ETV Bharat / state

ಚುನಾವಣಾ ಸುಧಾರಣೆ ಮೇಲೆ ಚರ್ಚೆ: ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ಅಕ್ರಮಗಳ ಬಗ್ಗೆ ಶಾಸಕರ ಅಸಮಾಧಾನ

ಸರ್ಕಾರಿ ಅಧಿಕಾರಿಗಳು ಚುನಾವಣೆಯಲ್ಲಿ ನಿಲ್ಲುವುದಕ್ಕೆ ಸಮಯ ಫಿಕ್ಸ್ ಮಾಡಬೇಕು. ಆಸ್ತಿ ಉಳಿಸಿಕೊಳ್ಳಲು ನೇರವಾಗಿ ಚುನಾವಣೆಗೆ ಬರುತ್ತಾರೆ. ನಿವೃತ್ತಿ ಆದ ಬಳಿಕ ಐದು ವರ್ಷಗಳ ಕಾಲ ಚುನಾವಣೆಗೆ ನಿಲ್ಲಬಾರದು ಎಂದು ಜೆಡಿಎಸ್ ಶಾಸಕ ಲಿಂಗೇಶ್ ತಿಳಿಸಿದ್ದಾರೆ.

election-reforms-discussion-in-vidhanasabha
ಕಾಂಗ್ರೆಸ್ ಸದಸ್ಯ ಹೆಚ್. ಕೆ ಪಾಟೀಲ್
author img

By

Published : Mar 29, 2022, 8:56 PM IST

Updated : Mar 31, 2022, 7:39 PM IST

ಬೆಂಗಳೂರು: ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಮೇಲೆ ಚರ್ಚೆಯಲ್ಲಿ ಎಲ್ಲಾ ಸದಸ್ಯರು ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ, ಚುನಾವಣಾ ಅಕ್ರಮಗಳ ಬಗ್ಗೆ ತಮ್ಮ ಆಕ್ಷೇಪ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯ ಹೆಚ್. ಕೆ ಪಾಟೀಲ್ ಚುನಾವಣೆ ಸುಧಾರಣೆ ಮೇಲಿನ ಚರ್ಚೆ ಆರಂಭಿಸುತ್ತಾ, ಈ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು. ಮೊನ್ನೆ ಐದು ರಾಜ್ಯಗಳ ಚುನಾವಣೆ ನಡೆಯಿತು. ಜನ ಒಂದು ಪಕ್ಷಕ್ಕೆ ದೊಡ್ಡ ಬೆಂಬಲ ಕೊಟ್ರು. ಉತ್ತರ ಪ್ರದೇಶದಲ್ಲಿ ಮಂತ್ರಿ ಮಂಡಲ ಮಾಡಿದರು. 53 ಮಂತ್ರಿಗಳಲ್ಲಿ 22 ಮಂತ್ರಿಗಳು ಕ್ರಿಮಿನಲ್ ಕೇಸ್ ಉಳ್ಳವರಾಗಿರುತ್ತಾರೆ. ಇದರಿಂದ ಜನರಿಗೆ ಯಾವ ಅಭಿಪ್ರಾಯ ಬರುತ್ತೆ ನೀವೇ ಹೇಳಿ. ಇವಿಎಂ ಬಗ್ಗೆ ಸಾಕಷ್ಟು ಅನುಮಾ‌ನಗಳು ವ್ಯಕ್ತವಾಗುತ್ತಿವೆ. ಆದರೆ ಈ ಬಗ್ಗೆ ಚುನಾವಣಾ ಆಯೋಗ ಈ ಅನುಮಾನವನ್ನು ನಿವಾರಣೆ ಮಾಡುವ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಸದಸ್ಯ ಹೆಚ್. ಕೆ ಪಾಟೀಲ್ ಮಾತನಾಡಿದರು

ಚರ್ಚೆಯಲ್ಲಿ ಪಾಲ್ಗೊಂಡ ಶೃಂಗೇರಿ ಶಾಸಕ ರಾಜುಗೌಡ ಮಾತನಾಡುತ್ತಾ, ಶಾಸಕರು ಭ್ರಷ್ಟರಾಗಿದ್ದೇವೆ. ಅಧಿಕಾರಿಗಳನ್ನು ಭ್ರಷ್ಟರನ್ನಾಗಿ ಮಾಡಿದ್ದೇವೆ. ಮತ ಹಾಕೋ ಜನರನ್ನು ಭ್ರಷ್ಟರನ್ನಾಗಿ ಮಾಡಿದ್ದೇವೆ. ಈ ವ್ಯವಸ್ಥೆಗೆ ಕಡಿವಾಣ ಹಾಕಬೇಕು. ಚುನಾವಣೆಗಳು ಧರ್ಮದ ವಿಚಾರಗಳ ಮೇಲೆ ನಡೆಯುತ್ತಿವೆ. ಹಣವಿದ್ದವರು ಸದನಕ್ಕೆ ಬರುತ್ತಿದ್ದಾರೆ. ಇಂತಹ ಸನ್ನಿವೇಶ ಇರಬಾರದು. ಜನರು ಕೂಡ ಉತ್ತಮರನ್ನು ಆಯ್ಕೆ ಮಾಡಬೇಕು‌ ಎಂದು ಒತ್ತಾಯಿಸಿದರು.

ಜೆಡಿಎಸ್ ಶಾಸಕ ಲಿಂಗೇಶ್ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಚುನಾವಣೆಯಲ್ಲಿ ನಿಲ್ಲುವುದಕ್ಕೆ ಸಮಯ ಫಿಕ್ಸ್ ಮಾಡಬೇಕು. ಆಸ್ತಿ ಉಳಿಸಿಕೊಳ್ಳಲು ನೇರವಾಗಿ ಚುನಾವಣೆಗೆ ಬರುತ್ತಾರೆ. ನಿವೃತ್ತಿ ಆದ ಬಳಿಕ ಐದು ವರ್ಷಗಳ ಕಾಲ ಚುನಾವಣೆಗೆ ನಿಲ್ಲಬಾರದು. ಚುನಾವಣೆ ಬಳಿಕ ಒಂದು ಧರ್ಮದ ಮತಗಳು ಬೇಡ ಎಂದು ಹೇಳ್ತಾರೆ. ಹೀಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಎಂದು ಹೇಳಿಕೆ ಕೊಟ್ರು ಕ್ರಮ ತೆಗೆದುಕೊಳ್ಳುವುದಿಲ್ಲ. ಒಂದು ಪಕ್ಷ ಮುಸ್ಲಿಂರನ್ನ ವೋಲೈಕೆ ಮಾಡುತ್ತೆ. ಮತ್ತೊಂದು ಪಕ್ಷ ನಮಗೆ ಮುಸ್ಲಿಂ ಮತ ಬೇಡ ಎಂದು ಹೇಳ್ತಾರೆ.

ನಾನು ಮುಂದಿನ ಚುನಾವಣೆಗೆ ನಿಲ್ಲಬೇಕಾ, ಬೇಡ್ವಾ ಅನ್ನೋ ಭಯ ಶುರುವಾಗುತ್ತದೆ. ಭ್ರಷ್ಟಾಚಾರ ವ್ಯವಸ್ಥೆ ಭಯ ಶುರು ಮಾಡಿಸಿದೆ. ನಾನು ಶಾಸಕರ ಅನುದಾನದಲ್ಲಿ ಎರಡು ಲಕ್ಷ ರೂಪಾಯಿಯನ್ನು ದೇವಸ್ಥಾನಕ್ಕೆ ಕೊಟ್ರೆ, ನಾಲ್ಕು ಲಕ್ಷ ಖರ್ಚು ಮಾಡಿ ಜಾತ್ರೆ ಸಂದರ್ಭದಲ್ಲಿ ಹೆಲಿಕಾಪ್ಟರ್ ಅಲ್ಲಿ ಹೂ ಹಾಕ್ತಿದ್ದಾರೆ. ಅವರು ಮುಂದಿನ ಚುನಾವಣೆಯ ಅಭ್ಯರ್ಥಿ ಆಗಬೇಕು ಎಂದು ಓಡಾಡುತ್ತಿದ್ದಾರೆ. ಹಣ, ಹೆಂಡ ಕೊಡಬೇಕು. ಹೆಂಡ ಅಂದ್ರೆ ಬ್ರಾಂಡ್ ಇರೋದೇ ಕೊಡಬೇಕು. ಈ ವ್ಯವಸ್ಥೆ ಸರಿಪಡಿಸದಿದ್ರೆ ದೇಶದ ಭವಿಷ್ಯಕ್ಕೆ ಮಾರಕ ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆಲ್ಲ ಕಡಿವಾಣ ಹಾಕಬೇಕು. ಇಲ್ಲವಾದರೆ ಮುಂದೊಂದು ದಿನ ಮಿಲಿಟರಿ ಆಡಳಿತ ಬರಲಿದೆ. ಸರ್ವಾಧಿಕಾರಿ ಆಡಳಿತ ಬರಲಿದೆ. ಸಿದ್ರಾಮಣ್ಣ ಸಿಎಂ ಆಗ್ಲಿ ಅಂತ ಅವರ ಜಾತಿಯವರು ಪ್ರಚಾರ ಮಾಡ್ತಾರೆ. ಯಡಿಯೂರಪ್ಪ ಪರ ಲಿಂಗಾಯತರು ಪ್ರಚಾರ ಮಾಡ್ತಾರೆ. ಕುಮಾರಸ್ವಾಮಿಗೆ ಅವರ ಬೆಂಬಲಿಗರು ಪ್ರಚಾರ ಮಾಡ್ತಾರೆ. ಜಾತಿ ಜಾತಿಗಳ ನಡುವೆ ಪ್ರಚಾರ ನಡೆಯುತ್ತದೆ ಎಂದು ಸದನದ ಗಮನ ಸೆಳೆದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿ ಆಯ್ಕೆ ಮಾಡಲು ಎರಡು ಮಾನದಂಡ ಅನುಸರಿಸುತ್ತಿವೆ. ಒಂದು ಜಾತಿ, ಮತ್ತೊಂದು ಹಣ. ಇವೆರಡು ಇದ್ದರೆ ಮಾತ್ರ ಚುನಾವಣೆ ಟಿಕೆಟ್ ಸಿಗುತ್ತದೆ. ಎಲೆಕ್ಟ್ರೋಲ್ ಬಾಂಡ್ ಕೊಡುವ ವ್ಯವಸ್ಥೆ ಇದೆ. ಅದರಿಂದ ಬಾಂಡ್ ಖರೀದಿಸಿದವರು ಅಧಿಕಾರದಲ್ಲಿರುವ ಪಕ್ಷದಿಂದ ಅನುಕೂಲ ಪಡೆಯುತ್ತಾರೆ. ಹೀಗಾಗಿ, ಜನರು ತೆರಿಗೆ ನೀಡುವ ಮೊತ್ತದಲ್ಲಿ ಶೇ.1 ರಷ್ಟು ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವ್ಯವಸ್ಥೆ ಜಾರಿಗೆ ತರಬೇಕು. ಇದರಿಂದ ಪಾರದರ್ಶಕ ಹಣ ಸಂಗ್ರಹವಾಗುತ್ತದೆ ಎಂದರು.

ದೇಶದಲ್ಲಿ ಯಾವುದೇ ವಿಶ್ವವಿದ್ಯಾಲಯ ರಾಜಕೀಯ ಪಾಠ ಹೇಳಿಕೊಡುವುದಿಲ್ಲ. ಜನರ ಜೊತೆ ಬೆರೆತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಉಳ್ಳವರು ಮಾತ್ರ ರಾಜಕೀಯ ಮಾಡಲು ಸಾಧ್ಯ. ಹೆಚ್ಚು ಕಲಿತವರು ಒಳ್ಳೆಯ ರಾಜಕೀಯ ಮಾಡುತ್ತಾರೆ ಎಂದು ಹೇಳಲು ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಓದಿ: ಹೆಚ್ಚೆಚ್ಚು ಸಾಲ, ಹೆಚ್ಚೆಚ್ಚು ತುಪ್ಪ!?; ಧನವಿನಿಯೋಗ, ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ..

Last Updated : Mar 31, 2022, 7:39 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.