ETV Bharat / state

ಉದ್ಯೋಗ ಸೃಷ್ಟಿಗಾಗಿ 8 ಹೊಸ ಡಿಪ್ಲೊಮಾ ಕೋರ್ಸ್​​​​​ಗಳಿಗೆ ಚಾಲನೆ: ಡಾ.ಸಿ.ಎನ್.ಅಶ್ವತ್ಥ​ ನಾರಾಯಣ್ - ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ಚಾಲನೆ

ಡಿಪ್ಲೋಮಾದಲ್ಲಿ ಸದ್ಯ 33 ಕೋರ್ಸ್​ಗಳು ಇವೆ. ಇವುಗಳಲ್ಲಿ ಹಳೆಯ, ಅಪ್ರಸ್ತುತ ಕೋರ್ಸುಗಳನ್ನು ಕೈಬಿಡಲಾಗಿದೆ. ಅಲ್ಲದೇ 8 ಹೊಸ ಕೋರ್ಸುಗಳನ್ನು ಪ್ರಾರಂಭಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್​. ಅಶ್ವತ್ಥ ನಾರಾಯಣ್​ ಎಂದು ಹೇಳಿದರು.

education-minister-ashwath-narayana
ಅಶ್ವತ್ಥ್​ ನಾರಾಯಣ್
author img

By

Published : Aug 12, 2021, 4:54 PM IST

ಬೆಂಗಳೂರು: ಉದ್ಯೋಗ ಮಾರುಕಟ್ಟೆ ಹಾಗೂ ಕೈಗಾರಿಕೆಗಳ ಬೇಡಿಕೆಗಳಿಗೆ ತಕ್ಕಂತೆ ಮಾನವ ಸಂಪನ್ಮೂಲವನ್ನು ಒದಗಿಸುವ ಉದ್ದೇಶದಿಂದ ಎಂಟು ಹೊಸ ಡಿಪ್ಲೊಮಾ ಕೋರ್ಸ್​ಗಳಿಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ​​​ ನಾರಾಯಣ್ ಚಾಲನೆ ನೀಡಿದರು.

ವಿಧಾನಸೌಧದಲ್ಲಿ ಇಂದು ನೂತನ ಕೋರ್ಸ್​​​ಗಳಿಗೆ ಹಸಿರು ನಿಶಾನೆ ತೋರಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚೆಚ್ಚು ಉದ್ಯೋಗಾವಕಾಶ ಸೃಷ್ಟಿಸುವುದು, ಕೈಗಾರಿಕೆಗಳಿಗೆ ಉತ್ಕೃಷ್ಟ ಮಾನವ ಸಂಪನ್ಮೂಲ ಒದಗಿಸುವುದೇ ಹೊಸ ಕೋರ್ಸುಗಳ ಗುರಿ. ಡಿಪ್ಲೋಮಾದಲ್ಲಿ ಸದ್ಯ 33 ಕೋರ್ಸ್​ಗಳು ಇವೆ. ಇವುಗಳಲ್ಲಿ ಹಳೆಯ, ಅಪ್ರಸ್ತುತ ಕೋರ್ಸುಗಳನ್ನು ಕೈಬಿಡಲಾಗಿದೆ.

ಈಗಾಗಲೇ ಹೊಸ ಪಠ್ಯವನ್ನು ಅಳವಡಿಸಲಾಗಿದೆ. ಈಗ 21ನೇ ಶತಮಾನದ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಎಂಟು ಹೊಸ ಕೋರ್ಸ್ʼಗಳನ್ನೂ ಈ ವರ್ಷದಿಂದಲೇ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಹೊಸ ಕೊರ್ಸ್​ಗಳು ಯಾವುವು?: ಆಲ್ಟರ್ನೇಟಿವ್ ಎನರ್ಜಿ ಟೆಕ್ನಾಲಜೀಸ್‌ (Alternative Energy Technologies), ಸೈಬರ್ ಭದ್ರತೆ (Cyber security), ಆಹಾರ ಸಂಸ್ಕರಣೆ ಮತ್ತು ಸಂರಕ್ಷಣೆ (Food Processing and Preservation), ಪ್ರವಾಸೋದ್ಯಮ (Travel & Tourism ), ಕ್ಲೌಡ್ ಕಂಪ್ಯೂಟಿಂಗ್ (Cloud Computing), ಆಟೋಮೇಷನ್ ಮತ್ತು ರೋಬೋಟಿಕ್ಸ್ (Automation and Robotics), ನಿರ್ದೇಶನ ಮತ್ತು ಚಿತ್ರಕಥೆ ರಚನೆ, ಟಿವಿ ಕಾರ್ಯಕ್ರಮಗಳ ನಿರ್ಮಾಣ (Direction screen play writing and TV production) ಹಾಗೂ ಸೈಬರ್ ಭೌತಿಕ ವ್ಯವಸ್ಥೆ ಮತ್ತು ಭದ್ರತೆ (Cyber physical system and security) ಈ ಕೋರ್ಸುಗಳನ್ನು ಹೊಸದಾಗಿ ಆರಂಭ ಮಾಡಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಕಾಲೇಜುಗಳ ವಿವರ: ಈ ನೂತನ ಕೋರ್ಸುಗಳನ್ನು ಗೌರಿಬಿದನೂರು, ಶಿರಾಳಕೊಪ್ಪ, ಕೂಡ್ಲಿಗಿ, ರಬಕವಿ ಬನಹಟ್ಟಿ, ಔರಾದ್ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್, ಚನ್ನಗಿರಿ, ಕೊಪ್ಪ, ಹೊನ್ನಾಳಿ, ಕಾಪು ಕಾಲೇಜುಗಳಲ್ಲಿ ಆರಂಭಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಮಾಲೋಚನೆ ನಂತರ ಕೋರ್ಸುಗಳ ಅಭಿವೃದ್ಧಿ : ನೂತನ ಕೋರ್ಸುಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯ ಹೊಸ ಪಠ್ಯಕ್ರಮದ ಪ್ರಕಾರ ಬೋಧನೆ ಮಾಡಲಾಗುವುದು ಹಾಗೂ ಈ ಪಠ್ಯಕ್ರಮವು ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಪ್ರಕಾರ ಸಿದ್ಧಪಡಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗಲಿದೆ. ಡಿಪ್ಲೋಮಾ ಪಠ್ಯಕ್ರಮಗಳನ್ನು ಉದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಹಳೆಯ ವಿದ್ಯಾರ್ಥಿಗಳೊಂದಿಗೆ ವ್ಯಾಪಕ ಸಮಾಲೋಚನೆಯ ನಂತರ ಅಭಿವೃದ್ಧಿಗೊಳಿಸಲಾಗಿದೆ ಎಂದು ತಿಳಿಸಿದರು.

ನೇರ ಪ್ರವೇಶಾತಿ: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೂತನ ಕೋರ್ಸುಗಳಿಗೆ ನೇರ ಪ್ರವೇಶಾತಿ ಸಿಗಲಿದ್ದು, ಮೂರನೇ ವರ್ಷದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇದೊಂದು ರೀತಿಯಲ್ಲಿ ವಿಶೇಷ ಕಲಿಕಾ ವಿಷಯವಾಗಿರುತ್ತದೆ.

ಅಲ್ಲದೇ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎರಡು ವರ್ಷದ ಡಿಪ್ಲೋಮಾ ನಂತರ ಮೂರನೇ ವರ್ಷದಲ್ಲಿ ಹೊಸ ರಾಷ್ಟೀಯ ಶಿಕ್ಷಣ ನೀತಿ ಅನುಸಾರ ತಮ್ಮ ಇಚ್ಛಗೆ ಅನುಗುಣವಾಗಿ ಓದಲು ಡಾಟಾ ಸೈನ್ಸ್, ಎಐ-ಎಂಎಲ್, ಪವರ್ ಇಂಜಿನಿಯರಿಂಗ್, ನವೀಕರಿಸಬಹುದಾದ ಇಂಧನ, ಇಂಡಸ್ಟ್ರಿಯಲ್ ಆಟೋಮ್ಯಾಷನ್ ಹಾಗೂ ಕೈಗಾರಿಕಾ ವಿದ್ಯುತ್ ಇಂಜಿನಿಯರಿಂಗ್, ಸುಸ್ಥಿರ ನಿರ್ಮಿತ ಪರಿಸರ, ಮೂಲಭೂತ ಎಂಜಿನಿಯರಿಂಗ್ ಸೇರಿ ಇನ್ನೂ ಹಲವಾರು ವಿಷಯಗಳನ್ನು ಆಯ್ಕೆಯ ಅನುಸಾರ ಅಧ್ಯಯನ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

ದಾಖಲಾತಿಗೆ ಚಾಲನೆ: ಇದೇ ಸಂದರ್ಭದಲ್ಲಿ ಸಚಿವರು ರಾಜ್ಯದಲ್ಲಿರುವ ಒಟ್ಟು 87 ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಿದರು. ಇವುಗಳ ಪೈಕಿ 26 ಸರಕಾರಿ ಕಾಲೇಜುಗಳಲ್ಲಿ ಮೆರಿಟ್ ಮೇಲೆ ಪ್ರವೇಶ ನೀಡಲಾಗುವುದು. ಉಳಿದ ಕಾಲೇಜುಗಳಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ಕೊಡಲಾಗುವುದು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.