ಶಿವಾಜಿನಗರ: ಡಿಸೆಂಬರ್ 5ರಂದು ಶಿವಾಜಿನಗರ ಉಪಚುನಾವಣೆ ನಡೆಯಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಚುನಾವಣಾ ಅಯೋಗ ಕೂಡ ಉಪ ಕದನಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ಅಕ್ರಮ ತಡೆಯಲು ಹದ್ದಿನ ಕಣ್ಣುಇಟ್ಟಿದೆ ಎಂದು ಚುನಾವಣಾಧಿಕಾರಿ ನಟೇಶ್ ತಿಳಿಸಿದ್ದಾರೆ.
ಉಪಚುನಾವಣೆಗೆ ಚುನಾವಣಾ ಅಯೋಗ ಸಕಲ ಸಿದ್ದತೆ ಮಾಡಿಕೊಂಡಿದ್ಧು, ಜಿಲ್ಲಾ ಚುನಾವಣೆಗೆ ಅಗತ್ಯವಿರುವಷ್ಟು ಇವಿಎಂ ಮೆಷಿನ್ಗಳನ್ನು ನಮಗೆ ಹಸ್ತಾಂತರಿಸಿದ್ದು, ನಮ್ಮ ಸ್ಟ್ರಾಂಗ್ ರೂಂನಲ್ಲಿ ಇವಿಎಂ ಮೆಷಿನ್ಗಳನ್ನು ಇಡಲಾಗಿದೆ ಎಂದರು. ಅಲ್ಲದೆ ಚುನಾವಣೆ ನೀತಿ ಸಂಹಿತೆ ವಿಚಾರವಾಗಿ ಎಲ್ಲಾ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಏಜೆಂಟ್ರನ್ನ ಕರೆದು ಕೋಡ್ ಆಫ್ ಕಂಡೆಕ್ಟ್ ಬಗ್ಗೆ ಮಾಹಿತಿ ನೀಡಿದ್ದು. ಶಿವಾಜಿನಗರ ವ್ಯಾಪ್ತಿಯಲ್ಲಿ ನಾಲ್ಕು ಚೆಕ್ ಪೋಸ್ಟ್ಗಳಿದ್ದು, ಮೂರು ಪಾಳಿಗಳಲ್ಲಿ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಾಲ್ಕು ಚೆಕ್ ಪೋಸ್ಟ್ಗಳಲ್ಲಿ ಒಡಾಡುವ ವಾಹನಗಳನ್ನು ಚೆಕ್ ಮಾಡಿ ಚಾಲಕರ ಸಂಪೂರ್ಣ ಡಿಟೇಲ್ಸ್ ಸಂಗ್ರಹಿಸುತ್ತಿದ್ದೇವೆ ಎಂದರು.
ಅಭ್ಯರ್ಥಿಗಳು ನಾಲ್ಕರಿಂದ ಐದು ಜನರೊಂದಿಗೆ ಮನೆ ಮನೆಗೆ ಹೋಗಿ ಮತ ಕೇಳಲು ನಮ್ಮ ಕಡೆಯಿಂದ ಯಾವುದೇ ಅನುಮತಿ ಇಲ್ಲ ,ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಮಾಡಬೇಕಾದರೆ ಅನುಮತಿ ಕಡ್ಡಾಯವಾಗಿದೆ. ಅಲ್ಲದೆ ಈಗಾಗಲೇ ಶಿವಾಜಿನಗರ ಮತದಾರರ ಪಟ್ಟಿ ಅಂತಿಮವಾಗಿದ್ದು, 2 ಲಕ್ಷದ ಐದು ಸಾವಿರ ಮತದಾರರಿದ್ದು ಒಟ್ಟು 195 ಬೂತ್ಗಳಿವೆ ಎಂದು ಶಿವಾಜಿನಗರದ ಉಪಚುನಾವಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.