ETV Bharat / state

ಯಡಿಯೂರು ಕೆರೆ ಬಳಿ ಸಾವಯವ ಗೊಬ್ಬರ ಉತ್ಪಾದನಾ ಘಟಕ ಸ್ಥಾಪನೆ - Yediyur Lake in bangalore

ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಯುವ ಗೊಬ್ಬರ ಉತ್ಪಾದನಾ ಘಟಕವನ್ನು ಯಡಿಯೂರು ಕೆರೆ ಬಳಿಯ ಪಾರ್ಕ್​ನಲ್ಲಿ ನಿರ್ಮಾಣ ಮಾಡಲಾಗಿದೆ. ತ್ಯಾಜ್ಯ ವಸ್ತುಗಳಿಂದ ಜೀವಸಾರ ಉತ್ಪಾದಿಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಪಾರ್ಕ್​ಗಳಿಗೆ ಬಳಸಲು ನಿರ್ಧರಿಸಲಾಗಿದೆ.

ಸಾವಯುವ ಗೊಬ್ಬರ ಉತ್ಪಾದನ ಘಟಕ
ಸಾವಯುವ ಗೊಬ್ಬರ ಉತ್ಪಾದನ ಘಟಕ
author img

By

Published : Jun 17, 2020, 11:10 AM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಗೃಹ ಬಳಕೆ ತ್ಯಾಜ್ಯದಿಂದ ಜೀವಸಾರವನ್ನು ಉತ್ಪಾದಿಸುವ ಸಾವಯವ ಗೊಬ್ಬರ ಉತ್ಪಾದನ ಘಟಕವನ್ನು ಯಡಿಯೂರು ಕೆರೆ ಬಳಿ ಇರುವ ಪಾರ್ಕ್​ನಲ್ಲಿ ನಿರ್ಮಿಸಲಾಗಿದೆ. ಪಾಲಿಕೆ ಇತಿಹಾಸದಲ್ಲಿ ಇದೊಂದು ಮೈಲುಗಲ್ಲಾಗಿದ್ದು, ತ್ಯಾಜ್ಯ ವಸ್ತುಗಳಿಂದ ಜೀವಸಾರ ಉತ್ಪಾದಿಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಪಾರ್ಕ್​ಗಳಿಗೆ ಬಳಸಲು ನಿರ್ಧರಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾವಯುವ ಗೊಬ್ಬರ ಉತ್ಪಾದನಾ ಘಟಕ

ಜೀವಸಾರ ಘಟಕದ ವಿಶೇಷತೆ:

ಈ ಘಟಕ‌ ನಿರ್ಮಾಣಕ್ಕಾಗಿ ಸುಮಾರು 9 ಸಾವಿರ ನೀರು ಸಂಗ್ರಹ ಮಾಡುವ ನೀರಿನ ತೊಟ್ಟಿ, ತ್ಯಾಜ್ಯ ದ್ರಾವಣವನ್ನು ಸಂಗ್ರಹ ಮಾಡಲು 3000 ಲೀಟರ್​​ನ ತೊಟ್ಟಿ ನಿರ್ಮಾಣ ಮಾಡಲಾಗಿದೆ. ಅಲ್ಲದೇ, ನೀರು ಹಾಗೂ ತ್ಯಾಜ್ಯ ದ್ರಾವಣವನ್ನು ಮಿಶ್ರಣ ಮಾಡಲು ಸುಮಾರು ಆರು ಸಾವಿರ ಲೀಟರ್​​ ಸಂಗ್ರಹವಾಗುವ ತೊಟ್ಟಿಯನ್ನು ಸಿದ್ಧಪಡಿಸಲಾಗಿದೆ. ಯಡಿಯೂರು ವಾರ್ಡ್​ನಲ್ಲಿ ಪ್ರತಿನಿತ್ಯ 5 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಒಂದು ಲೀಟರ್ ತ್ಯಾಜ್ಯ ದ್ರಾವಣಕ್ಕೆ 10 ಲೀಟರ್ ನೀರನ್ನು ಮಿಶ್ರಣ ಮಾಡಿ ಪ್ರತಿನಿತ್ಯ 12 ಸಾವಿರ ಜೀವ‌ಸಾರವನ್ನು ಈ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಈ ಘಟಕದಲ್ಲಿ ಉತ್ಪತ್ತಿಯಾಗುವ ಜೀವಸಾರ ಸಸ್ಯಗಳಿಗೆ ಉತ್ತಮ‌ ಗೊಬ್ಬರವಾಗಿದ್ದು, ಇದನ್ನು ಬಳಸುವುದರಿಂದ ಭೂಮಿಯ ಫಲವತ್ತತೆ ಹೆಚ್ಚಾಗಲಿದೆ.

ಘಟಕ‌ ನಿರ್ಮಾಣದ ವೆಚ್ಚ, ನಿರ್ವಹಣೆ ಮತ್ತು ಉಪಯೋಗ:

ಸಾವಯವ ಗೊಬ್ಬರ ಘಟಕವನ್ನು ಬಿಬಿಎಂಪಿ ಅನುದಾನದಡಿ ಸುಮಾರು 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಘಟವ ನಿರ್ವಹಣೆಗೆ ಒಂದು ವರ್ಷಕ್ಕೆ ಸುಮಾರು 40 ಲಕ್ಷ ವೆಚ್ಚವಾಗಲಿದೆ ಎಂದು ಮಾಜಿ ಕಾರ್ಪೊರೇಟರ್ ಹಾಗೂ ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್​.ಆರ್. ರಮೇಶ್ ತಿಳಿಸಿದ್ದಾರೆ‌.

ಸಾವಯವ ಗೊಬ್ಬರದಿಂದ ಬಿಬಿಎಂಪಿಗೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ಆದಾಯ ಇದೆ. ಪ್ರಸ್ತುತ ಬೆಂಗಳೂರು ವ್ಯಾಪ್ತಿಯಲ್ಲಿರುವ 774 ಪಾರ್ಕ್​ಗಳು ಹಾಗೂ ಲಾಲ್ ಬಾಗ್ ಕಬ್ಬನ್ ಪಾರ್ಕ್​ಗಳಲ್ಲಿ ರಾಸಾಯನಿಕ ಗೊಬ್ಬರ ಬಳಸುತ್ತಿದ್ದು. ಇದಕ್ಕಾಗಿ ಪ್ರತಿವರ್ಷ 8.5 ಕೋಟಿ ವೆಚ್ಚ ಮಾಡಲಾಗುತ್ತಿದೆ. ಆದರೆ ಈಗ ಈ ಜೀವಸಾರ ಬಳಸುವುದರಿಂದ ಬಿಬಿಎಂಪಿಗೆ ಒಂದು ವರ್ಷಕ್ಕೆ ಕೇವಲ 40 ಲಕ್ಷ ವೆಚ್ಚವಾಗಲಿದೆ. ಅಲ್ಲದೇ ಈ ಘಟಕದಲ್ಲಿ ಉತ್ಪತಿಯಾಗುವ ಜೀವ ಸಾರವನ್ನು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಪ್ರತಿ ಲೀಟರ್ ಜೀವಸಾರವನ್ನು ಕೇವಲ ಒಂದು ರೂಪಾಯಿಗೆ ಮಾರಲು ನಿರ್ಧರಿಸಲಾಗಿದೆ. ಇದರಿಂದ ಪಾಲಿಕೆಗೆ ಆದಾಯ ವೃದ್ಧಿಯಾಗಲಿದೆ. ಜೊತೆಗೆ ಪಾರ್ಕ್‌ಗಳ ನಿರ್ವಹಣೆಗೆ ಪಾಲಿಕೆ ವೆಚ್ಚ ಮಾಡುವ ಹಣವು ಉಳಿತಾಯ ಆಗಲಿದೆ ಎಂದು ಎನ್. ಆರ್. ರಮೇಶ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.