ಬೆಂಗಳೂರು : ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘಕ್ಕೆ ನೂತನ ರಾಜ್ಯಾಧ್ಯಕ್ಷರಾಗಿ ಗವಿಸಿದ್ದನಗೌಡ ಪರನಗೌಡ ಪಾಟೀಲ್ ಆಯ್ಕೆ ಆಗಿದ್ದಾರೆ. 2022ರಿಂದ ಮುಂದಿನ ಐದು ವರ್ಷದವರೆಗೆ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿದ್ದು, ಇಂದು ಪದಗ್ರಹಣ ಕಾರ್ಯಕ್ರಮವೂ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.
ಪದಗ್ರಹಣದ ಬಳಿಕ ಮಾತನಾಡಿದ ಗವಿಸಿದ್ದನಗೌಡ ಅವರು, ಸಂಘದ ಬೆಳವಣಿಗೆ ಎಲ್ಲರ ಸಹಾಯ, ಸಹಕಾರವೂ ಬೇಕಾಗಿದೆ. ನೀವೂ ಜೊತೆಯಾಗಬೇಕು. ಸಭೆಗಳು ನಡೆದಾಗ ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಸೂಪರ್ ವೈಸ್ ಕೆಲಸ ನಾನು ಮಾಡಿದ್ದರೆ, ನೀವೆಲ್ಲ ಗ್ರೌಂಡ್ ವರ್ಕ್ ಮಾಡಬೇಕು.
ಕೊರೊನಾದಿಂದಾಗಿ ನಾವೆಲ್ಲ ಎಲ್ಲಿ ಇದ್ದೀವೋ ಅಲ್ಲೇ ಇದ್ದು ಮುಂದುವರೆದಿಲ್ಲ. ಹೀಗಾಗಿ, ಸಮರೋಪಾದಿಯಲ್ಲಿ ಪಂಚಮಸಾಲಿ ಸಂಘವನ್ನ ಅಭಿವೃದ್ಧಿ ಪಡಿಸಬೇಕು ಅಂತಾ ತಿಳಿಸಿದರು.
ಇದನ್ನೂ ಓದಿ : ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಡಿಕೆಶಿಗೆ ಜಮೀರ್ ಅಹ್ಮದ್ ತಿರುಗೇಟು