ETV Bharat / state

ಭಾರತೀಯ ಶೈಲಿಯ ಕರ್ನಾಟಕ ಕುಸ್ತಿ ಸಂಘ ಅಸ್ತಿತ್ವಕ್ಕೆ; ಗೌರವಾಧ್ಯಕ್ಷರಾಗಿ ರುದ್ರೇಶ್‌, ಉಪಾಧ್ಯಕ್ಷರಾಗಿ ಸುರೇಶ್‌ ಚಂದ್ರ ಶೆಟ್ಟಿ - ಈಟಿವಿ ಭಾರತ ಕನ್ನಡ

ಭಾರತೀಯ ಶೈಲಿಯ ಕರ್ನಾಟಕ ಕುಸ್ತಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಗೌರವಾಧ್ಯಕ್ಷರಾಗಿ ಎಂ ರುದ್ರೇಶ್‌, ಉಪಾಧ್ಯಕ್ಷರಾಗಿ ಸುರೇಶ್‌ ಚಂದ್ರ ಶೆಟ್ಟಿ ಹಾಗೂ ಅಧ್ಯಕ್ಷರಾಗಿ ಬಿ ವೀರಣ್ಣ ಆಯ್ಕೆಯಾಗಿದ್ದಾರೆ.

existence of traditional wrestling association of karnataka
ಭಾರತೀಯ ಶೈಲಿಯ ಕರ್ನಾಟಕ ಕುಸ್ತಿ ಸಂಘ ಅಸ್ತಿತ್ವಕ್ಕೆ
author img

By ETV Bharat Karnataka Team

Published : Sep 16, 2023, 11:01 PM IST

ಬೆಂಗಳೂರು: ರಾಜ್ಯದಲ್ಲಿ ಸಾಂಪ್ರದಾಯಿಕ ಕುಸ್ತಿಯನ್ನು ಉತ್ತೇಜಿಸಿ ಪ್ರೋತ್ಸಾಹಿಸಲು ಭಾರತೀಯ ಶೈಲಿಯ ಕರ್ನಾಟಕ ಕುಸ್ತಿ ಸಂಘ ಅಸ್ತಿತ್ವಕ್ಕೆ ಬಂದಿದೆ. ಕುಸ್ತಿಗೆ ಮತ್ತೊಂದು ಹೆಸರಾದ ಕರ್ನಾಟಕದಲ್ಲಿ ಮಣ್ಣಿನ ಕುಸ್ತಿಗೆ ಒತ್ತು ನೀಡುವ ಉದ್ದೇಶದಿಂದ ಭಾರತೀಯ ಶೈಲಿಯ ಕುಸ್ತಿ ಮಹಾಸಂಘದ ಸರ್ವ ಸದಸ್ಯರ ಸಭೆಯಲ್ಲಿ ರಾಜ್ಯದ ಕುಸ್ತಿ ಸಂಘಕ್ಕೆ ಮಾನ್ಯತೆ ನೀಡಿದೆ. ರಾಷ್ಟ್ರೀಯ ಸಂಘದ ಸಂಚಾಲಕ ಮತ್ತು ಪ್ರಧಾನ ಕಾರ್ಯ ಗೌರವ್‌ ರೋಷನ್ ಲಾಲ್ ರಾಜ್ಯ ಸಂಘಕ್ಕೆ ಮಾನ್ಯತೆ ನೀಡಿದರು.

ಈ ಕುರಿತು ಪ್ರೆಸ್ ಕ್ಲಬ್​ನಲ್ಲಿ ನಡೆದ ಮಾಧ್ಯಗೋಷ್ಟಿಯಲ್ಲಿ ನೂತನ ಗೌರವಾಧ್ಯಕ್ಷ ಎಂ ರುದ್ರೇಶ್‌ ಮಾತನಾಡಿ, ಈ ಹಿಂದೆ ರಾಜ್ಯದ ಕುಸ್ತಿ ಸಂಘಕ್ಕೆ ನೀಡಿದ್ದ ಮಾನ್ಯತೆಯನ್ನು ಭಾರತೀಯ ಶೈಲಿಯ ಸಂಘ ಅನರ್ಹತೆಗೊಳಿಸಿತ್ತು. ಈಗ ಹೊಸ ಸಂಘಕ್ಕೆ ಅವಕಾಶ ಕಲ್ಪಿಸಿದ್ದು, ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಒಗ್ಗೂಡಿಸಿ ಸಂಘ ಸ್ಥಾಪನೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದರು.

ನೂತನ ಪದಾಧಿಕಾರಿಗಳು: ಬೆಂಗಳೂರಿನ ಎಂ ರುದ್ರೇಶ್‌ ಗೌರವ ಅಧ್ಯಕ್ಷರಾಗಿ, ಮಂಗಳೂರಿನ ಸುರೇಶ್‌ ಚಂದ್ರ ಶೆಟ್ಟಿ ಹಿರಿಯ ಉಪಾಧ್ಯಕ್ಷ, ದಾವಣಗೆರೆಯ ಬಿ ವೀರಣ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ರಾಮನಗರದ ಕೆ ಎನ್ ವಿಜಯ ಕುಮಾರ್‌ ಪ್ರಧಾನ ಕಾರ್ಯದರ್ಶಿ, ಕಾರ್ಯಾಧ್ಯಕ್ಷರಾಗಿ ಮೈಸೂರಿನ ಅಮೃತ್‌ ಪುರೋಹಿತ್‌, ದೇವನಹಳ್ಳಿ ಮಂಜಣ್ಣ, ಬೆಳಗಾವಿಯ ಹನುಮಂತಪ್ಪ ಮಲಹರಿ ಗುರವ್‌, ಬೆಂಗಳೂರಿನ ಎಸ್ ನಾಗರಾಜ್‌, ಧಾರವಾಡದ ಅಶೋಕ್‌ ಏಣಗಿ, ಬಾಗಲಕೋಟೆಯ ಮಂಜು ಮಾನೆ ಅವರನ್ನು ಉಪಾಧ್ಯಕ್ಷರನ್ನಾಗಿ, ಬೆಳಗಾವಿಯ ಪ್ರದೀಪ್‌ ದೇಸಾಯಿ, ಮೈಸೂರಿನ ವಿಜಯೇಂದ್ರ ಅವರನ್ನು ಜಂಟಿ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: World Father's Day: ಬೀದಿ ಬದಿ ಟೀ ಮಾರಿ ಮೂವರು ಹೆಣ್ಣುಮಕ್ಕಳಿಗೆ ಬದುಕಿನ 'ಕುಸ್ತಿ' ಹೇಳಿಕೊಟ್ಟ ಈ ಅಪ್ಪ!

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮೈಸೂರಿನ ಮೊಹಮದ್‌ ಖಾಸೀಂ, ತುಮಕೂರಿನ ಸೋಲಮನ್‌ ವಿಕ್ಟರ್‌, ಚಿತ್ರದುರ್ಗದ ಭರತ್‌ ಕೆ, ಕೋಲಾರದ ವಿ. ಪ್ರಕಾಶ್‌, ಚಾಮರಾಜನಗರದ ದಿಲೀಪ ಎಸ್‌, ಧಾರವಾಡದ ವಿರೂಪಾಕ್ಷಿ ಉಳುವಪ್ಪ ಹುರಕಡ್ಲಿ, ಬೆಳಗಾವಿಯ ಮೋನಪ್ಪ ಭಾಸ್ಕಲ್‌, ತುಮಕೂರಿನ ಎಚ್. ಎನ್.‌ ದೀಪಕ್‌ ಹಾಗೂ ಸಲಹೆಗಾರರನ್ನಾಗಿ ಮೈಸೂರಿನ ಡಿ.ವಿ. ಪ್ರಹ್ಲಾದ್‌ ರಾವ್‌ ಅವರನ್ನು ನೇಮಿಸಲಾಗಿದೆ.

ರಾಜ್ಯ ಕುಸ್ತಿ ಫೆಡರೇಷನ್​ಗೆ ಚುನಾವಣೆ: 2022ರ ಡಿಸೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯ ಕುಸ್ತಿ ಫೆಡರೇಷನ್‌ಗೆ ಹೊಸ ಸಮಿತಿಯನ್ನು ಆಯ್ಕೆ ಮಾಡಲಾಗಿತ್ತು. ಬೆಳ್ಳಿಪಾಡಿ ಗುಣರಂಜನ್ ಶೆಟ್ಟಿ ಫೆಡರೇಷನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕುಸ್ತಿ ಫೆಡರೇಷನ್ ಆಫ್ ಇಂಡಿಯಾದ ಮೇಲುಸ್ತುವಾರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.

ಇದನ್ನೂ ಓದಿ: WFI Election: ಕುಸ್ತಿ ಫೆಡರೇಶನ್ ಚುನಾವಣೆಗೆ ಪಂಜಾಬ್-ಹರಿಯಾಣ ಹೈಕೋರ್ಟ್ ತಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.