ETV Bharat / state

ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿ ಇಂಜಿನಿಯರ್ ವಿದ್ಯಾರ್ಥಿ ಸಾವು - engineering student died while swimming

​ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿ ಮೆಕ್ಯಾನಿಕಲ್​ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ.

an-engineering-student-who-went-swimming-in-a-stone-quarry-died
ಕಲ್ಲು ಕ್ವಾರಿಯಲ್ಲಿ ಈಜಲು ಹೋದ ಇಂಜಿನಿಯರ್ ವಿದ್ಯಾರ್ಥಿ ಸಾವು
author img

By

Published : Feb 27, 2023, 8:16 PM IST

ಆನೇಕಲ್​: ಮಾದಪ್ಪನದೊಡ್ಡಿಯ ನೀರು ತುಂಬಿದ ಕಲ್ಲು ಕ್ವಾರಿಗೆ ಈಜಲು ತೆರಳಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಜಿಗಣಿ ಬಳಿ ನಡೆದಿದೆ. ಆನೇಕಲ್ ಸಾಯಿರಾಮ್ ಕಾಲೇಜಿನಲ್ಲಿ ಮೊದಲನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್​ ಓದುತ್ತಿದ್ದ ಯದುಪ್ರಸಾದ್ ಮೃತಪಟ್ಟಿದ್ದಾರೆ.

ವಿವರ: ಯದುಪ್ರಸಾದ್ ಇಂದು ಮಧ್ಯಾಹ್ನ ನೀರು ತುಂಬಿದ ಕಲ್ಲು ಕ್ವಾರಿಗೆ ತನ್ನ ನಾಲ್ವರು ಸ್ನೇಹಿತರೊಡನೆ ಈಜಲು ತೆರಳಿದ್ದರು. ಇಬ್ಬರು ನೀರಿಗಿಳಿದಿದ್ದರು. ಓರ್ವ ಈಜುತ್ತಾ ದಡ ಸೇರಿದರೆ ಡೈ ಹೊಡೆದ ಯದುಪ್ರಸಾದ್ ನೀರಿಂದ ಮೇಲಕ್ಕೆ ಬರಲೇ ಇಲ್ಲ ಎಂದು ಸ್ನೇಹಿತರು ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಜಿಗಣಿ ಪೊಲೀಸರು ಯುವಕನ ಕಳೇಬರವನ್ನು ನೀರಿನಿಂದ ಮೇಲಕ್ಕೆ ತೆಗೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ವಿಜಯಪುರ: ರಸ್ತೆ ಅಪಘಾತದಲ್ಲಿ ಬೈಕ್​ ಸವಾರ ಸಾವು, ಹಣ ಹಾಗೂ ಚಿನ್ನಾಭರಣ ದೋಚಿ ಕಳ್ಳರು ಪರಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.