ETV Bharat / state

ತುರ್ತು ಪರಿಸ್ಥಿತಿ ವೇಳೆ ಇಡೀ ದೇಶ ಜಾತಿ‌-ಮತ-ಪಂಥ ಮರೆತು ಒಂದಾಗಿತ್ತು: ಸಿಎಂ ಬೊಮ್ಮಾಯಿ

ಮಾಜಿ ಪ್ರಧಾನಿ ಇಂದಿರಾಗಾಂಧಿ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ತುರ್ತುಪರಿಸ್ಥಿತಿ ಹೇರಿದ್ದರು. ತುರ್ತುಪರಿಸ್ಥಿತಿ ವೇಳೆ ಮಾಡಬಾರದ್ದನ್ನು ಮಾಡಿದರು. ಎಲ್ಲ ರಾಜಕೀಯ ನಾಯಕರು, ಹಲವು ಸಂಘಟನೆಗಳ ನಾಯಕರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದರು. ಅವರದ್ದೇ ಪಕ್ಷದಲ್ಲಿ ತುರ್ತುಪರಿಸ್ಥಿತಿ ಸರಿಯಿಲ್ಲ ಎಂದವರನ್ನೂ ಜೈಲಿಗಟ್ಟಿದರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

emergency-dark-day-celebration
ತುರ್ತು ಪರಿಸ್ಥಿತಿ ವೇಳೆ ಇಡೀ ದೇಶ ಜಾತಿ‌-ಮತ-ಪಂಥ ಮರೆತು ಒಂದಾಗಿತ್ತು: ಸಿಎಂ ಬೊಮ್ಮಾಯಿ
author img

By

Published : Jun 25, 2022, 9:01 PM IST

ಬೆಂಗಳೂರು : ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಡೀ ದೇಶ ಜಾತಿ‌-ಮತ-ಪಂಥ ಮರೆತು ಒಂದಾಗಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನ ಬಸವ ಭವನದಲ್ಲಿ ಹಮ್ಮಿಕೊಂಡಿದ್ದ ತುರ್ತುಪರಿಸ್ಥಿತಿ ಕರಾಳ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಬಗ್ಗೆ ಈಗ ಕೆಲವರು ಬಹಳ ಮಾತನಾಡ್ತಾರೆ. ಕಾಂಗ್ರೆಸ್ ಬಗ್ಗೆ ಮೆಚ್ಚುಗೆ ಮಾತನಾಡೋರೂ ಕೂಡ ಎಮರ್ಜೆನ್ಸಿ ವಿರೋಧಿಸಿದ್ದರು. ಆತ್ಮವಂಚನೆ ಮಾಡಿಕೊಂಡು ಈಗ ಕಾಂಗ್ರೆಸ್ ಅನ್ನು ಹೊಗಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.

ತುರ್ತು ಪರಿಸ್ಥಿತಿ ವೇಳೆ ಇಡೀ ದೇಶ ಜಾತಿ‌-ಮತ-ಪಂಥ ಮರೆತು ಒಂದಾಗಿತ್ತು: ಸಿಎಂ ಬೊಮ್ಮಾಯಿ

ಮಾಜಿ ಪ್ರಧಾನಿ ಇಂದಿರಾಗಾಂಧಿ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ತುರ್ತುಪರಿಸ್ಥಿತಿ ಹೇರಿದ್ದರು. ತುರ್ತುಪರಿಸ್ಥಿತಿ ವೇಳೆ ಮಾಡಬಾರದ್ದನ್ನು ಮಾಡಿದರು. ಎಲ್ಲ ರಾಜಕೀಯ ನಾಯಕರು, ಹಲವು ಸಂಘಟನೆಗಳ ನಾಯಕರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದರು. ಅವರದ್ದೇ ಪಕ್ಷದಲ್ಲಿ ತುರ್ತುಪರಿಸ್ಥಿತಿ ಸರಿಯಿಲ್ಲ ಎಂದವರನ್ನೂ ಜೈಲಿಗೆ ಕಳಿಸಿದ್ದರು. ತುರ್ತುಪರಿಸ್ಥಿತಿ ವೇಳೆ ನಾನು ಹುಬ್ಬಳ್ಳಿಯಲ್ಲಿ ಸೆಕೆಂಡ್ ಪಿಯುಸಿ ವಿದ್ಯಾರ್ಥಿ. ಅನಂತ್ ಕುಮಾರ್ ನನ್ನ ಕ್ಲಾಸ್ ಮೇಟ್ ಆಗಿದ್ದರು. ರಾತ್ರಿ ಆಯ್ತು ಅಂದ್ರೆ ಕರಪತ್ರಗಳನ್ನು ಹಂಚುತ್ತಿದ್ದರು. ನಮ್ಮ ಊರಿನಲ್ಲಿ ಏನೂ ಆಗ್ತಿಲ್ವಲ್ಲ ಅಂತ ಅನಿಸ್ತು. ಆಗ ಎಲ್ಲ ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದೆವು. ಅದು ಬಹಳ ದೊಡ್ಡ ಸುದ್ದಿ ಆಯ್ತು. ಆಗ ಪೊಲೀಸರು ಬಂದ್ರು‌, ನಾವೆಲ್ಲ ಓಡಿಹೋದೆವು. ಬಂಧಿಸಿದವರನ್ನು ರಕ್ಷಿಸಲು ಅನಂತ್ ಕುಮಾರ್ ಹೋದರು. ನಾನು ಹೋಗಬೇಡ, ನಿನ್ನನ್ನೂ ಬಂಧಿಸ್ತಾರೆ ಅಂದೆ. ಆದರೂ ಹೋದ ಅನಂತ್ ಕುಮಾರ್ ರನ್ನೂ ಬಂಧಿಸಿ ನಾಲ್ಕು ತಿಂಗಳು ಜೈಲಿನಲ್ಲಿಟ್ಟಿದ್ದರು ಎಂದು ತುರ್ತುಪರಿಸ್ಥಿತಿಯ ಕರಾಳ ನೆನಪುಗಳನ್ನು ಸಿಎಂ ಬಿಚ್ಚಿಟ್ಟರು.

ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಕರಾಳ ದಿನದಿಂದ ಬಂದಿದೆ : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಜೈಲಿನಲ್ಲಿದ್ದರು. ಅನೇಕರನ್ನು ಜೈಲಿಗೆ ಹಾಕಿದ್ದರು. ಆದರೂ ಯಾರೂ ಧೃತಿಗೆಡಲಿಲ್ಲ. ಎಲ್ಲರಲ್ಲಿಯೂ ಅದಮ್ಯವಾದ ವಿಶ್ವಾಸ ಇತ್ತು. ದೇಶದ ಪ್ರಜಾಪ್ರಭುತ್ವದಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕರಾಳ ದಿನದಿಂದ ಬಂದಿದೆ. ಜನಶಕ್ತಿಯೇ ಇದಕ್ಕೆ ಮುಖ್ಯ ಕಾರಣ. ಇದನ್ನು ಸಂಭ್ರಮಿಸೋದಲ್ಲ. ಆದರೆ ಇಂಥ ದಿನ ಇತ್ತು ಅಂತ ತೋರಿಸೋದು ಮುಖ್ಯ. ದೇಶಕ್ಕಾಗಿ ಏನು ಮಾಡ್ತೀಯ ಅಂದರೆ ಪ್ರಾಣ ಕೊಡ್ತೀನಿ ಅಂತಿದ್ರು ಆಗಿನ ಯುವಕರು. ಆದರೆ ಈಗ ಕೇಳಿದ್ರೆ ದೇಶ ಕಟ್ಟಬೇಕು, ದೇಶಕ್ಕಾಗಿ ಬದುಕ್ತೀನಿ ಅನ್ನೋ ರೀತಿ ಇರಬೇಕು ಎಂದು ಹೇಳಿದರು.

ನಮ್ಮ ಸಂವಿಧಾನ ಅತ್ಯಂತ ಶ್ರೇಷ್ಠ ಸಂವಿಧಾನ ಆಗಿದೆ. ಬ್ರಿಟನ್ ನಲ್ಲಿ ಲಿಖಿತ ಸಂವಿಧಾನ ಇಲ್ಲ. ನಮ್ಮ ಸಂವಿಧಾನ ಬದಲಾದ ಆರ್ಥಿಕ ವ್ಯವಸ್ಥೆ ಗೆ ಹೊಂದಿಕೊಳ್ಳುವ ಸಂವಿಧಾನ ಆಗಿದೆ. ಎಲ್ಲರ ರಕ್ಷಣೆ, ಎಲ್ಲರ ಸ್ವಾಭಿಮಾನ ರಕ್ಷಣೆ ಅದರಲ್ಲಿ ಇದೆ. ಪ್ರಜಾಪ್ರಭುತ್ವ ಉಳಿಸಬೇಕು ಅಂದರೆ ಅದರ ಆಗು ಹೋಗುಗಳಲ್ಲಿ ಭಾಗಿಯಾಗಬೇಕು. ಅನೇಕ ಬದಲಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಅನೇಕ ಆರೋಪಗಳನ್ನು ಅವರ ಮೇಲೆ ಮಾಡಿದ್ದಾರೆ. ಜನಧನ್ ಮಾಡಿದ್ರು, ಸ್ವಚ್ಛ ಭಾರತ ಮಾಡಿದ್ದು ನರೇಂದ್ರ ಮೋದಿಯವರು. ನೇರವಾಗಿ ಖಾತೆಗೆ ಹಣ ಹಾಕುವ ವ್ಯವಸ್ಥೆ ಮಾಡಿದ್ದು ಮೋದಿ. ಮನೆ ಮನೆಗೆ ನೀರು ಕೊಡುವ ಯೋಜನೆ ಮಾಡಿದ್ದು ನರೇಂದ್ರ ಮೋದಿ. ಟೀಕೆ ಮಾಡುವವರು ಮಾಡಲಿ ಎಂದು ಹೇಳಿದರು.

ಭಾರತ ಪ್ರಬಲ ಪ್ರಜಾಪ್ರಭುತ್ವ ದೇಶ : ಯುವಕರೇ ಜೀವನ ರೂಪಿಸಿಕೊಳ್ಳಿ, ತರಬೇತಿ ಪಡೆದುಕೊಳ್ಳಿ ಎಂದರೆ ಅದಕ್ಕೂ ಟೀಕೆ. ಆದರೆ ಒಂದೊಳ್ಳೆ ಯೋಜನೆ ಮಾಡಬೇಕಾದ್ರೆ ಹೀಗೆಲ್ಲಾ ಆಗುತ್ತದೆ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸಿನಿಮಾ ಟ್ರೇಲರ್ ಇದ್ದಂಗೆ. ಅಮೆರಿಕದಲ್ಲೂ ಈಗ ಪ್ರಜಾಪ್ರಭುತ್ವ ಈಗ ಅಲ್ಲಾಡುತ್ತಿದೆ. ಭಾರತ ಒಂದೇ ಪ್ರಬಲ ಪ್ರಜಾಪ್ರಭುತ್ವ ಇಟ್ಟುಕೊಂಡು ಮುಂದೆ ಸಾಗುತ್ತಾ ಇರೋ ದೇಶ. ಇದು ನಮ್ಮ ನಾಯಕತ್ವ, ನರೇಂದ್ರ ಮೋದಿಯವರ ನಾಯಕತ್ವ ಎಂದರು.

ತುರ್ತು ಪರಿಸ್ಥಿತಿ ನಮ್ಮ ಸಂವಿಧಾನಕ್ಕೆ, ದೇಶಕ್ಕೆ ಸವಾಲಾಗಿತ್ತು. ದೈತ್ಯ ಶಕ್ತಿಯ ಎದುರು ಜನಶಕ್ತಿಯೇ ಗೆಲ್ಲುತ್ತದೆ ಎಂದು ಜೆಪಿ ಹೇಳಿದ್ರು. ಆಗ ಎಲ್ಲ ಯುವಕರು ಸಿಡಿದೆದ್ದಿದ್ರು. ಸ್ವತಂತ್ರ ಕಾಲದ ಕಿಚ್ಚು ಜನತೆಯಲ್ಲಿ ಇತ್ತು. ಪ್ರಜಾಪ್ರಭುತ್ವ ದಲ್ಲಿ ಜನಶಕ್ತಿಯೇ ಗೆಲ್ಲೋದು. ಇಂಥ ಕರಾಳ ಶಾಸನ, ದಿನಗಳು ಪ್ರಜಾಪ್ರಭುತ್ವ ವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಡಿ ವಿ ಸದಾನಂದ ಗೌಡ, ಸಂಸದರಾದ ಪಿ ಸಿ ಮೋಹನ್, ಮಾಜಿ ಶಾಸಕ ಲೆಹರ ಸಿಂಗ್ ಉಪಸ್ಥಿತರಿದ್ದರು. ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿದವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.

emergency-dark-day-celebration
ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿದವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೇ ಸಂದರ್ಭದಲ್ಲಿ ಸನ್ಮಾನಿಸಿದರು

ಓದಿ : ಯಾದಗಿರಿ ಹೊಸ ಬಸ್ ನಿಲ್ದಾಣದಲ್ಲಿ ಹೆಣ್ಣು ಶಿಶು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.