ಬೆಂಗಳೂರು: ಕಾಂಗ್ರೆಸ್ ಮುಖಂಡ, ಉದ್ಯಮಿ ಕೆಜಿಎಫ್ ಬಾಬುಗೆ ಆಗಸ್ಟ್ 1ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿ ಮಾಡಿದೆ. ಮೇ 28ರಂದು ಬಾಬು ಅವರಿಗೆ ಸೇರಿದ್ದ ಬೆಂಗಳೂರಿನ ವಸಂತನಗರದಲ್ಲಿರುವ ರುಕ್ಸಾನಾ ಪ್ಯಾಲೇಸ್ ನಿವಾಸ, ಉಮ್ರಾ ಡೆವಲಪರ್ಸ್ ಕಚೇರಿ ಹಾಗೂ ರಿಯಲ್ ಎಸ್ಟೇಟ್ ಕಚೇರಿಗಳ ಮೇಲೆ ದಾಳಿ ಇಡಿ ಅಧಿಕಾರಿಗಳು ನಡೆಸಿದ್ದರು. ಈ ಸಂಬಂಧ ಈಗಾಗಲೇ ಒಂದು ಬಾರಿ ನೋಟಿಸ್ ನೀಡಿ ವಿಚಾರಣೆ ಸಹ ನಡೆಸಲಾಗಿದೆ.
ಈಗ ಪುನಃ ನೋಟಿಸ್ ಜಾರಿ ಮಾಡಿರುವ ಇಡಿ ಅಧಿಕಾರಿಗಳು, ಆಗಸ್ಟ್ 1ರಂದು ದೆಹಲಿಯ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಸಾವಿರ ಕೋಟಿ ಆಸ್ತಿ - ಪಾಸ್ತಿ ಒಡೆಯನಾಗಿರುವ ಕೆಜಿಎಫ್ ಬಾಬು ಕಳೆದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ನಾಮಪತ್ರ ಸಲ್ಲಿಸುವಾಗ 1,741 ಕೋಟಿ ರೂ ಆಸ್ತಿ ಘೋಷಿಸಿಕೊಂಡಿದ್ದರು.
ಇದೀಗ ಆದಾಯ ತೆರಿಗೆಯಲ್ಲಿ ವ್ಯತ್ಯಯ, ಅಕ್ರಮವಾಗಿ ವಿದೇಶಿ ಹಣ ವರ್ಗಾವಣೆ ಆರೋಪ ಕಂಡು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ತೆರಿಗೆ ವಂಚನೆ - ಹಣ ದುರುಪಯೋಗ: ವಿವೋ ಕಂಪನಿಯ ರಾಜಸ್ಥಾನದ ಹಣಕಾಸು ಮುಖ್ಯಸ್ಥನ ಸೆರೆ