ಬೆಂಗಳೂರು: ಬಿಜೆಪಿಯ ಖುರ್ಚಿ ಆಸೆಯನ್ನು ಜನ ಗಮನಿಸುತ್ತಿದ್ದಾರೆ. ಶ್ರೀಮಂತ್ ಪಾಟೀಲ್ ಚಿಕಿತ್ಸೆಗೆಂದು ಹೋಗಿಲ್ಲ. ಅವರನ್ನು ಭೇಟಿ ಮಾಡಲು ಹೋಗಿದ್ದ ನಮ್ಮ ಪೊಲೀಸರನ್ನು ಒಳಗೆ ಬಿಟ್ಟಿಲ್ಲ. ಶ್ರೀಮಂತ್ ಪಾಟೀಲ್ ಸಹ ಆಪರೇಷನ್ ಕಮಲದ ಕ್ಯಾಂಡಿಡೇಟ್ ಎಂದು ಸಚಿವ ಬಂಡೆಪ್ಪ ಕಾಂಶೆಂಪೂರ್ ಅಭಿಪ್ರಾಯಪಟ್ಟರು.
ದೇವನಹಳ್ಳಿ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ಬಳಿ ಮಾತನಾಡಿದ ಅವರು, ಬಿಜೆಪಿ, ಕ್ಷೇತ್ರ ಮರೆತು ಆಪರೇಷನ್ ಕಮಲ ಮಾಡುತ್ತಿದೆ. ಕುಮಾರಣ್ಣ ಮನಸ್ಸು ಮಾಡಿದ್ರೆ ಇದೇನು ದೊಡ್ಡ ವಿಚಾರವಲ್ಲ. ನಮ್ಮಿಂದ ತಪ್ಪು ಸಂದೇಶ ಹೋಗಬಾರದು ಅಂತ ಸುಮ್ಮನಿದ್ದಾರೆ. ಇವೆಲ್ಲಾ ಇವತ್ತಲ್ಲ ನಾಳೆ ಹೋಗಿರುವ ಶಾಸಕರಿಗೆ ಮನವರಿಕೆ ಆಗುತ್ತೆ. ನಾವು ಮನವಿ ಮಾಡುತ್ತಿದ್ದೇವೆ ಚಮತ್ಕಾರದಿಂದ ವಾಪಸ್ಸು ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಸ್ಪೀಕರ್ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿದ್ದಾರೆ ಅವರಿಗೆ ನನ್ನ ಧನ್ಯವಾದಗಳು. ಹಿಂದೆ ಬೋಪಯ್ಯ ಇದ್ದಾಗ ಏನಾಯ್ತು ಅನ್ನೊದು ಗೊತ್ತಿದೆ. ಸುಪ್ರೀಂಕೋರ್ಟ್ ಸಹ ಛೀಮಾರಿ ಹಾಕಿತ್ತು. ಬಿಜೆಪಿ ಹೈಕಮಾಂಡ್ ಎಚ್ಚೆತ್ತು ಇವರಿಗೆ ಬುದ್ದಿ ಕಲಿಸಬೇಕು ಎಂದರು.
ಇನ್ನೂ ಇದೇ ವೇಳೆ OLD MAN IN HURRY - ಎಂದು ಯಡಿಯೂರಪ್ಪಗೆ ಟಾಂಗ್ ನೀಡಿದ ಅವರು, ಅಡ್ವಾಣಿ ರೀತಿ ಎಲ್ಲಿ ನನ್ನನ್ನೂ ಮನೆಯಲ್ಲಿ ಕೂರಿಸುತ್ತಾರೋ ಎಂಬ ಆತಂಕ ಯಡಿಯೂರಪ್ಪನವರಿಗೆ ಇದೆ ಎಂದು ಕಿಡಿಕಾರಿದ್ರು.