ETV Bharat / state

ಚುನಾವಣಾ ಆಯೋಗದಿಂದ 4ನೇ "ಜನರಲ್ ಅಸೆಂಬ್ಲಿ ಆಫ್ ಎ ವೆಬ್" ಕಾರ್ಯಕ್ರಮಕ್ಕೆ ಚಾಲನೆ - Election Commission of India

ವಿವಿಧ ಪ್ರಜಾಪ್ರಭುತ್ವ ರಾಷ್ಟ್ರಗಳ ಚುನಾವಣಾ ಆಯೋಗದ ಪ್ರತಿನಿಧಿಗಳು ಭಾಗವಹಿಸುವ ಭಾರತ ಚುನಾವಣಾ ಆಯೋಗದ 4ನೇ ಜನರಲ್ ಅಸೆಂಬ್ಲಿ ಆಫ್ ವೆಬ್ ಕಾರ್ಯಕ್ರಮಕ್ಕೆ ಇಂದು ಅಧಿಕೃತ ಚಾಲನೆ ದೊರೆಯಿತು.

"ಜನರಲ್ ಅಸೆಂಬ್ಲಿ ಆಫ್ ಎ ವೆಬ್" ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ
author img

By

Published : Sep 3, 2019, 11:08 PM IST

ಬೆಂಗಳೂರು: ಭಾರತ ಚುನಾವಣಾ ಆಯೋಗದಿಂದ ಆಯೋಜಿಸಿರುವ 4ನೇ ಜನರಲ್ ಅಸೆಂಬ್ಲಿ ಆಫ್ ಎ ವೆಬ್ ಕಾರ್ಯಕ್ರಮದ ಅಧಿಕೃತ ಉದ್ಘಾಟನೆ ಇಂದು ನೆರವೇರಿತು.

ವಿಶ್ವದ ವಿವಿಧ ಪ್ರಜಾಪ್ರಭುತ್ವ ರಾಷ್ಟ್ರಗಳ ಚುನಾವಣಾ ಸಂಸ್ಥೆಗಳು ಮತ್ತು ಅಧಿಕಾರಿಗಳ ಅಂತಾರಾಷ್ಟ್ರೀಯ ಸಮ್ಮೇಳನ ಸೆ.2ರಂದು ಆರಂಭವಾಗಿದ್ದು, ಇದರ ಅಧಿಕೃತ ಉದ್ಘಾಟನಾ ಸಮಾರಂಭ ನಗರದ ತಾಜ್ ವೆಸ್ಟೆಂಡ್ ಹೊಟೇಲಿನಲ್ಲಿ ಇಂದು ಜರುಗಿತು.

ಕಾರ್ಯಕ್ರಮದಲ್ಲಿ ಒಟ್ಟು 54ಕ್ಕೂ ಹೆಚ್ಚು ಪ್ರಜಾಪ್ರಭುತ್ವ ದೇಶಗಳ ಚುನಾವಣಾ ಆಯೋಗದ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ 145ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು, ಆಯೋಗದ ಅನೇಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

election-commission-of-india-aweb-program-inauguration
"ಜನರಲ್ ಅಸೆಂಬ್ಲಿ ಆಫ್ ಎ ವೆಬ್" ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ

ಸಮ್ಮೇಳನದ ಕೊನೆಯ ದಿನ ಸೆ.4 ರಂದು, "ಚುನಾವಣೆಗಳಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನದ ಉಪಕ್ರಮಗಳು ಮತ್ತು ಸವಾಲುಗಳು" ಎಂಬ ವಿಷಯದ ಮೇಲೆ ಚರ್ಚೆ ನಡೆಯಲಿದೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಅಶೋಕ್ ಲವಾಸಾ, ಸುಶೀಲ್ ಚಂದ್ರ ಎನ್ ಮತ್ತು ರೊಮೇನಿಯಾ ಚುನಾವಣಾ ಆಯೋಗದ ನಿರ್ಗಮಿತ ಅಧ್ಯಕ್ಷ ಅಯಾನ್ ಮಿಂಕು ರಾಡುಲೆಸ್ಕು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Intro:newsBody:ಚುನಾವಣಾ ಆಯೋಗದ 4ನೇ ಜನರಲ್ ಅಸೆಂಬ್ಲಿ ಆಫ್ ಎ ವೆಬ್ ಕಾರ್ಯಕ್ರಮ ಆರಂಭ

ಬೆಂಗಳೂರು: ಭಾರತ ಚುನಾವಣಾ ಆಯೋಗವು 4ನೇ ಜನರಲ್ ಅಸೆಂಬ್ಲಿ ಆಫ್ ಎ ವೆಬ್ ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಂಡಿದ್ದು, ಇಂದು ಸಮಾರಂಭದ ಅಧಿಕೃತ ಉದ್ಘಾಟನೆ ನಡೆಯಿತು.
ವಿಶ್ವದ ಎಲ್ಲಾ ಚುನಾವಣಾ ಸಂಸ್ಥೆಗಳ ಸಂಘ ಅಂತರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದು ನಗರದ ತಾಜ್ ವೆಸ್ಟೆಂಡ್ ಹೊಟೇಲಿನಲ್ಲಿ ಸೆ. 2ರಂದು ಆರಂಭವಾಗಿದ್ದು, ಇಂದು ಅಧಿಕೃತ ಉದ್ಘಾಟನಾ ಸಮಾರಂಭ ನೆರವೇರಿತು.
ಈ ಸಮ್ಮೇಳನದಲ್ಲಿ ಒಟ್ಟು 54ಕ್ಕೂ ಹೆಚ್ಚು ಪ್ರಜಾಪ್ರಭುತ್ವ ದೇಶಗಳ ಚುನಾವಣಾ ಆಯೋಗದ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ 145ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಸೇರಿದಂತೆ ಆಯೋಗದ ಅನೇಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಮ್ಮೇಳನದ ಕೊನೆಯ ದಿನ ಸೆ.4 ರಂದು ಚುನಾವಣೆಗಳಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನದ ಉಪಕ್ರಮಗಳು ಮತ್ತು ಸವಾಲುಗಳು ವಿಷಯದ ಮೇಲೆ ಚರ್ಚೆ ನಡೆಯಲಿದ್ದು ತದನಂತರ ಸಮ್ಮೇಳನ ಹಾಗೂ ಕೈಗೊಂಡ ನಿರ್ಣಯಗಳ ಕುರಿತು ಮಧ್ಯಾಹ್ನ 2.30 ಕ್ಕೆ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಇಂದು ಉದ್ಘಾಟನಾ ಸಮಾರಂಭದಲ್ಲಿ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಎಸ್ ಅಶೋಕ್ ಲವಾಸಾ, ಎಸ್ ಸುಶೀಲ್ ಚಂದ್ರ ಎನ್, ರೊಮೇನಿಯಾದ ಚುನಾವಣಾ ಆಯೋಗದ ನಿರ್ಗಮಿತ ಅಧ್ಯಕ್ಷ ಅಯಾನ್ ಮಿಂಕು ರಾಡುಲೆಸ್ಕು ಅವರು ಭಾಗವಹಿಸಿದ್ದರು.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.