ಬೆಂಗಳೂರು: ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾಜಿ ಡಿಸಿಎಂ ಪರಮೇಶ್ವರ್ ಮಾತನಾಡಿದ್ರು. ದೆಹಲಿಯಲ್ಲಿ ರೈತರ ಹೋರಾಟ ಮುಂದುವರಿದಿದೆ. 60ರ ದಶಕದಲ್ಲಿ ನಮಗೆ ತಿನ್ನಲು ಅನ್ನವಿರಲಿಲ್ಲ. ಇಂದಿರಾ ಗಾಂಧಿ ಬಂದ ಮೇಲೆ 'ಹಸಿರು ಕ್ರಾಂತಿ' ತಂದರು. ಅನ್ನದಾತನ ಬೆಂಬಲಕ್ಕೆ ನಿಂತರು. 10-12 ವರ್ಷದಲ್ಲಿ ಆಹಾರ ಸ್ವಾವಲಂಬನೆಯಾಯ್ತು. ಪ್ರತಿಯೊಬ್ಬರಿಗೂ ಅನ್ನ ಸಿಗುವಂತಾಯ್ತು. ಮನಮೋಹನ್ ಸಿಂಗ್ ಆಹಾರ ಭದ್ರತೆ ತಂದರು ಎಂದರು.
ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಇವತ್ತು ಪರಿಸ್ಥಿತಿ ಭಿನ್ನವಾಗಿದೆ. ಅನ್ನ ಕೊಟ್ಟ ರೈತನನ್ನು ಬೀದಿಗಿಳಿಸಲಾಗ್ತಿದೆ. ಕೃಷಿ ಕ್ಷೇತ್ರದಲ್ಲಿ 60% ಕಾರ್ಮಿಕರಿದ್ದಾರೆ, ಕೃಷಿ ಕಡಿಮೆಯಾದರೆ ಕಾರ್ಮಿಕರು ಎಲ್ಲಿಗೆ ಹೋಗಬೇಕು. ಯಾವ ಕಾನೂನು ನೀವು ತರ್ತಿರೋದು? ಮಧ್ಯವರ್ತಿಗಳ ಹಾವಳಿ ತಡೆಯಲು ಎಪಿಎಂಸಿ ತಂದಿದ್ದು. ಎಪಿಎಂಸಿ ತೆಗೆದು ಮತ್ತೆ ಮಧ್ಯವರ್ತಿಗೆ ಕೊಡ್ತಿದ್ದೀರಾ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಯುಪಿಎ ಸರ್ಕಾರ 25 ಪದಾರ್ಥಗಳಿಗೆ ಎಂಎಸ್ಪಿ ಕೊಟ್ಟಿತ್ತು. ಎನ್ಡಿಎ ಸರ್ಕಾರ ಕಡಿಮೆ ಮಾಡಿದೆ. ದೇವರಾಜು ಅರಸು ಉಳುವವನೇ ಭೂಮಿಯ ಒಡೆಯ ಎಂದರು. ಶ್ರೀಮಂತರ ಕೈಯಲ್ಲಿದ್ದ ಭೂಮಿ ರೈತರಿಗೆ ಕೊಡಿಸಿದರು. ಆದರೆ ನೀವು ಮತ್ತೆ ಕಿತ್ತುಕೊಳ್ಳಲು ಹೊರಟಿದ್ದೀರಾ. ಮತ್ತೆ ಭೂ ಮಾಲೀಕರ ಕಾನೂನು ತರುತ್ತಿದ್ದೀರಾ. ರೈತನನ್ನು ಜೀತಕ್ಕೆ ಒಳಪಡಿಸುತ್ತಿದ್ದೀರಾ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ತೀವ್ರ ವಾಗ್ದಾಳಿ ನೆಡಸಿದರು. ರೈತರನ್ನು ಕದಲಿಸುವ ಪ್ರಯತ್ನ ನಡೆಯುತ್ತಿದೆ. ಎಕ್ಸ್ಪರ್ಟ್ಸ್ ಕಮಿಟಿ ಮಾಡಿದ್ದಾರೆ, ಕಾಯ್ದೆ ಒಪ್ಪಿದವರೇ ಸಮಿತಿಯಲ್ಲಿದ್ದಾರೆ. ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪನ್ನೂ ರೈತರು ವಿರೋಧಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಎರಡು ಕಾಯ್ದೆ. ಭೂ ಸುಧಾರಣಾ ತಿದ್ದುಪಡಿ ತಂದಿದ್ದಾರೆ, ಕಾರ್ಪೋರೇಟ್ ಕಂಪನಿ ಎಲ್ಲವನ್ನೂ ಖರೀದಿ ಮಾಡ್ತಿದೆ ಎಂದರು. ಅದಾನಿ, ಅಂಬಾನಿ ಕಲ್ಲು ನಮ್ಮ ದೇಶದ ಮೇಲೆ ಬಿದ್ದಿದೆ. ಬ್ರಿಟೀಷರು ಇದ್ದಾಗ ಕಂಪನಿ ಸರ್ಕಾರ ಅನ್ನುತ್ತಿದ್ದರು. ಮುಂದೆ ಕಾರ್ಪೋರೇಟರ್ ಸರ್ಕಾರ ಬರುತ್ತದೆ. ಯಾವ ಪಕ್ಷಗಳೂ ಉಳಿಯೋದಿಲ್ಲ. ಅದಾನಿ, ಅಂಬಾನಿಯವರ ಪಾಲಾಗುತ್ತದೆ. ಪ್ರಧಾನಿ ಈ ದೇಶವನ್ನೇ ಮಾರುತ್ತಾರೆ. ಹೀಗಂತ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದರು ಎಂದು ರಾಜ್ಯ, ಕೇಂದ್ರದ ವಿರುದ್ಧ ಎಸ್.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ನಾನು ಹಲ್ಲೆ ಮಾಡಿಲ್ಲ, ಅವರೇ ನನ್ನ ಸೀರೆ, ಕೂದಲು ಎಳೆದರು: ಶಾಸಕಿ ಸೌಮ್ಯಾ ರೆಡ್ಡಿ