ETV Bharat / state

ಆಂತರಿಕ ಹಾಗೂ ಬಾಹ್ಯ ವರದಿ ಆಧರಿಸಿ ಟಿಕೆಟ್: ಸಿ ಟಿ ರವಿ - karnataka election

ಇಂಟರ್ನಲ್ ಮತ್ತು ಎಕ್ಸ್‌ಟರ್ನಲ್ ರಿಪೋರ್ಟ್ ಪಡೆಯುತ್ತೇವೆ. ಅದರ ಆಧಾರದ ಮೇಲೆ ಚುನಾವಣಾ ಸಮಿತಿ ಟಿಕೆಟ್ ನೀಡಲಿದೆ. ಜಾತಿ ಸಮೀಕರಣವೂ ಕೂಡ ಇಲ್ಲಿ ಲೆಕ್ಕಕ್ಕೆ ಬರಲಿದೆ. ಸಣ್ಣ ಸಮುದಾಯಕ್ಕೂ ಟಿಕೆಟ್ ಕೊಡಬೇಕು ಅನ್ನೋದರಲ್ಲಿ ನಾನು ಮೊದಲಿಗ. ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೂ ಆದ್ಯತೆ ಕೊಡಬೇಕು ಎಂದು ಸಿ ಟಿ ರವಿ ತಿಳಿಸಿದರು.

ಸಿ ಟಿ ರವಿ
ಸಿ ಟಿ ರವಿ
author img

By

Published : Dec 13, 2022, 4:05 PM IST

ಬೆಂಗಳೂರು: ಗುಜರಾತ್ ಫಲಿತಾಂಶ ನಮಗೆ ಆತ್ಮವಿಶ್ವಾಸ ಹೆಚ್ಚಿಸಿದ್ದರೆ, ಹಿಮಾಚಲ ಪ್ರದೇಶದ ಫಲಿತಾಂಶ ನಮಗೆ ಎಚ್ಚರಿಕೆ ನೀಡಿದೆ. ಹಿಮಾಚಲದಲ್ಲಿ ಕೂದಲೆಳೆಯಲ್ಲಿ ಸೋತಿದ್ದೇವೆ‌. ಎಚ್ಚರಿಕೆಯಿಂದ ಕೆಲಸ ಮಾಡಿದರೆ ಗೆಲ್ಲುತ್ತೇವೆ. ಇಲ್ಲದೇ ಹೋದರೆ ಹಿಮಾಚಲ ಮಾದರಿಯಲ್ಲಿ ಆಗಲಿದೆ. ಕರ್ನಾಟಕ ಚುನಾವಣೆ ವಿಷಯದಲ್ಲಿ ಪಕ್ಷ ಬಹಳ ಎಚ್ಚರಿಕೆಯಿಂದ ಮುನ್ನಡೆಯಬೇಕಿದೆ ಎನ್ನುವುದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೂಚ್ಯವಾಗಿ ರಾಜ್ಯದ ನಾಯಕರಿಗೆ ತಿಳಿಸಿದ್ದಾರೆ.

ಅಧಿಕೃತ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಜರಾತ್ ಮಾದರಿ ಅಂದರೆ ಬರೀ ಎಲೆಕ್ಷನ್ ಮಾದರಿ ಅಲ್ಲ. ಅಭಿವೃದ್ಧಿ, ಪ್ರಾಮಾಣಿಕ ನೇತೃತ್ವದ ಮಾದರಿಯನ್ನು ಟೀಕಿಸುತ್ತಿದ್ದ ಕಾಂಗ್ರೆಸ್, ಅದನ್ನ ಅಳವಡಿಸಿಕೊಳ್ಳಲು ಹೊರಟಿರೋದು ಸಕಾರಾತ್ಮಕ ಭಾವನೆ. ಕಾಂಗ್ರೆಸ್ ಈಗಲಾದರೂ ಹೊಸ ಬದಲಾವಣೆಗೆ ಹೊರಟಿದೆ ಅನ್ನೋದು ತಿಳಿಯುತ್ತಿದೆ ಎಂದರು.

ಚುನಾವಣಾ ಟಿಕೆಟ್ ಸಮಿತಿಯಿಂದ ಟಿಕೆಟ್: ಚುನಾವಣೆ ಗೆಲುವೊಂದೇ ನಮ್ಮ ಮಾನದಂಡ ಅಲ್ಲ. ಗೆಲುವು ಮುಖ್ಯ. ಆಡಳಿತ ನಡೆಸೋದು ನಮ್ಮ ಮಾನದಂಡ. ಕೆಲ ಶಾಸಕರು ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ನಡವಳಿಕೆಯಲ್ಲಿ ಸೋತಿದ್ದಾರೆ. ಉತ್ತಮ ಕೆಲಸದ ಜೊತೆ ನಡವಳಿಕೆಯೂ ಮುಖ್ಯ. ಇಂಟರ್ನಲ್ ಮತ್ತು ಎಕ್ಸ್‌ಟರ್ನಲ್ ರಿಪೋರ್ಟ್ ಪಡೆಯುತ್ತೇವೆ.

ಅದರ ಆಧಾರದ ಮೇಲೆ ಚುನಾವಣಾ ಸಮಿತಿ ಟಿಕೆಟ್ ನೀಡಲಿದೆ. ಜಾತಿ ಸಮೀಕರಣವೂ ಕೂಡ ಇಲ್ಲಿ ಲೆಕ್ಕಕ್ಕೆ ಬರಲಿದೆ. ಸಣ್ಣ ಸಮುದಾಯಕ್ಕೂ ಟಿಕೆಟ್ ಕೊಡಬೇಕು ಅನ್ನುವುದರಲ್ಲಿ ನಾನೇ ಮೊದಲಿಗ. ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೂ ಆದ್ಯತೆ ಕೊಡಬೇಕು ಎಂದು ಇದೇ ವೇಳೆ ಸಿಟಿ ರವಿ ತಿಳಿಸಿದರು.

ಬಿಎಸ್​​ವೈ ಜತೆ ಮುನಿಸು ಆರೋಪ ತಳ್ಳಿ ಹಾಕಿದ್ರು: ಯಡಿಯೂರಪ್ಪಗೆ ಮುನಿಸು ಮತ್ತು ಸಿಎಂ ಜೊತೆ ಭಿನ್ನಾಭಿಪ್ರಾಯ ವಿಚಾರವನ್ನು ಸಿಟಿ ರವಿ ತಳ್ಳಿಹಾಕಿದ್ದಾರೆ. ಯಡಿಯೂರಪ್ಪ ವಿಚಾರದಲ್ಲಿ ಆ ರೀತಿ ಏನೂ‌ ಇಲ್ಲ, ಎಲ್ಲ ಜನ ಸಂಕಲ್ಪ ಸಭೆಗಳಿಗೂ ಯಡಿಯೂರಪ್ಪ ಸಿಎಂ ಜೊತೆಗೇ ಬಂದಿದ್ದಾರೆ.

ಯಡಿಯೂರಪ್ಪ ಅವರಿಗೆ ರಾಷ್ಟ್ರೀಯ ಮಟ್ಟದ ಜವಾಬ್ದಾರಿಯೂ ಇದೆ. ನಮ್ಮ ಪಕ್ಷದ ವರಿಷ್ಠ ನಾಯಕರಲ್ಲಿ ಯಡಿಯೂರಪ್ಪ ಸಹ ಒಬ್ಬರು, ಅವರು ಬೇಸರಗೊಂಡಿದ್ದಾರೆ ಅನ್ನೋದು ಸುಳ್ಳು, ನಿನ್ನೆ ಅಹಮದಾಬಾದ್​ನಿಂದ ಒಟ್ಟಿಗೇ ಹೋಗೋಣ ಅಂತ ಬೊಮ್ಮಾಯಿ ಅವರೇ ಯಡಿಯೂರಪ್ಪ ಅವರನ್ನು ಕರೆದರು.

ಆದರೆ, ಯಡಿಯೂರಪ್ಪ ಅವರು ಇನ್ನೂ ಇಬ್ಬರ ಭೇಟಿ ಮಾಡಿ ಮಾತನಾಡಿ ಬರುವುದಾಗಿ ಹೇಳಿದರು, ಹಾಗಾಗಿ ಸಿಎಂ ಒಬ್ಬರೇ ಬಂದರು. 150+ ಸೀಟು ಗೆಲ್ಲಿಸೋದೇ ನನ್ನ ಗುರಿ ಅಂತ ಪದೇ ಪದೆ ಯಡಿಯೂರಪ್ಪ ಹೇಳಿದ್ದಾರೆ. ಯಡಿಯೂರಪ್ಪ ಬೊಮ್ಮಾಯಿ ಈಗಲೂ ಜೊತೆಗೆ ಇದಾರೆ, ಮುಂದೆಯೂ ಇರುತ್ತಾರೆ ಎಂದರು.

ಆಚಾರವೇ ಬೇರೆ- ವಿಚಾರವೇ ಬೇರೆ: ಶ್ರೀ ರಾಮ ಸೇನೆ ಸ್ಪರ್ಧೆ ಮತ್ತು ಜನಾರ್ದನ ರೆಡ್ಡಿ ಹೊಸ ಪಕ್ಷ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ, ಆಚಾರ ಬೇರೆ, ವಿಚಾರ ಬೇರೆ. ಹಲವು ವರ್ಷಗಳಿಂದ ಪಟ್ಟು ಹಾಕುವ ಕೆಲಸ ನಮ್ಮ ಪಕ್ಷ ಮಾಡುತ್ತಿದೆ. ನಮಗೆ ಹೆಚ್ಚು ಸೀಟು ಮಾಡಿಕೊಳ್ಳಲು ಕೆಲಸ ಮಾಡುತ್ತಿದ್ದೇವೆ. ವ್ಯಕ್ತಿಗೆ ಸ್ವಾತಂತ್ರ್ಯ ಇದೆ, ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ದಂಡಿನಲ್ಲಿ ಸೋದರಮಾವ ಅಂತ ನೋಡಲು ಸಾಧ್ಯವಿಲ್ಲ. ಕಾಲ ಬಂದಾಗ ಸೋದರ ಮಾವನ ವಿರುದ್ಧವೂ ಹೋರಾಡಬೇಕಿದೆ ಎಂದು ಶ್ರೀರಾಮ ಸೇನೆಗೆ ಟಾಂಗ್ ನೀಡಿದರು.

ಕಾಂಗ್ರೆಸ್ ಯಾತ್ರೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ, ನಮ್ಮ ಅಭಿವೃದ್ಧಿ ಯಾತ್ರೆಗೆ ಇದು ವಿರೋಧಿ ಯಾತ್ರೆ ಅನಿಸಲ್ಲ. ನಮ್ಮ ಯೋಜನೆ ವಿರುದ್ಧ ಗೆದ್ದು ಬರುವ ತಾಕತ್ತು ಯಾರಿಗೂ ಇಲ್ಲ. ನಾವು ನೋಡದಿರೋ ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆಶಿ, ಖರ್ಗೆ ಏನಲ್ಲ. ಅವರ ಅಂಗಳದಲ್ಲೇ ಅವರನ್ನ ಸೋಲಿಸಿದ್ದೇವೆ.

ಕಲಬುರ್ಗಿಯಲ್ಲಿ ಖರ್ಗೆ ಮಣಿಸಿದ್ದೇವೆ. ಈಗ ಅವರಿಗೆ ಅತಿಮಾನುಷ ಶಕ್ತಿ ಬಂದಿದೆಯಾ.? ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತರು. ಅವರಿಗೆ ಈಗ ಶಕ್ತಿ ಬಂದಿದೆಯಾ.? ಡಿಕೆಶಿ ಅವರಿಗೆ ಆ ದಿನಗಳ ಶಕ್ತಿ ಬಂದಿದೆಯಾ.? ಹೆಡ್ ಬುಷ್ ಸಿನಿಮಾ ನೋಡಿದರೆ ಅದು ಯಾರಿಗೆ ಸಂಬಂಧಿಸಿದ ವಿಚಾರ ಅನ್ನೋದು ಗೊತ್ತಾಗಲಿದೆ ಎಂದು ಟಾಂಗ್ ನೀಡಿದರು.

(ಓದಿ: ರಾಜ್ಯ ಬಿಜೆಪಿಯಲ್ಲಿ ಮಾಸ್ ಲೀಡರ್ ಕೊರತೆ: ಬಿಎಸ್‌ವೈ ಇಮೇಜ್‌ಗೆ ಹೈಕಮಾಂಡ್ ಜೈ?)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.