ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಿಂದ ಇಡಿ ಅಧಿಕಾರಿಗಳು ಮಾಲೀಕ ಮನ್ಸೂರ್ ಖಾನ್ನನ್ನು ವಿಚಾರಣೆ ನಡೆಸುತ್ತಿದ್ದು, ಪ್ರಕರಣದಲ್ಲಿ ಬಗೆದಷ್ಟೂ ಹೆಚ್ಚು ಮಾಹಿತಿಗಳು ಲಭ್ಯವಾಗುತ್ತಿವೆ.
ಐಎಂಎ ಜ್ಯುವೆಲ್ಲರಿಯಲ್ಲಿ ಗ್ರಾಹಕರು ಲಕ್ಷಗಟ್ಟಲೇ ಹಣವನ್ನು ಹೂಡಿಕೆ ಮಾಡಿದ್ದು, ಹೀಗಾಗಿ ಈ ಹಣದ ಇಂಚಿಂಚೂ ಮಾಹಿತಿಯನ್ನು ಜಾರಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಮನ್ಸೂರ್ ಖಾನ್ನಿಂದ ರಾಜಕಾರಣಿಗಳು, ಪೊಲೀಸರು ಸೇರಿದಂತೆ ದೊಡ್ಡ ದೊಡ್ಡ ಕುಳಗಳೇ ಹಣ ಪಡೆದಿದ್ದಾರೆ. ಇದರಲ್ಲಿ ಪೂರ್ವ ವಿಭಾಗದ ಪೊಲೀಸರೂ ಕೂಡ ಕೆಲವರು ಶಾಮೀಲಾಗಿದ್ದು , ಹಲವರಿಗೆ ನೋಟಿಸ್ ನೀಡಲು ಅಧಿಕಾರಿಗಳು ಸಿದ್ದತೆ ಮಾಡ್ಕೊಂಡಿದ್ದಾರೆ.
ಪ್ರಮುಖ ಆರೋಪಿ ಖಾನ್ ಸದ್ಯಕ್ಕೆ ಐಎಂಎ ಸಂಸ್ಥೆಯಿಂದ ಹಲವಾರು ಮದರಸಾಗಳಿಗೆ,ಮೌಲ್ವಿಗಳಿಗೆ ಹಣ ನೀಡಿರುವ ವಿಚಾರ ಬಾಯಿ ಬಿಟ್ಟಿದ್ದಾನೆ. ಜೊತೆಗೆ ಆರೋಪಿಯ ಸ್ಥಿರಾಸ್ತಿಗಳನ್ನು ಪತ್ತೆ ಹಚ್ಚಲಾಗಿದೆ. ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ಕೆಲ ಹೂಡಿಕೆದಾರರನ್ನೂ ಕೂಡ ED ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.