ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಡಿಫರೆಂಟ್ ಸಿನಿಮಾಗಳ ಮೂಲಕ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಡೈರೆಕ್ಟರ್ ಅಂದ್ರೆ ಉಪ್ಪಿ. ಚಿತ್ರರಂಗದಲ್ಲಿ ಗಾಢ್ ಪಾದರ್ ಇಲ್ಲದೆ ರಿಯಾಲಿಟಿ ಸಿನಿಮಾ ಮಾಡಿ ರಿಯಲ್ ಸ್ಟಾರ್ ಆದ ಉಪ್ಪಿ, ಸದ್ಯ ರಾಜಕೀಯದಲ್ಲೂ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಲು ಮುಂದಾಗಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಿಂದಲೂ ಉಪ್ಪಿ ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಲು ಮುಂದಾಗಿದ್ದಾರೆ. ಇನ್ನು ಲೋಕಸಭಾ ಚುನಾವಣೆಯ ಮೊದಲ ಹಂತದ 14 ಕ್ಷೇತ್ರಗಳಿಗೆ ಉಪ್ಪಿ ಅಭ್ಯರ್ಥಿಗಳನ್ನ ಕಣಕಿಳಿಸಿದ್ದು, ಮಾಧ್ಯಮಗಳ ಮೂಲಕ ಜನರಿಗೆ ಪರಿಚಯ ಮಾಡಿಸಿದ್ರು.
ನಗರದ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಕಾರ್ಯವೈಖರಿಯನ್ನು ಅಣುಕು ಪ್ರದರ್ಶನ ಮಾಡುವ ಮೂಲಕ ಜನರಿಗೆ ಅಭ್ಯರ್ಥಿಗಳನ್ನು ಪರಿಚಯಿಸಿ ಮತಯಾಚಿಸಿದ್ರು.
ಸಮಾಜದ ನೈಜತೆಯನ್ನ ತೆರೆ ಮೇಲೆ ತಂದು ಜನರ ಮನ ಗೆದ್ದಿರುವ ಉಪ್ಪಿ, ರಾಜಕೀಯದ ವಾಸ್ತವತೆಯನ್ನು ಜನರಿಗೆ ಅರ್ಥ ಮಾಡಿಸಿ ವೋಟ್ ಗಿಟ್ಟಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸಿನಿಮಾ ಸ್ಟೈಲ್ನಲ್ಲೆ ಪಾಲಿಟಿಕ್ಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಅದ್ರೆ ಈ ಬುದ್ಧಿವಂತನ ಪ್ರಜಾಕೀಯಕ್ಕೆ ಪ್ರಜಾಪ್ರಭುತ್ವದ ಪ್ರಜೆಗಳು ಜೈಕಾರ ಹಾಕ್ತಾರ ಎಂಬುದು ಉಪ್ಪಿಯ 'ಶ್' ಚಿತ್ರಕ್ಕಿಂತಲೂ ನಿಗೂಢವಾಗಿದೆ.