ಬೆಂಗಳೂರು: ಕೇಂದ್ರ ಗೃಹ ಇಲಾಖೆ ವಿತರಿಸುವ ಎಕ್ಸಲೆನ್ಸ್ ಇನ್ ಇನ್ವೆಷ್ಟಿಗೇಷನ್ ಫಾರ್ ಇಯರ್-2020 ಪ್ರಶಸ್ತಿಯನ್ನು ದೇಶದ 121 ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿದ್ದು, ಕರ್ನಾಟಕದ ನಾಲ್ವರು ಅಧಿಕಾರಿಗಳು ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
![Excellence in Investigation Award for four police officers in the state](https://etvbharatimages.akamaized.net/etvbharat/prod-images/kn-bng-06-police-award-7202806_13082020181904_1308f_1597322944_180.png)
ರಾಜ್ಯದ ಅಧಿಕಾರಿಗಳಾದ ಎಸಿಪಿ ಸುಧೀರ್ ಎಂ.ಹೆಗಡೆ, ಡಿವೈಎಸ್ಪಿ ಅಶೋಕ ಡಿ., ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ಡಿ.ಎಂ., ಹೆಡ್ ಕಾನ್ಸ್ಸ್ಟೇಬಲ್ ಶ್ರೀಧರ್ ಎಚ್.ಎಸ್. ಅವರಿಗೆ ಲಭಿಸಿದೆ.
ದೇಶಾದ್ಯಂತ 121 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ಲಭಿಸಿದ್ದು, ಅದರಲ್ಲಿ ರಾಜ್ಯದ ನಾಲ್ವರಿಗೆ ಪ್ರಶಸ್ತಿ ಒಲಿದು ಬಂದಿದೆ. ಇದರಿಂದಾಗಿ ರಾಜ್ಯ ಪೊಲೀಸ್ ಇಲಾಖೆ ಗೌರವಕ್ಕೆ ಪಾತ್ರವಾಗಿದೆ.
![Excellence in Investigation Award for four police officers in the state](https://etvbharatimages.akamaized.net/etvbharat/prod-images/kn-bng-06-police-award-7202806_13082020181904_1308f_1597322944_456.png)