ನೆಲಮಂಗಲ: ಬಹುನಿರೀಕ್ಷಿತ, ಭಾರಿ ಪೈಪೋಟಿಗೆ ವೇದಿಕೆಯಾಗಿದ್ದ ಬರಗೇನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣಾ ಫಲಿತಾಂಶ ಹೊರಬಿದ್ದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ, ಸೋಂಪುರ ಹೋಬಳಿಯ ಬರಗೇನಹಳ್ಳಿಯ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಸಾಲಗಾರರ ಕ್ಷೇತ್ರದ ಸಾಮಾನ್ಯ ಐದು ಸ್ಥಾನಗಳಿಗೆ ಹಾಗೂ ಸಾಲಗಾರರ ಕ್ಷೇತ್ರದ ಹಿಂದುಳಿದ ವರ್ಗದ ಎರಡು ಸ್ಥಾನಗಳಿಗೆ ನಡೆದ ಐದು ವರ್ಷದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಈ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದ ಸಾಮಾನ್ಯ ವರ್ಗದ ಐದು ಸ್ಥಾನಗಳಲ್ಲಿ ಶಿವರಾಮಯ್ಯ ಬಿ.ಹೆಚ್ 169 ಮತ, ನಾರಾಯಣಪ್ಪ 168 ಮತ, ಪುಟ್ಟಗಂಗಯ್ಯ.ಬಿ.ಆರ್. 140 ಮತ, ಮಾಚನಹಳ್ಳಿ ಜಯಣ್ಣ 135 ಮತ, ನಾರಾಯಣಪ್ಪ ಅವೇರಹಳ್ಳಿ 130 ಮತ ಪಡೆದು ವಿಜಯಶಾಲಿಯಾಗಿದ್ದಾರೆ.
ಇನ್ನು ಸಾಲಗಾರರ ಕ್ಷೇತ್ರದ ಹಿಂದುಳಿದ ವರ್ಗದ 2 ಸ್ಥಾನಗಳಿಗೆ ತಿಮ್ಮಪ್ಪ. ಜಿ. ಹೆಚ್ 142 ಮತ, ರಂಗಪ್ಪ 152 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಮರಿಬೈರಯ್ಯ 110 ಮತ, ಪರಿಶಿಷ್ಟ ಪಂಗಡದ 1 ಸ್ಥಾನಕ್ಕೆ ಹೊನ್ನಗಂಗಯ್ಯ 163 ಮತ ಪಡೆದು ಆಯ್ಕೆಯಾಗಿದ್ದಾರೆ.
ಮಹಿಳಾ ಮೀಸಲು ಕ್ಷೇತ್ರದ 2 ಸ್ಥಾನಗಳಿಗೆ ಭಾಗ್ಯಮ್ಮ 173 ಮತ, ಶಾರಮ್ಮ 147 ಮತ ಪಡೆದು ಆಯ್ಕೆಯಾಗಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ ಒಂದು ಸ್ಥಾನದ ಕ್ಷೇತ್ರಕ್ಕೆ ಬಿ. ಎನ್. ಪರಮೇಶ್ 20 ಮತ ಪಡೆದು ಜಯಗಳಿಸಿದ್ದು ವಿಶೇಷವಾಗಿತ್ತು.
ಚುನಾವಣಾಧಿಕಾರಿ ಆರ್. ರಾಮಾಂಜಿನೇಯ ಮಾತನಾಡಿ, ಸಹಕಾರ ಸಂಘದಲ್ಲಿ 1800 ಕ್ಕೂ ಹೆಚ್ಚು ಸದಸ್ಯರಿದ್ದು, ಸಂಖ್ಯೆ ಒಟ್ಟು ಮತದಾರರ ಪಟ್ಟಿಯನ್ನು ಸಹಕಾರ ಸಂಘಗಳ ಕಾಯ್ದೆ, ಕಾನೂನು ಹಾಗೂ ಸಂಘದ ಬೈಲಾ ಪ್ರಕಾರ 5ರಲ್ಲಿ ಮೂರು ಮಹಾಸಭೆ ಹಾಜರಾತಿ, 3 ವರ್ಷಗಳ ಕನಿಷ್ಠ ವ್ಯವಹಾರದ ಮಾನದಂಡದ ಮೇಲೆ ತಯಾರಿಸಲಾಗಿತ್ತು. ಸದ್ಯ ಒಟ್ಟು 261 ಸದಸ್ಯರು ಮತ ಚಲಾಯಿಸಿದರು ಎಂದು ಮಾಹಿತಿ ನೀಡಿದ್ರು.