ETV Bharat / state

ಹಿಜಾಬ್ ವಿವಾದ: ಕೈ ಮುಸ್ಲಿಂ ಶಾಸಕರ ಜೊತೆ ಶಿಕ್ಷಣ ಸಚಿವ ನಾಗೇಶ್ ಸೌಹಾರ್ದದ ಸಭೆ; ಮನವಿ ಪತ್ರ ಸಲ್ಲಿಕೆ - ಮುಸ್ಲಿಂ ಶಾಸಕರ ಜೊತೆ ಶಿಕ್ಷಣ ಸಚಿವ ನಾಗೇಶ್ ಸೌಹಾರ್ದ ಸಭೆ

ಕೋರ್ಟ್ ಆರ್ಡರ್​​ಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಎರಡು ಮೂರು ಕಡೆ ಆದ ಗೊಂದಲದ ಬಗ್ಗೆ ಚರ್ಚೆ ಆಯ್ತು. ಬುರ್ಖಾ ಹಾಕೊಂಡು ಯಾವುದೇ ಕ್ಲಾಸ್ ರೂಮ್ ನಲ್ಲಿ ಪಾಠ ಮಾಡೋಕೆ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ. ಸಿ ನಾಗೇಶ್ ತಿಳಿಸಿದರು.

educational-minister-b-c-nagesh-spoke-on-hijab-issue-with-muslim-mlas-at-bengaluru
ಕೈ ಮುಸ್ಲಿಂ ಶಾಸಕರ ಜೊತೆ ಶಿಕ್ಷಣ ಸಚಿವ ನಾಗೇಶ್ ಸೌಹಾರ್ದದ ಸಭೆ
author img

By

Published : Feb 17, 2022, 3:50 PM IST

Updated : Feb 17, 2022, 6:23 PM IST

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ಹಿನ್ನಲೆ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಅವರಿಂದ ಮುಸ್ಲಿಂ ಕೈ ಶಾಸಕರ‌ ಜೊತೆ ಸಭೆ ನಡೆಸಿದರು. ಈ ವೇಳೆ, ಮುಸ್ಲಿಂ ಶಾಸಕರು ಸಚಿವರಿಗೆ ಹಿಜಾಬ್ ಗೊಂದಲ ನಿವಾರಿಸುವಂತೆ ಮನವಿ ಪತ್ರ ಸಲ್ಲಿಸಿದರು.

ಸಭೆ ಬಳಿಕ ಮಾತನಾಡಿದ ಶಿಕ್ಷಣ ಸಚಿವ ಬಿ. ಸಿ ನಾಗೇಶ್, ಮುಸ್ಲಿಂ ನಾಯಕರ ಜೊತೆ ಸೌಹಾರ್ಧಯುತವಾಗಿ ಭೇಟಿಯಾಗಿದ್ದೇನೆ. ಕೆಲವು ಕಡೆ ಆಗಿರೋ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ವಿ. ಕೋರ್ಟ್ ಆರ್ಡರ್ ಎಲ್ಲಾ ಫಾಲೋ ಮಾಡಬೇಕು ಅಂತಾ ಚರ್ಚೆ ಮಾಡಿದ್ವಿ. ಬುರ್ಖಾ ಬಿಚ್ಚಿಸಿರೋ ಬಗ್ಗೆ ಮಾತನಾಡಿದ್ರು. ನೌಕರರಿಗೆ ಯಾವುದೇ ನಿರ್ಬಂಧ ಇಲ್ಲ ಅಂತಾ ಹೇಳಿದರು. ಶಿಕ್ಷಕಿಯರು ಬುರ್ಖಾ ಧರಿಸಬಾರದು ಅಂತಾ ಹೇಳಲಾಗಿದೆ.

ಕೈ ಮುಸ್ಲಿಂ ಶಾಸಕರ ಜೊತೆ ಶಿಕ್ಷಣ ಸಚಿವ ನಾಗೇಶ್ ಸೌಹಾರ್ದದ ಸಭೆ

ಬುರ್ಖಾ ಧರಿಸಿ ಸರಿಯಾಗಿ ಪಾಠ ಮಾಡಲು ಆಗಲ್ಲ. 1.20 ಲಕ್ಷ ಅಲ್ಪಸಂಖ್ಯಾತರ ಮಕ್ಕಳಲ್ಲಿ 80 ಸಾವಿರ ಹೆಣ್ಣು ಮಕ್ಕಳು ಇದ್ದಾರೆ. ಇವತ್ತು 38 ಮಕ್ಕಳು ಶಾಲೆ ಹೋಗದೇ ಮರಳಿದ್ದಾರೆ. ಹಿಜಾಬ್ ತೆಗೆಯಲ್ಲ ಅಂತಾ ಶಾಲೆಗೆ ಹೋಗಿಲ್ಲ. ಶಾಲೆಗೆ ಬಾರದ ಮಕ್ಕಳ ಕಡೆ ಒತ್ತು ಕೊಡ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕೋರ್ಟ್​ ಆದೇಶ ನಾವೆಲ್ಲ ಪಾಲನೆ ಮಾಡಲೇಬೇಕು: ಕೋರ್ಟ್ ಆರ್ಡರ್​​ಗಳನ್ನು ನಾವೆಲ್ಲರೂ ಪಾಲನೆ ಮಾಡಬೇಕು. ಎರಡು ಮೂರು ಕಡೆ ಆದ ಗೊಂದಲದ ಬಗ್ಗೆ ಚರ್ಚೆ ಆಯ್ತು. ಬುರ್ಖಾ ಹಾಕೊಂಡು ಯಾವುದೇ ಕ್ಲಾಸ್ ರೂಮ್​ನಲ್ಲಿ ಪಾಠ ಮಾಡೋಕೆ ಅವಕಾಶ ಇಲ್ಲ. ಟೀಚರ್ಸ್​ಗೆ ಡ್ರೆಸ್ ಕೋಡ್ ಇಲ್ಲ ಅಂತಾ ಹೇಳಿದ್ದೇವೆ. ನಿನ್ನೆ 112 ಮಂದಿ, ಇವತ್ತು 38 ಜನ ವಿದ್ಯಾರ್ಥಿಗಳು ವಾಪಸ್​​​ ಹೋಗಿದ್ದಾರೆ. 80 ಸಾವಿರ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಇದ್ದಾರೆ. ಇದರಲ್ಲಿ ಬಹುತೇಕರು ಕೋರ್ಟ್ ಆದೇಶ ಪಾಲನೆ ಮಾಡಿದ್ದಾರೆ. ಆದರೆ, ಕೆಲವೇ ಕೆಲವು ಮಂದಿ ಮಾತ್ರ ತರಗತಿಗೆ ಬಂದಿಲ್ಲ ಎಂದರು.

ನಿಯಮ ಇರುವ ಪದವಿ ಕಾಲೇಜುಗಳಲ್ಲೂ ಕೋರ್ಟ್​ ಆದೇಶ ಅನ್ವಯ: ಡಿಗ್ರಿ ಕಾಲೇಜುಗಳಲ್ಲಿ ಡ್ರೆಸ್ ಕೋಡ್ ಇಲ್ಲ. ಡ್ರೆಸ್ ಕೋಡ್ ಇರೋ ಕಡೆ ಪಾಲನೆ ಮಾಡಬೇಕು. ನಿನ್ನೆ 11 ಕಾಲೇಜುಗಳಲ್ಲಿ ತೀವ್ರ ವಿರೋಧ ಆಗಿತ್ತು. ಇವತ್ತು ನಾಲ್ಕು ಶಾಲೆಗಳಲ್ಲಿ ಮಾತ್ರ ಕಂಡು ಬಂದಿದೆ. ಕೆಲವೇ ಮಕ್ಕಳು ಎಮೋಷನಲ್​​ನಿಂದ ಶಾಲೆಗಳನ್ನ ಬಿಟ್ಟಿದ್ದಾರೆ. ಸ್ವಲ್ಪ ದಿನದಲ್ಲೇ ಇದು ಸರಿಹೋಗುತ್ತೆ‌. ಸಿಎಫ್​​​​​ಐ ನವರು ಇದರ ಹಿಂದೆ ನಾವಿದ್ದೀವಿ ಅಂತಾ ಹೇಳಿಕೊಂಡಿದ್ದಾರೆ. ಯಾರ ಕುಮ್ಮಕ್ಕು ಅನ್ನೋ ಬಗ್ಗೆ ತನಿಖೆ ನಡೀತಿದೆ. ತನಿಖೆಯಿಂದ ಗೊತ್ತಾಗುತ್ತದೆ ಎಂದು ತಿಳಿಸಿದರು.

ಸಮವಸ್ತ್ರ ನೀತಿಯಲ್ಲಿ ಯಾವೆಲ್ಲಾ ಗೊಂದಲಗಳಿವೆ ಅದನ್ನು ನಿವಾರಿಸುವ ಚಿಂತನೆ ಇದೆ. ಹೈಕೋರ್ಟ್ ಆದೇಶ ನಂತರ ತೀರ್ಮಾನ ಮಾಡ್ತೀವಿ. ಕೆಲವೊಂದು ಗೊಂದಲಗಳಿವೆ, ಎಲ್ಲಾ ಚರ್ಚೆ ಮಾಡ್ತೇವೆ ‌ಎಂದು ತಿಳಿಸಿದರು.

ಹಿಜಾಬ್ ವಿವಾದದ ಜೊತೆಗೆ ಮಕ್ಕಳು ಹಣೆಗೆ ಬೊಟ್ಟು ಅಥವಾ ಕೈ , ಕಿವಿ ಹಾಕಿಕೊಂಡು ಬರುವ ವಸ್ತುಗಳು , ಹೂ ಮುಡ್ಕೊಂಡು ಬರುವ ಬಗ್ಗೆ ವಿವಾದ ಸೃಷ್ಟಿ ಆಗುತ್ತಿರುವ ವಿಚಾರದ ಬಗ್ಗೆ ಸಚಿವರ ಪ್ರತಿಕ್ರಿಯಿಸಿದ ಅವರು, ಈ ವಿಚಾರ ಮೊದಲು ಕೋರ್ಟ್​ನಲ್ಲಿ ಅರ್ಜಿದಾರರ ಪರ ವಕೀಲರು ಎತ್ತಿದ್ದಾರೆ.

ನಾವು ಎಲ್ಲೂ ಈ ಬಗ್ಗೆ ಮಾತನಾಡಿಲ್ಲ. ಇವೆಲ್ಲವೂ ಸಮವಸ್ತ್ರಕ್ಕೆ ಬರುವುದಿಲ್ಲ. ಬಹಳ ಹಿಂದಿನಿಂದಲೂ ಮಕ್ಕಳು ಈ ಅಲಂಕಾರಿಕ ವಸ್ತುಗಳನ್ನು ಹಾಕಿಕೊಂಡು ಬರುತ್ತಿದ್ದಾರೆ. ಆದರೆ, ಈ ವಸ್ತುಗಳನ್ನು ಹಾಕಿಕೊಂಡು ಬಂದಿಲ್ಲ ಎಂದರೂ ಯಾರು ಕೇಳುವುದಿಲ್ಲ. ಈ ಹಿಂದೆ ಸಹ ಕೇಳ್ತಾ ಇರಲಿಲ್ಲ ಎಂದು ಸಮಜಾಯಿಷಿ ನೀಡಿದರು. ಸಭೆಯಲ್ಲಿ ಜಮೀರ್ ಅಹ್ಮದ್, ಎನ್. ಎ. ಹ್ಯಾರೀಸ್, ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್, ಸಿಎಂ ಇಬ್ರಾಹಿಂ, ರಹೀಂಖಾನ್ ಭಾಗಿಯಾಗಿದ್ದರು.

ಓದಿ: ಡಿಕೆಶಿ ಸಿಎಂ ಆದ್ರೆ ರಾಜ್ಯವನ್ನೇ ಗೂಂಡಾ ರಾಜ್ಯವನ್ನಾಗಿ ಮಾಡುತ್ತಾರೆ: ರೇಣುಕಾಚಾರ್ಯ

Last Updated : Feb 17, 2022, 6:23 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.