ಬೆಂಗಳೂರು: ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನಡೆದ ಡಿಟೋನೇಟರ್ ಸ್ಫೋಟ ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಕೋರಿ ಎಫ್ಎಸ್ಎಲ್ ನ ಅಸಿಸ್ಟೆಂಟ್ ಡೈರೆಕ್ಟರ್, ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿನ್ನೆ ನಡೆದ ಅವಘಡದಲ್ಲಿ ಡಿಟೋನೇಟರ್ ಪರೀಕ್ಷೆ ವೇಳೆ ಟ್ಯಾಪ್ಟ್ ಎಂಬ ರಾಸಾಯನಿಕ ವಸ್ತು ಸ್ಫೋಟಗೊಂಡಿತ್ತು ಎನ್ನಲಾಗ್ತಿದೆ. ಇದರ ಪರಿಣಾಮ ಆರು ಮಂದಿ ವಿಜ್ಞಾನಿಗಳು ಗಾಯಗೊಂಡಿದ್ದರು. ಸದ್ಯ ಎಫ್ ಎಸ್ ಎಲ್ ನಲ್ಲಿರುವ ಡಿಟೋನೇಟರ್ಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಸ್ಫೋಟಕ್ಕೆ ನಿರ್ದಿಷ್ಟ ಕಾರಣಗಳೇನು ಎಂಬುದರ ಬಗ್ಗೆ ಮೊದಲು ಎಫ್ಎಸ್ಎಲ್ ವಿಜ್ಞಾನಿಗಳಿಂದ ಆಂತರಿಕ ತನಿಖೆ ನಡೆಸಿ ವರದಿ ಸಿದ್ದಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
ವರದಿಯು ಮಡಿವಾಳ ಪೊಲೀಸರ ಕೈಸೇರಿದ ಬಳಿಕ ಪೊಲೀಸರು ತನಿಖೆ ನಡೆಸಲಿದ್ದಾರೆ.