ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿ ರಾಜ್ಯದಲ್ಲಾದ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ತುರ್ತು ಸಭೆ ನಡೆಸಲಾಯಿತು.
ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್, ಮುಖ್ಯ ಕಾರ್ಯದರ್ಶಿ ಜಾವೆದ್ ಅಖ್ತರ್ ನೇತೃತ್ವದಲ್ಲಿ ವಿದೇಶಿ ರಾಯಭಾರಿಗಳು ಮತ್ತು ಭಾರತೀಯ ವೈದ್ಯಕೀಯ ಸಂಘದ ಸದಸ್ಯರ ಜೊತೆಗೆ ತುರ್ತು ಸಭೆ ನಡೆಸಲಾಯಿತು. ವಿದೇಶದಿಂದ ಬಂದವರಿಂದಲೇ ಸೋಂಕು ಹರಡ್ತಿದೆ. ಹೀಗಾಗಿ ಅವರ ಮೇಲೆ ಹೆಚ್ಚಿನ ನಿಗಾ ಇಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ವಿದೇಶಿ ರಾಯಭಾರಿಗಳಿಗೆ ಆಯಾ ದೇಶದ ಪ್ರಜೆಗಳ ಮೇಲೆ ನಿಗಾ ವಹಿಸಲು ಸೂಚಿಸುವ ಸಾಧ್ಯತೆ ಇದೆ. ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡದೆ ಸಂಜೆ ಎಲ್ಲವನ್ನು ಸಚಿವರು ಹೇಳ್ತಾರೆ ಎಂದು ಆಯುಕ್ತ ಪಂಕಜ್ ಕುಮಾರ್ ಪಾಂಡೆ ಹೊರ ನಡೆದರು.