ETV Bharat / state

ವಿಚಾರಣೆ ನಡೆಯುತ್ತಿರುವಾಗ ಕಾರ್ಮಿಕನನ್ನು ಸೇವೆಯಿಂದ ವಜಾ ಮಾಡುವಂತಿಲ್ಲ: ಹೈಕೋರ್ಟ್ - ಮಲ್ಬರಿ ಸಿಲ್ಕಸ್ ಲಿಮಿಟೆಡ್

ಕಾರ್ಮಿಕನ ಮತ್ತು ಕಂಪನಿಯ ನಡುವೆ ವಿವಾದ ನ್ಯಾಯಾಧೀಕರಣದಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ಆ ಕಾರ್ಮಿಕನನ್ನು ಸೇವೆಯಿಂದ ವಜಾ ಮಾಡಲು ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

High Court
ಹೈಕೋರ್ಟ್
author img

By

Published : Mar 3, 2023, 3:19 PM IST

ಬೆಂಗಳೂರು: ಕೈಗಾರಿಕಾ ವಿವಾದ ಕಾಯಿದೆಯಡಿ ಕಾರ್ಮಿಕನ ಮತ್ತು ಕಂಪನಿಯ ನಡುವಣ ವಿವಾದ ನ್ಯಾಯಾಧೀಕರಣದ ಮುಂದೆ ವಿಚಾರಣಾ ಹಂತದಲ್ಲಿರುವಾಗ ಅಂತಹ ಕಾರ್ಮಿಕನನ್ನು ಸೇವೆಯಿಂದ ವಜಾ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಮಲ್ಬರಿ ಸಿಲ್ಕಸ್ ಲಿಮಿಟೆಡ್: ಕಾರ್ಮಿಕನ ಬಾಕಿ ವೇತನ ಮತ್ತು ಉದ್ಯೋಗ ಮತ್ತೆ ಹಿಂದಿರುಗಿಸುವಂತೆ ಸೂಚಿಸಿದೆ. ಕಾರ್ಮಿಕ ನ್ಯಾಯಾಲಯದಲ್ಲಿ ಸಿಬ್ಬಂದಿಯೊಬ್ಬರ ವಿರುದ್ಧದ ವಿಚಾರಣೆ ಬಾಕಿ ಇರುವ ಸಂದರ್ಭದಲ್ಲಿ ಆ ಕಾರ್ಮಿಕನನ್ನು ಸೇವೆಯಿಂದ ವಜಾಗೊಳಿಸಿದ್ದ ಕಂಪನಿಯ ನಿರ್ಧಾರವನ್ನು ವಜಾಗೊಳಿಸಿ ಕಾರ್ಮಿಕ ನ್ಯಾಯಾಧೀಕರಣದ ಆದೇಶವನ್ನು ಮಲ್ಬರಿ ಸಿಲ್ಕಸ್ ಲಿಮಿಟೆಡ್(ಮಲ್ಬರಿ ಸಿಲ್ಕಸ್ ಇಂಟರ್ ನ್ಯಾಷನಲ್ ಲಿಮಿಟೆಡ್)ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.

ಕಾರ್ಮಿಕ ನ್ಯಾಯಾಧೀಕರಣದ ಆದೇಶ ಎತ್ತಿ ಹಿಡಿದ ಹೈಕೋರ್ಟ್​: ಅಲ್ಲದೇ, ಕಾರ್ಮಿಕ ನ್ಯಾಯಾಧೀಕರಣದ ಆದೇಶವನ್ನು ಎತ್ತಿ ಹಿಡಿದಿದೆ. ಕಂಪನಿಯು ಕಾರ್ಮಿಕನನ್ನು ವಜಾಗೊಳಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಸಮರ್ಥನೆ ನೀಡಿಲ್ಲ. ಜೊತೆಗೆ, ಕಾರ್ಮಿಕ ನ್ಯಾಯಾಲಯದಲ್ಲಿ ವಿಚಾರಣೆಯಿರುವ ಸಂದರ್ಭದಲ್ಲಿ ಕಾರ್ಮಿನನ್ನು ವಜಾಗೊಳಿಸುವುದನ್ನು ತಡೆಯುವುದು. ಅವರ ಬಾಕಿ ವೇತನ ಮರು ಪಾವತಿಸುವಂತೆ ಸೂಚನೆ ನೀಡುವುದು ಹಾಗೂ ಕಾರ್ಮಿಕನ ವಿರುದ್ಧದ ಕ್ರಮಗಳ ಬಗ್ಗೆ ಕಾರ್ಮಿಕ ನ್ಯಾಯಧೀಕರಣಗಳು ಸೂಕ್ತ ಆದೇಶಗಳನ್ನು ನೀಡಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಮಲ್ಬರಿ ಸಿಲ್ಕಸ್ ಲಿಮಿಟೆಡ್(ಮಲ್ಬರಿ ಸಿಲ್ಕಸ್ ಇಂಟರ್ ನ್ಯಾಷನಲ್ ಲಿಮಿಟೆಡ್)ಯ ಉದ್ಯೋಗಿಯಾಗಿದ್ದ ಎನ್.ಚೌಡಪ್ಪ ಎಂಬುವರ ವಿರುದ್ಧ ಸೇವೆಯಲ್ಲಿ ದುಷ್ಕೃತ್ಯ ನಡೆಸಿದ ಆರೋಪವಿತ್ತು. ಈ ಸಂಬಂಧ ಆಂತರಿಕ ವಿಚಾರಣೆ ನಡೆಸಿದ್ದ ಸಂಸ್ಥೆ ಚೌಡಪ್ಪ ವಿರುದ್ಧದ ಆರೋಪ ಸಾಬೀತಾಗಿತ್ತು. ಹೀಗಾಗಿ ಚೌಡಪ್ಪ ಸೇರಿದಂತೆ ಮೂವರನ್ನು 2003ರ ಆಗಸ್ಟ್‌ನಲ್ಲಿ ಸೇವೆಯಿಂದ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಚೌಡಪ್ಪ ಸೇರಿದಂತೆ ಇತರರು ಕಾರ್ಮಿಕ ನ್ಯಾಯಾಧೀಕರಣದಲ್ಲಿ ಅರ್ಜಿ ಸಲ್ಲಿಸಿದ್ದರು.

ಕಾರ್ಮಿಕ ಕಾಯಿದೆಯ ಉಲ್ಲಂಘಟನೆ: ಅರ್ಜಿ ವಿಚಾರಣಾ ಹಂತದಲ್ಲಿರುವ ಸಂದರ್ಭದಲ್ಲಿ ಚೌಡಪ್ಪನನ್ನು ಹೊರತು ಪಡಿಸಿ ಇತರರೊಂದಿಗೆ ರಾಜಿ ಮಾಡಿಕೊಂಡಿದ್ದ ಸಂಸ್ಥೆ ಮತ್ತೆ ಉದ್ಯೋಗ ನೀಡಿತ್ತು. ಆದರೆ, ಚೌಡಪ್ಪ ವಿರುದ್ಧ ಪ್ರಕರಣ ಮುಂದುವರೆದಿತ್ತು. ಆದರೆ, ಚೌಟಪ್ಪ ಮತ್ತು ಸಂಸ್ಥೆಯ ವಿರುದ್ಧ ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶಿಸಿತ್ತು. ಈ ಆದೇಶವನ್ನು ಕಾರ್ಮಿಕ ನ್ಯಾಯಾಧೀಕರಣ 2009ರ ಆಗಸ್ಟ್ 27 ರಂದು ರದ್ದು ಪಡಿಸಿ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚನೆ ನೀಡಿತ್ತು.

ಇದನ್ನು ಪ್ರಶ್ನಿಸಿ ಕಂಪನಿಯು 2009ರಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಪ್ರಕರಣ ವಿಚಾರಣೆ ಹಂತದಲ್ಲಿರುವ ಸಂದರ್ಭದಲ್ಲಿ ಪ್ರತಿವಾದಿಯಾಗಿರುವ ಚೌಡಪ್ಪರನ್ನು ವಜಾಗೊಳಿಸಿರುವುದು ಕಾರ್ಮಿಕ ಕಾಯಿದೆಯ ಸೆಕ್ಷನ್ 33(2) ಪ್ರಕಾರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದನ್ನು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ವಜಾ ಮಾಡಿದ್ದರೂ ಪ್ರತಿವಾದಿಯನ್ನು ಉದ್ಯೋಗದಲ್ಲಿ ಮುಂದುವರೆಯಲು ಅರ್ಹರಾಗಿದ್ದಾರೆ ಎಂದು ಆದೇಶಿಸಿದೆ.

ಇದನ್ನೂ ಓದಿ: ಮಠದಲ್ಲಿ ಸತತ ಅಪರಾಧ ಕೃತ್ಯಗಳ ಹಿನ್ನೆಲೆ: ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ ಅಡಿ ಕ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.