ETV Bharat / state

ರಾಮಮಂದಿರ ಕಟ್ಟಿದರೆ ಮುಗೀತು ಎನ್ನಬೇಡಿ, ಅದನ್ನು ಉಳಿಸುವ ಪ್ರಯತ್ನ ಮುಂದುವರಿಯಲಿ: ವಿಶ್ವಪ್ರಸನ್ನ ತೀರ್ಥ ಶ್ರೀ - ದೇಶ ಧರ್ಮ ಸಂಸ್ಕೃತಿಯ ರಕ್ಷಣೆ

ಬೆಂಗಳೂರಿನಲ್ಲಿ ನಡೆದ ಜಯಂತ ಕಟ್ಟಡ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಪೀಠಾಧಿಪತಿ ವಿಶ್ವಪ್ರಸನ್ನ ತೀರ್ಥ ಶ್ರೀ ಮಾತನಾಡಿದರು.

Vishwa Prasanna Theertha Shri
ಕಟ್ಟಡ ಭೂಮಿ ಪೂಜೆ ಕಾರ್ಯಕ್ರಮವನ್ನು ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ನೆರವೇರಿಸಿದರು.
author img

By ETV Bharat Karnataka Team

Published : Dec 15, 2023, 10:28 PM IST

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರ ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳುತ್ತಿದೆ. ಶತ ಶತಮಾನಗಳ ಕನಸು ನನಸಾಗುತ್ತಿದೆ. ಆದರೆ ಇಷ್ಟಕ್ಕೆ ಹೋರಾಟ ಮುಗಿಯಿತು ಎಂದುಕೊಳ್ಳುವಂತಿಲ್ಲ. ಸೂರ್ಯ ಚಂದ್ರರು ಇರುವ ತನಕ ಉಳಿಸುಕೊಳ್ಳುವ ಪ್ರಯತ್ನವನ್ನು ಸದಾ ಮುಂದುವರಿಸಬೇಕು ಎಂದು ಉಡುಪಿ ಪೇಜಾವರ ಮಠದ ಪೀಠಾಧಿಪತಿ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರು ಹೇಳಿದರು.

ಪೂರ್ಣಪ್ರಮತಿಯಿಂದ ಆಯೋಜಿಸಿದ್ದ ನೂತನ ಕಟ್ಟಡ ಜಯಂತ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾವು ನಮ್ಮ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ತಿಳಿ ಹೇಳದಿದ್ದರೆ ಮುಂದೊಂದು ದಿನ ಶತಮಾನಗಳ ಹೋರಾಟದಿಂದ ಕಟ್ಟಲಾಗಿರುವ ದೇವಸ್ಥಾನದ ಅವನತಿಯನ್ನು ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕನಸು ಕಂಡರೆ ಸಾಲದು, ಅದನ್ನು ನನಸು ಗೊಳಿಸಲು ಪ್ರಾಮಾಣಿಕ ಪ್ರಯತ್ನ ಇರಬೇಕು. ಬಹಳ ಜನರು ನಮ್ಮಿಂದಾಗದು ಎಂದು ಕನಸು ಕಾಣಲು ಸಹ ಹೋಗುವುದಿಲ್ಲ. ಆದರೆ ಅಂತವರಿಗೆ ತಮ್ಮ ಜೀವನದ ಕೊನೆಯ ಘಟ್ಟಕ್ಕೆ ಬಂದಾಗ ಸ್ವಲ್ಪ ಪ್ರಯತ್ನಪಟ್ಟಿದ್ದರೆ ಜೀವನವನ್ನು ಸಾರ್ಥಕಗೊಳಿಸಬಹುದಿತ್ತು ಎಂದೆನಿಸುತ್ತದೆ. ಆದ್ದರಿಂದ ಎಲ್ಲರೂ ನಂತರ ಪಶ್ಚಾತ್ತಾಪಪಡುವ ಬದಲು ಈಗಲೇ ಕಾರ್ಯೋನ್ಮುಖರಾಗಿ ದೇಶ ಧರ್ಮ ಸಂಸ್ಕೃತಿಯ ರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಭಾರತದಲ್ಲಿ ಇದು ಬದಲಾವಣೆಯ ಪರ್ವಕಾಲವಾಗಿದೆ. ಸಾವಿರಾರು ವರ್ಷಗಳಿಂದ ನಾವುಗಳು ಏನನ್ನು ಕಳೆದುಕೊಂಡಿದ್ದೆವೋ ಅದನ್ನು ಮರಳಿ ಪಡೆಯುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅಯೋಧ್ಯೆಯ ರಾಮಮಂದಿರವನ್ನು ಸುಮಾರು 500 ವರ್ಷಗಳ ಹಿಂದೆ ಕಳೆದುಕೊಂಡಿದ್ದೆವು. ಆದರೆ ಅದನ್ನು ಈಗ ಮರಳಿ ಪಡೆದಿದ್ದೇವೆ. ಆದ್ದರಿಂದ ಇದೊಂದು ಸುವರ್ಣಕಾಲ ಎನ್ನುವುದು ನನ್ನ ಭಾವನೆ ಎಂದು ಹೇಳಿದರು.

ರಾಮ ರಾಜ್ಯದ ಕನಸು ಯಾವಾಗಲೂ ನಾವು ಕಾಣುತ್ತಿದ್ದೆವು. ಆದರೆ ಮರ್ಯಾದಾ ಪುರುಷೋತ್ತಮ ರಾಮ ಹುಟ್ಟಿದ ಸ್ಥಳದಲ್ಲಿ ರಾಮಮಂದಿರವಿರಲಿಲ್ಲ. ಈಗ ರಾಮ ಮಂದಿರ ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದ್ದು, ರಾಮ ರಾಜ್ಯದ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ. ಮತ್ತೊಂದು ಸಂತಸದ ಸಂಗತಿ ಎಂದರೆ ಅಲಹಾಬಾದ್ ಹೈಕೋರ್ಟ್ ಶ್ರೀ ಕೃಷ್ಣನ ಜನ್ಮಸ್ಥಳ ಮಥುರಾ ದೇವಾಲಯಕ್ಕೆ ಸಂಬಂಧಪಟ್ಟಂತೆ ಈಗ ಮಸೀದಿಯ ಆವರಣದ ಸಮೀಕ್ಷೆ ನಡೆಸಲು ಆದೇಶ ನೀಡಿದೆ. ಕೈಲಾಸ ಮಾನಸ ಸರೋವರ ಯಾತ್ರೆಗೆ ಚೀನಾ ಸರ್ಕಾರದ ಅಂಗಿನಲ್ಲಿ ಪ್ರಯಾಣಿಸಬೇಕಿದ್ದ ಯಾತ್ರಿಕರು ಇನ್ನು ಎರಡು-ಮೂರು ವರ್ಷಗಳಲ್ಲಿ ಅದ್ಯಾವುದೇ ಅಡೆತಡೆಗಳಿಲ್ಲದೆ ಪ್ರಯಾಣಿಸುವಂತಾಗಲಿದೆ. ಇವೆಲ್ಲವೂ ಸುವರ್ಣಕಾಲದ ಸಂಕೇತಗಳಾಗಿವೆ ಎಂದು ಹೇಳಿದರು.

ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಲಿಂಗರಾಜು ಚಿಂತಕರಾದ ಆರತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂಓದಿ: ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್​ಗೆ ಅದ್ದೂರಿ ಚಾಲನೆ: ದೀಪ ಬೆಳಗಿದ ರಾಜ್ಯಪಾಲರು, ಜನ ಮನಸೆಳೆದ ಗಂಗಾರತಿ...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.