ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆ ಆಗುತ್ತಿದೆ. ಈ ಹಿನ್ನೆಲೆ ಸಿಬಿಎಸ್ಸಿ 10ನೇ ತರಗತಿ ಪರೀಕ್ಷೆ ರದ್ದು ಮಾಡಲಾಗಿದೆ. ಇದೀಗ ಈ ಸಂಬಂಧ ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
![education expert Niranjanaradya, education expert Niranjanaradya talk about SSLC Exam, education expert Niranjanaradya news, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ಶಿಕ್ಷಣ ತಜ್ಞ ನಿರಂಜನಾರಾಧ್ಯ ಹೇಳಿಕೆ, ಶಿಕ್ಷಣ ತಜ್ಞ ನಿರಂಜನಾರಾಧ್ಯ ಸುದ್ದಿ,](https://etvbharatimages.akamaized.net/etvbharat/prod-images/11407071_434_11407071_1618440956602.png)
1 ರಿಂದ 9 ನೇ ತರಗತಿಯ ಪರೀಕ್ಷೆಗಳ ಬಗ್ಗೆಯೇ ತೀರ್ಮಾನವಾಗಿಲ್ಲ. ಆದರೆ ಪ್ರಶ್ನೆಯೆಂದರೆ ನಮ್ಮ 10ನೇ ತರಗತಿ ಹಂತದಲ್ಲಿ ಸಿಬಿಎಸ್ಸಿ , ಐಸಿಎಸ್ಸಿ ರಾಜ್ಯ ಮಂಡಳಿಗಳಿವೆ ಇವೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಹೇಳಿದರು.
ಒಂದು ಮಂಡಳಿ ಪರೀಕ್ಷೆ ರದ್ದಾಗಿ ಮತ್ತೊಂದು ಮಂಡಳಿ ಪರೀಕ್ಷೆ ನಡೆಸಿದ್ರೆ ತಾರತಮ್ಯವಾಗುವುದಿಲ್ಲವೇ. ಹೀಗಾಗಿ ಎಲ್ಲ ಬಗೆಯ ಮಂಡಳಿ ಪರೀಕ್ಷೆಗಳನ್ನೂ ರದ್ದು ಮಾಡಿ, ಒಂದು ಸಾಮಾನ್ಯ ಮಾನದಂಡವನ್ನು ಅನುಸರಿಸಿ ಮಕ್ಕಳನ್ನು ತೇರ್ಗಡೆ ಮಾಡುವುದು ಸೂಕ್ತ ಅಂತ ನಿರಂಜನಾರಾಧ್ಯ ವಿ.ಪಿ ತಿಳಿಸಿದ್ದಾರೆ.