ETV Bharat / state

ಪೋಕ್ಸೋ ಪ್ರಕರಣದ ವಿಚಾರಣೆಗಾಗಿಯೇ ವಿಶೇಷ ಕೋರ್ಟ್​​​ಗಳ ಸ್ಥಾಪನೆ.. ಹೇಗಿದೆ ಕಾರ್ಯವೈಖರಿ - ಮಕ್ಕಳ ರಕ್ಷಣೆ ಕಾಯ್ದೆ

ರಾಜ್ಯದಲ್ಲಿ ಸ್ಥಾಪನೆಯಾಗಿರುವ ವಿಶೇಷ ನ್ಯಾಯಾಲಯಗಳಿಗೆ ಮಹಿಳಾ ನ್ಯಾಯಾಧೀಶರು, ಅಭಿಯೋಜಕರ ಕೊರತೆ ಇದೆ. ಅವರನ್ನು ಸೂಕ್ತ ಪ್ರಮಾಣದಲ್ಲಿ ನೇಮಿಸಿದ್ದೇ ಆದಲ್ಲಿ ವಿಶೇಷ ನ್ಯಾಯಾಲಯದ ಕಾರ್ಯವೈಖರಿ ಮತ್ತಷ್ಟು ಚುರುಕುಗೊಳ್ಳಲಿದೆ..

Establishment of special courts at every district for settle Pocso cases
ಪೋಕ್ಸೋ ಪ್ರಕರಣದ ವಿಚಾರಣೆಗಾಗಿಯೇ ವಿಶೇಷ ಕೋರ್ಟ್​​​ಗಳ ಸ್ಥಾಪನೆ - ಹೇಗಿದೆ ಕಾರ್ಯವೈಖರಿ
author img

By

Published : Mar 26, 2021, 8:06 PM IST

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ 2012ರಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಪೋಕ್ಸೋ ಕಾಯ್ದೆ 2012ರ ತಿದ್ದುಪಡಿಗೆ ಅನುಮೋದನೆ ನೀಡಲಾಗಿತ್ತು.

ಅದರಂತೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಅಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳ ಅನ್ವಯ ರಾಜ್ಯ ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿದ್ದು, ಉತ್ತಮವಾಗಿ ಕಾರ್ಯಾಚರಿಸುತ್ತಿವೆ.

ಪೋಕ್ಸೋ ಪ್ರಕರಣದ ವಿಚಾರಣೆಗಾಗಿಯೇ ವಿಶೇಷ ಕೋರ್ಟ್​​​ಗಳ ಸ್ಥಾಪನೆ - ಹೇಗಿದೆ ಕಾರ್ಯವೈಖರಿ?

ಪೋಕ್ಸೋ ಕಾಯ್ದೆ ಜಾರಿ : ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2012ರಲ್ಲಿ ಪೋಕ್ಸೋ ಕಾಯ್ದೆ ಜಾರಿಗೊಳಿಸಿದೆ. ಅದರಂತೆ ಮೊದಲು ರಾಜ್ಯದಲ್ಲಿನ 12 ಜಿಲ್ಲೆಗಳಲ್ಲಿ ಪೋಕ್ಸೋ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿತ್ತು. ಕಳೆದ 2019ರಲ್ಲಿ ಸುಪ್ರೀಂಕೋರ್ಟ್ ಯಾವುದೇ ಜಿಲ್ಲೆಯಲ್ಲಿ 100 ಕ್ಕಿಂತ ಹೆಚ್ಚು ಪ್ರಕರಣಗಳಿದ್ದಲ್ಲಿ ಅಲ್ಲಿಯೂ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ನಿರ್ದೇಶನ ನೀಡಿತ್ತು.

ಅದರನ್ವಯ ರಾಜ್ಯದ ಉಳಿದ 18 ಜಿಲ್ಲೆಗಳಲ್ಲಿಯೂ ಇದೀಗ ಪೋಕ್ಸೋ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಪ್ರಕರಣಗಳ ವಿಚಾರಣೆಗೂ ತಲಾ ಎರಡೆರಡು ವಿಶೇಷ ನ್ಯಾಯಾಲಯಗಳನ್ನು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಸ್ಥಾಪಿಸಲಾಗಿದೆ.

ಮಕ್ಕಳ ಸ್ನೇಹಿ ನ್ಯಾಯಾಲಯ : ಘಟನೆಯಿಂದ ಮಾನಸಿಕ ಆಘಾತಕ್ಕೊಳಗಾಗಿರುವ ಮಕ್ಕಳು ಹಾಗೂ ಪೋಷಕರಿಗೆ ಕೋರ್ಟ್ ವಿಚಾರಣೆ ಕಿರಿಕಿರಿಯಾಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿರುತ್ತದೆ. ಹೀಗಾಗಿ, ಪೋಕ್ಸೋ ಪ್ರಕರಣಗಳ ವಿಚಾರಣೆ ನಡೆಸುವಾಗ ಮೊದಲಿಗೆ ಸಂತ್ರಸ್ತ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.

ಅವರಿಗೆ ಯಾವುದೇ ಭೀತಿ ಕಾಡದಂತೆ ಮನೆಯಲ್ಲಿಯೇ ಇದ್ದೇವೆ ಎಂಬ ವಾತಾವರಣ ಸೃಷ್ಟಿಸಿ ನಂತರವೇ ವಿಚಾರಣೆ ನಡೆಸಬೇಕಾಗುತ್ತದೆ. ಅದರಂತೆ ವಿಶೇಷ ನ್ಯಾಯಾಲಯಗಳು ಕಾರ್ಯಾಚರಿಸುತ್ತಿವೆ.

ವಿಶೇಷವಾಗಿ ಸಜ್ಜಾಗಿವೆ ನ್ಯಾಯಾಲಯಗಳು : ಪೋಕ್ಸೋ ಪ್ರಕರಣಗಳನ್ನು ವಿಚಾರಣೆ ನಡೆಸುವ ನ್ಯಾಯಾಲಯಗಳನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ. ನ್ಯಾಯಾಲಯಕ್ಕೆ ಬರುವ ಮಕ್ಕಳು ಹಾಗೂ ಪೋಷಕರಿಗೆ ಪ್ರತ್ಯೇಕ ಇರುವ ವ್ಯವಸ್ಥೆ ಮಾಡಲಾಗಿದೆ. ಮಗುವಿಗೆ ಕೋರ್ಟ್ ವಿಚಾರಣೆ ಒತ್ತಡ ಸೃಷ್ಟಿಸಬಾರದೆಂದು ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿರುತ್ತದೆ.

ಕೋರ್ಟ್ ಸಿಬ್ಬಂದಿಗೂ ವಿಶೇಷವಾಗಿ ತರಬೇತಿ ನೀಡಲಾಗಿರುತ್ತದೆ. ಜತೆಗೆ ನ್ಯಾಯಾಲಯಕ್ಕೆ ಕರೆತರುವ ಪೊಲೀಸರು ಕೂಡ ಸಮವಸ್ತ್ರದ ಬದಲಿಗೆ ಸಾಮಾನ್ಯ ಉಡುಪಿನಲ್ಲಿರುತ್ತಾರೆ. ನ್ಯಾಯಾಧೀಶರು, ಅಭಿಯೋಜಕರು ಸಂತ್ರಸ್ತ ಮಗುವಿನೊಂದಿಗೆ ಅತ್ಯಂತ ಸ್ನೇಹಮಯಿಯಾಗಿ ನಡೆದುಕೊಳ್ಳುತ್ತಲೇ ಮಾಹಿತಿ ಪಡೆದುಕೊಳ್ಳುತ್ತಾರೆ.

ಆರೋಪಿ ಕಾಣಿಸದಂತೆ ಪರದೆ : ಪ್ರಕರಣದ ವಿಚಾರಣೆ ವೇಳೆ ಆರೋಪಿ ನ್ಯಾಯಾಲಯದಲ್ಲೇ ಇದ್ದರೂ ಅವರು ಕಾಣಿಸದಂತೆ ಪರದೆ ಹಾಕಲಾಗಿರುತ್ತದೆ. ದೌರ್ಜನ್ಯ ಎಸಗಿದ ಆರೋಪಿಯನ್ನು ಗುರುತಿಸುವ ಸಂದರ್ಭದಲ್ಲಿ ಮಾತ್ರ ಕಾಣುವಂತೆ ಎದ್ದು ನಿಲ್ಲಿಸಿ, ಬಳಿಕ ಪರದೆ ಹಿಂದೆ ಅಡಗಿಸಿ ಕೂರಿಸಲಾಗುತ್ತದೆ.

ಮಗುವಿನ ಮನಸ್ಸಿನಲ್ಲಿ ಭೀತಿ ಉಂಟಾಗಬಾರದು ಎಂಬ ಕಾರಣಕ್ಕೆ ಈ ಕ್ರಮ ಅನುಸರಿಸಲಾಗುತ್ತದೆ. ಹಾಗಿದ್ದೂ ಮಗುವಿನ ಹೇಳಿಕೆ ಆಲಿಸಲು ಆರೋಪಿಯನ್ನು ಕೋರ್ಟ್ ಆವರಣದಲ್ಲೇ ಪರದೆ ಹಿಂದೆ ಬಚ್ಚಿಡಲಾಗಿರುತ್ತದೆ.

ಇನ್ ಕ್ಯಾಮೆರಾ ಪ್ರೊಸೀಡಿಂಗ್ಸ್ : ಸಾಮಾನ್ಯವಾಗಿ ನ್ಯಾಯಾಲಯದ ಕಲಾಪಗಳು ತೆರೆದ ಕೋರ್ಟ್​​ನಲ್ಲಿಯೇ ನಡೆಯುತ್ತವೆ. ಆದರೆ, ಪೋಕ್ಸೋ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ಇದಕ್ಕೆ ತದ್ವಿರುದ್ಧ ನಿಯಮ ಅನುಸರಿಸಲಾಗುತ್ತದೆ. ವಿಚಾರಣೆ ಸಂದರ್ಭದಲ್ಲಿ ಮಗು, ಮಗುವಿನ ತಾಯಿ ಅಥವಾ ತಂದೆ ಸಾಕ್ಷ್ಯ ವಿಚಾರಣೆ ಹಂತದಲ್ಲಿ ಆರೋಪಿ, ಆರೋಪಿ ಪರ ವಕೀಲರು, ಅಭಿಯೋಜಕರನ್ನು ಬಿಟ್ಟರೆ ಮತ್ಯಾರಿಗೂ ಕೋರ್ಟ್‌ನೊಳಗೆ ಬರಲು ಅವಕಾಶವಿಲ್ಲ.

ಹೀಗೆ ಮುಚ್ಚುಮರೆಯಲ್ಲಿ ನಡೆಸುವ ವಿಚಾರಣೆಯನ್ನು ಕಾನೂನು ಭಾಷೆಯಲ್ಲಿ ಇನ್ ಕ್ಯಾಮೆರಾ ಪ್ರೊಸೀಡಿಂಗ್ ಎನ್ನಲಾಗುತ್ತದೆ. ಇನ್ನು, ಕೋರ್ಟ್ ಸಿಬ್ಬಂದಿಯೂ ಹೆಚ್ಚಿಗೆ ಇರುವಂತಿಲ್ಲ. ನ್ಯಾಯಾಧೀಶರನ್ನು ಬಿಟ್ಟರೆ ಮಗುವಿನ ಹೇಳಿಕೆ ದಾಖಲಿಸಿಕೊಳ್ಳಲು ಓರ್ವ ಟೈಪಿಸ್ಟ್ ಮಾತ್ರ ಇರುತ್ತಾರೆ. ಸಂತ್ರಸ್ತ ಮಗು 12 ವರ್ಷಕ್ಕಿಂತ ಕಡಿಮೆ ಇದ್ದು ಒತ್ತಡ ಅಥವಾ ಭೀತಿಯಲ್ಲಿದ್ದರೆ ವಿಚಾರಣೆಯನ್ನು ಕೋರ್ಟ್ ಹಾಲ್ ಬದಲಿಗೆ ನ್ಯಾಯಾಧೀಶರ ಚೇಂಬರ್‌ನಲ್ಲಿಯೇ ನಡೆಸಲಾಗುತ್ತದೆ.

ಕಾಯ್ದೆಯ ದುರುಪಯೋಗ : ಕಾಯ್ದೆ ಅನ್ವಯ 18ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಮಗು ಎಂದೇ ಕಾಯ್ದೆ ಹೇಳುತ್ತದೆ. ಇದು ಕೆಲ ಪ್ರಕರಣಗಳಲ್ಲಿ ದುರ್ಬಳಕೆ ಆಗುವ ಸಾಧ್ಯತೆಯೂ ಇದೆ. 16 ವರ್ಷ ತುಂಬಿದವರನ್ನು ಸಮಾಜ ಯುವಕ, ಯುವತಿ ಎಂದೇ ಗುರುತಿಸುತ್ತದೆ. ಇಂತಹ ಯುವಕ ಅಥವಾ ಯುವತಿ ಹದಿಹರೆಯದ ಸೆಳೆತದಲ್ಲಿ ಒಪ್ಪಿತ ಲೈಂಗಿಕ ಕ್ರಿಯೆ ನಡೆಸಿದರೂ ಅದು ಅಪರಾಧವಾಗುತ್ತದೆ.

ಇಲ್ಲಿ ಅಪ್ರಾಪ್ತರು ಸಂತ್ರಸ್ತರಾದರೆ, ವಯಸ್ಕರು ತಂತಾನೇ ಆರೋಪಿಯಾಗುತ್ತಾರೆ. ಕಾಲೇಜು ಯುವತಿಯರು ಪ್ರೀತಿ ಹೆಸರಿನಲ್ಲಿ ಮನೆ ಬಿಟ್ಟು ಹೋಗಿ ಒಪ್ಪಿತ ಲೈಂಗಿಕ ಸಂಪರ್ಕ ನಡೆಸಿದ ಪ್ರಕರಣಗಳಲ್ಲಿ ಸಾಕಷ್ಟು ಯುವಕರು ಜೈಲು ಸೇರಿರುವುದು ಇತ್ತೀಚಿನ ಪ್ರಕರಣಗಳಲ್ಲಿ ಕಂಡು ಬರುತ್ತಿದೆ. ಹೀಗಾಗಿ, ವಯಸ್ಸಿನ ಮಿತಿ ಮರುಪರಿಶೀಲಿಸುವ ಅಗತ್ಯವಿದೆ ಎನ್ನುತ್ತಾರೆ ಹಿರಿಯ ವಕೀಲರು.

ಹಾಗೆಯೇ ಕಾಯ್ದೆಯು ಆರೋಪಿಯ ಕೃತ್ಯವನ್ನು ನ್ಯಾಯಾಧೀಶರು ಪೂರ್ವಭಾವನೆ ಮಾಡಲು ಅವಕಾಶ ನೀಡಿದೆ. ಇದರಿಂದಾಗಿ ಆರೋಪಿ ತಾನು ತಪ್ಪೆಸಗಿಲ್ಲ ಎಂಬುದನ್ನು ರುಜುವಾತು ಮಾಡುವ ಭಾರವನ್ನು ಹೊತ್ತಿರುತ್ತಾನೆ. ಇದು ಕೂಡ ಕೆಲ ಬಾರಿ ದುರುಪಯೋಗ ಆಗುವ ಸಾಧ್ಯತೆ ಇರುತ್ತದೆ.

ಮಹಿಳಾ ನ್ಯಾಯಾಧೀಶರು, ಅಭಿಯೋಜಕರ ಕೊರತೆ : ಪೋಕ್ಸೋ ಪ್ರಕರಣಗಳ ವಿಚಾರಣೆಗೆ ನ್ಯಾಯಾಧೀಶರು ಹಾಗೂ ಸರ್ಕಾರಿ ಅಭಿಯೋಜರು ಮಹಿಳೆಯರೇ ಆಗಿದ್ದರೆ ಹೆಚ್ಚು ಅನುಕೂಲ ಎಂಬ ಅಭಿಪ್ರಾಯವಿದೆ. ಆದರೆ, ರಾಜ್ಯದಲ್ಲಿ ಸ್ಥಾಪನೆಯಾಗಿರುವ ವಿಶೇಷ ನ್ಯಾಯಾಲಯಗಳಿಗೆ ಮಹಿಳಾ ನ್ಯಾಯಾಧೀಶರ ಕೊರತೆ ಇದೆ. ಹಾಗೆಯೇ ಮಹಿಳಾ ಅಭಿಯೋಜಕರ ಕೊರತೆಯೂ ಇದೆ. ಹೀಗಾಗಿ, ಇರುವ ಸಿಬ್ಬಂದಿಯಲ್ಲೇ ಕೋರ್ಟ್ ಕಲಾಪ ನಡೆಸಿಕೊಂಡು ಹೋಗಲಾಗುತ್ತಿದೆ.

ತನಿಖಾಧಿಕಾರಿಗಳಿಗೆ ತರಬೇತಿ : ಪ್ರಕರಣವನ್ನು ಸೂಕ್ಷ್ಮವಾಗಿ ನಿಭಾಯಿಸುವುದು, ದೌರ್ಜನ್ಯಕ್ಕೊಳಗಾದ ಮಗುವಿನ ಮನವೊಲಿಸಿ ಮಾಹಿತಿ ಸಂಗ್ರಹಿಸುವುದು, ಸಾಕ್ಷ್ಯ ಸಂಗ್ರಹಿಸುವಲ್ಲಿ ಎಚ್ಚರಿಕೆ ವಹಿಸುವುದು, ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ ಪ್ರಕರಣವನ್ನು ಆದಷ್ಟೂ ಗೌಪ್ಯವಾಗಿರಿಸಲು ಪ್ರಯತ್ನಿಸುವುದು, ಮಗುವಿನ ಮಾನಸಿಕ ಸ್ಥಿತಿ ಅರಿಯುವುದು ಸೇರಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳಿಗೆ ಸಾಕಷ್ಟು ತರಬೇತಿ ಕೊಡಲಾಗುತ್ತಿದೆ.

ರಾಜ್ಯದಲ್ಲಿ ವಾರ್ಷಿಕನುಸಾರವಾಗಿ ದಾಖಲಾಗಿರುವ ಪೋಕ್ಸೋ ಪ್ರಕರಣಗಳು

2015 - 1526

2016 - 1565

2017 - 1956

2018 - 2036

2019 - 2160

2020 - 2210

ರಾಜ್ಯದಲ್ಲಿ ಸ್ಥಾಪನೆಯಾಗಿರುವ ವಿಶೇಷ ನ್ಯಾಯಾಲಯಗಳಿಗೆ ಮಹಿಳಾ ನ್ಯಾಯಾಧೀಶರು, ಅಭಿಯೋಜಕರ ಕೊರತೆ ಇದೆ. ಅವರನ್ನು ಸೂಕ್ತ ಪ್ರಮಾಣದಲ್ಲಿ ನೇಮಿಸಿದ್ದೇ ಆದಲ್ಲಿ ವಿಶೇಷ ನ್ಯಾಯಾಲಯದ ಕಾರ್ಯವೈಖರಿ ಮತ್ತಷ್ಟು ಚುರುಕುಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.