ETV Bharat / state

ಕಮಲ ಮುಡಿದ ಮಧ್ಯಪ್ರದೇಶದ 22 ಬಂಡಾಯ ಶಾಸಕರು

author img

By

Published : Mar 21, 2020, 5:46 PM IST

ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರದ ಪತನದ ಬಳಿಕ ಬೆಂಗಳೂರಿನ ರೇಸಾರ್ಟ್​ನಲ್ಲಿ ತಂಗಿದ್ದ ರೆಬೆಲ್​ ಶಾಸಕರು ಇಂದು ಭೋಪಾಲ್​ಗೆ ವಾಪಸ್​​ ಆಗಿದ್ದು,ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಭೇಟಿ ಮಾಡಿ ಕೇಸರಿ ಪಕ್ಷ ಸೇರಿದರು.

Ex-rebel Congress MLAs to return to Bhopal from Bengaluru
ರಾಜ್​ನಾಥ್​​​​​ ರಾಜೀನಾಮೆ ಬೆನ್ನಲ್ಲೇ ಭೋಪಾಲ್​ಗೆ ತೆರಳಿದ ರೆಬೆಲ್​ ಶಾಸಕರು

ಬೆಂಗಳೂರು: ಕಳೆದೆರಡು ವಾರಗಳಿಂದ ನಗರದ ರೆಸಾರ್ಟ್‌ನಲ್ಲಿ ತಂಗಿದ್ದ ಮಧ್ಯಪ್ರದೇಶದ ಸುಮಾರು 22 ಮಾಜಿ ಬಂಡಾಯ ಕಾಂಗ್ರೆಸ್ ಶಾಸಕರು ಚಾರ್ಟರ್ಡ್ ವಿಮಾನದಲ್ಲಿ ಭೋಪಾಲ್‌ಗೆ ತೆರಳಿದ್ದರು. ಇದೀಗ ಅವರು ನವದೆಹಲಿಯಲ್ಲಿ ಪ್ರತ್ಯಕ್ಷರಾಗಿದ್ದು, ಕೇಸರಿ ಪಡೆ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ನಿವಾಸದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಸಮ್ಮುಖದಲ್ಲಿ ಕಮಲ ಮುಡಿದಿದ್ದಾರೆ.

ಕಾಂಗ್ರೆಸ್ ಪಕ್ಷದ 22 ಜನ ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ರಾಜೀನಾಮೆ ನೀಡಿದ್ದರು. ಈ ಮೂಲಕ ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅಧಿೃಕತವಾಗಿ ಪತನಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬಂಡಾಯ ಶಾಸಕರು ಭೋಪಾಲ್​ಗೆ ಹೊಂದಿರುಗಿದ್ದಾರೆ ಎಂದು ಮಾಧ್ಯಮಗಳಿಗೆ ಪಕ್ಷದ ಮೂಲಗಳು ತಿಳಿಸಿವೆ.

ಇವರಲ್ಲಿ ಕಮಲ್ ನಾಥ್ ಮತ್ತು ಪಕ್ಷದ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಅವರೊಂದಿಗೆ ಆಡಳಿತ ಮತ್ತು ಪಕ್ಷದ ಭಿನ್ನಾಭಿಪ್ರಾಯಗಳಿಂದ ಮಾರ್ಚ್ 11 ರಂದು ಜ್ಯೋತಿರಾದಿತ್ಯ ನವದೆಹಲಿಯಲ್ಲಿ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಬಳಿಕ ಅದೇ ದಿನ ಬಿಜೆಪಿ ಸೇರಿಕೊಂಡಿದ್ದರು. ಇನ್ನು ಮತ್ತೊಬ್ಬ ಮಾಜಿ ಬಂಡಾಯ ಶಾಸಕ ಸುರೇಶ್ ಧಂಕರ್, ಅವರು ಕುಟುಂಬದ ಸದಸ್ಯರು ವಿಧಿವಶರಾದ ಹಿನ್ನೆಲೆಯಲ್ಲಿ ಶುಕ್ರವಾರ ಭೋಪಾಲ್​ಗೆ ತೆರಳಿದ್ದರು. ಉಳಿದವರು ಇಂದು ನವದೆಹಲಿಗೆ ತೆರಳಿ ಕಮಲ ಮುಡಿದಿದ್ದಾರೆ.

ಸಭಾಧ್ಯಕ್ಷರಾದ ನರ್ಮದಾ ಪ್ರಸಾದ್ ಪ್ರಜಾಪತಿ ಅವರು ಗುರುವಾರ 16 ಜನರ ರಾಜೀನಾಮೆಯನ್ನು ಅಂಗೀಕರಿಸಿದ ಹಿನ್ನೆಲೆಯಲ್ಲಿ ರೆಬಲ್​ ಶಾಸಕರು ಸಂತಸ ವ್ಯಕ್ತಪಡಿಸಿದ್ದು, ಈ ಮೂಲಕ 15 ತಿಂಗಳಿಂದ ಸುಭದ್ರವಾಗಿದ್ದ ಕಾಂಗ್ರೆಸ್​ ಸರ್ಕಾರದ ಪತನಕ್ಕೆ ನಾಂದಿ ಹಾಡಿದರು.

ಮಾರ್ಚ್ 10ರಂದು ಕಮಲ್ ನಾಥ್ ಅವರ ಶಿಫಾರಸಿನ ಮೇರೆಗೆ ರಾಜ್ಯಪಾಲ ಲಾಲ್ಜಿ ಟಂಡನ್ ಅವರನ್ನು ಸಂಪುಟದಿಂದ ವಜಾಗೊಳಿಸಿದ ಬಳಿಕ ಮಾರ್ಚ್ 14 ರಂದು ಸ್ಪೀಕರ್ 6 ಜನರ ರಾಜೀನಾಮೆಯನ್ನು ಅಂಗೀಕರಿಸಿದ್ದರು. ಈ ಎಲ್ಲಾ ಡ್ರಾಮಾದ ಬಳಿಕ ಸಿಎಂ ಕಮಲ್ ನಾಥ್ ರಾಜೀನಾಮೆ ನೀಡಿ ಪದತ್ಯಾಗ ಮಾಡಿದರು. ಇಷ್ಟಾದರೂ ರೆಬಲ್​ ಶಾಸಕರು ಯಾವುದೇ ಮಾಧ್ಯಮಗಳೊಂದಿಗೆ ಸಂವಹನ ನಡೆಸಿರಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.