊಂಡಿದೆ.

Request the election Commission to extend the voting period
ಮತದಾನದ ಅವಧಿ ವಿಸ್ತರಿಸುವಂತೆ ಆಯೋಗಕ್ಕೆ ಮನವಿ
author img

By

Published : Jun 3, 2022, 6:12 PM IST

ಬೆಂಗಳೂರು: ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯ ಮತದಾನದ ಅವಧಿ ವಿಸ್ತರಣೆ ಮಾಡುವಂತೆ ರಾಜ್ಯ ಬಿಜೆಪಿ ವತಿಯಿಂದ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪಕ್ಷದ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹಾಗೂ ಚುನಾವಣಾ ಆಯೋಗ ವಿಭಾಗದ ರಾಜ್ಯ ಸಂಚಾಲಕ ದತ್ತಗುರು ಹೆಗಡೆ ಅವರು ಈ ಕುರಿತು ಮನವಿ ಸಲ್ಲಿಸಿದರು.

ಚುನಾವಣೆ ಘೋಷಣೆ: ನಂತರ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಇದೇ ತಿಂಗಳು 13 ರಂದು ಶಿಕ್ಷಕರ ಎರಡು ಕ್ಷೇತ್ರಕ್ಕೆ ಹಾಗೂ ಪದವೀಧರರ ಎರಡು ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಆಗಿದೆ. ಈ ಹಿನ್ನೆಲೆ ಕೆಲ ಸಾಂದರ್ಭಿಕ ಸಮಸ್ಯೆಗಳಿಂದ ಮತದಾನದ ಅವಧಿ ವಿಸ್ತರಣೆ ಸೂಕ್ತ ಅನ್ನಿಸುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಶಿಕ್ಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಮತದಾನದ ಅವಧಿ ವಿಸ್ತರಿಸುವಂತೆ ಆಯೋಗಕ್ಕೆ ಮನವಿ

ಮತದಾನದ ಅವಧಿ ವಿಸ್ತರಿಸುವಂತೆ ಆಯೋಗಕ್ಕೆ ಮನವಿ: ಹಲವು ಶಿಕ್ಷಕರು ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾವಣೆಯ ಅರ್ಹತೆ ಹೊಂದಿದ್ದು, ಶಿಕ್ಷಕ ಕ್ಷೇತ್ರದ ಅಭ್ಯರ್ಥಿಗೆ ಮತ್ತು ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸುತ್ತಾರೆ. ರಾಜ್ಯದ ಹಲವು ಮತಗಟ್ಟೆಗಳ ಕೋಣೆಯಲ್ಲಿ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಹಾಕಬೇಕಾದ ಸಂದರ್ಭದಲ್ಲಿ ಒಬ್ಬ ಮತದಾರ ಮತದಾನದ ಕೋಣೆಯಿಂದ ಹೊರ ಬರುವ ಸಮಯ ವಿಳಂಬವಾಗುತ್ತದೆ. ಹಾಗಾಗಿ ಮತದಾನದ ಅವಧಿ ವಿಸ್ತರಿಸುವಂತೆ ಆಯೋಗಕ್ಕೆ ಮನವಿ ಮಾಡಿದ್ದಾಗಿ ತಿಳಿಸಿದರು.

ಅರ್ಹತೆ ಪರಿಶೀಲಿಸಿ ಮತದಾನಕ್ಕೆ ಅನುವು: ಕೋವಿಡ್ ನಿಯಮಾನುಸಾರ ಮತದಾನ ಮಾಡುವುದು ಅನಿವಾರ್ಯ ಎನ್ನುವುದು ಹಿಂದಿನ ಅನುಭವದಿಂದ ತಿಳಿಯುವುದು ಬಹಳ ಮುಖ್ಯ. ಹಲವು ಕಡೆ ಮತಗಟ್ಟೆಗಳು ಮತದಾರನ ಊರು - ಮನೆಯಿಂದ 15-20 ಕಿಲೋ ಮೀಟರ್ ದೂರವಿದ್ದು, ಮತದಾನಕ್ಕೆ ಬರಲು ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಶಿಕ್ಷಕರಲ್ಲದವರು, ಪದವೀಧರರಲ್ಲದವರು ನಕಲಿ (ಡುಪ್ಲಿಕೇಟ್) ಮತದಾರರು ಮತದಾನಕ್ಕೆ ಬರುತ್ತಾರೆ ಎಂಬುದನ್ನು ಹಿಂದಿನ ಚುನಾವಣೆಯ ಅನುಭವ ತಿಳಿಸಿದೆ. ಕಾರಣ ಪ್ರತಿಯೊಬ್ಬ ಮತದಾನ ಅರ್ಹತೆಯನ್ನು ಪರಿಶೀಲಿಸಿ ಮತದಾನ ಮಾಡಲು ಅನುವು ಮಾಡಿಕೊಡಬೇಕಾದ ಅನಿವಾರ್ಯತೆಯಿದೆ ಎಂದರು.

ಇದನ್ನೂ ಓದಿ:ರಾಜ್ಯಸಭೆ ಚುನಾವಣೆ ಹಿನ್ನೆಲೆ: ರಾಜ್ಯ ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ

ಶಿಕ್ಷಕ ಅಭ್ಯರ್ಥಿಗೆ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಲು ಎರಡು ಬ್ಯಾಲೆಟ್ ಪೇಪರ್ ಕೊಡಲಾಗುತ್ತದೆ. ಈ ಕೆಲಸಕ್ಕೂ ಸಮಯ ಬೇಕಾಗುತ್ತದೆ. ಎರಡೂ ಕ್ಷೇತ್ರದ ಅಭ್ಯರ್ಥಿಗಳಿಗೆ ಮತದಾನ ಮಾಡುವ ಮತದಾರರು ಎರಡು ಬೆರಳುಗಳಿಗೆ (ತೋರ ಬೆರಳು ಹಾಗೂ ಮಧ್ಯದ ಬೆರಳು) ಶಾಯಿ ಹಾಕಲಾಗುವುದು ಎಂದು ತಿಳಿದಿದೆ. ಆದರೆ, ಶಿಕ್ಷಕ ಕ್ಷೇತ್ರಕ್ಕೆ ಮತ ಚುನಾಯಿಸಿದ ಮತದಾರನಿಗೆ ಯಾವ ಬೆರಳಿಗೆ ಪದವೀಧರ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಿದವರು ಯಾವ ಬೆರಳಿಗೆ ಶಾಯಿ ಹಾಕಿಸಿಕೊಳ್ಳಬೇಕು ಎನ್ನುವ ತಿಳಿವಳಿಕೆ ಮತದಾರನಿಗೆ ಲಭ್ಯವಿಲ್ಲ.

ಹಾಗಾಗಿ ಈ ಎಲ್ಲ ಸಂಗತಿಯನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸೂಕ್ತ ತಿಳಿವಳಿಕೆ ನೀಡಬೇಕು ಹಾಗೂ ಮತದಾನದ ಅವಧಿ ವಿಸ್ತರಣೆ ಮಾಡುವುದು ಅತ್ಯಂತ ನ್ಯಾಯಯುತ. ಈ ದಿಸೆಯಲ್ಲಿ ಯೋಚಿಸಿ ಹೆಚ್ಚಿನ ಸಮಯ ಅಂದರೆ ಬೆಳಗ್ಗೆ 8 ಗಂಟೆಯಿಂದ ಸಾಯಂಕಾಲ 6 ಗಂಟೆಯ ವರೆಗೆ ವಿಸ್ತರಿಸಬೇಕೆಂದು ವಿನಂತಿಸಿರುವುದಾಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.