ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಇಂದೂ ಕೂಡ ಎಸ್ಐಟಿ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಈ ಹಿಂದೆ ಅನಾರೋಗ್ಯ ಕಾರಣ ಹೇಳಿ ವಿಚಾರಣೆಗೆ ಗೈರಾಗಿದ್ದ ರೋಷನ್ ಬೇಗ್ ಎಸ್ಐಟಿ ನಾಲ್ಕನೇ ಬಾರಿಗೆ ನೋಟಿಸ್ ಜಾರಿ ಮಾಡಿತ್ತು.
ಮತ್ತೊಂದೆಡೆ ಇಂದು ಪ್ರಕರಣದ ಮುಖ್ಯ ಆರೋಪಿ ಮನ್ಸೂರ್ ಖಾನ್ ಕಸ್ಟಡಿ ಅಂತ್ಯವಾಗಲಿದೆ. ಮಧ್ಯಾಹ್ನ 3 ಗಂಟೆಗೆ ಕೋರ್ಟ್ ಎದುರು ಮನ್ಸೂರ್ನನ್ನ ಹಾಜರುಪಡಿಸಲಾಗುತ್ತಿದೆ. ಇದೇ ವೇಳೆ ಎಸ್ಐಟಿಯ ಮತ್ತೊಂದು ತಂಡವು ರೋಷನ್ ಬೇಗ್ ವಿಚಾರಣೆಗೆ ತಯಾರಿ ನಡೆಸಿತ್ತು. ಆದರೆ ಮನ್ಸೂರ್ ಎಸ್ಐಟಿ ವಶದಲ್ಲಿರುವ ಕಾರಣ ಬೇಗ್ ವಿಚಾರಣೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.
ಮನ್ಸೂರ್ ಖಾನ್ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ರೋಷನ್ ಬೇಗ್ ಕೋಟಿ ಕೋಟಿ ಹಣ ಪಡೆದಿರುವ ವಿಚಾರದ ಬಗ್ಗೆ ಮಾತನಾಡಿದ್ದ. ಹೀಗಾಗಿ ವಿಚಾರಣೆ ನಡೆಸಲು ನಾಲ್ಕನೇ ಬಾರಿಗೆ ಎಸ್ಐಟಿ ನೋಟಿಸ್ ಜಾರಿ ಮಾಡಿತ್ತು. ಈ ಹಿಂದೆ ಮೂರು ನೋಟಿಸ್ಗಳಿಗೂ ಕೂಡ ಅನಾರೋಗ್ಯ ಕಾರಣ ಹೇಳಿ ರೋಷನ್ ಬೇಗ್ ವಿಚಾರಣೆಗೆ ಗೈರಾಗಿದ್ದರು.