ಬೆಂಗಳೂರು: ಬೆಂಗಳೂರು ಮತ್ತು ಗೋವಾದ ಇಡಿ ವಲಯದ ಜಂಟಿ ನಿರ್ದೇಶಕರ ವರ್ಗಾವಣೆಯಾಗಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕ ಕೆಡರ್‌ನ ರಮಣ ಗುಪ್ತಾ ಬೆಂಗಳೂರು ಮತ್ತು ಗೋವಾ ಇಡಿ ವಲಯದ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಯ ವರ್ಗಾವಣೆಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಅವರ ಸ್ಥಾನಕ್ಕೆ ಮನೀಷ್ ಗೋದಾರ ನೇಮಕ ಮಾಡಿದೆ.
ರಾಜ್ಯದಲ್ಲಿ ಬಿಟ್ ಕಾಯಿನ್ ಪ್ರಕರಣ ಜೋರಾಗಿ ಸದ್ದು ಮಾಡುತ್ತಿದೆ. ಈ ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ನಾಯಕರು, ರಾಜಕಾರಣಿಗಳ ಹೆಸರು ಕೇಳಿ ಬರುತ್ತಿದೆ. ಈ ಪ್ರಕರಣದ ತನಿಖೆಯನ್ನು ಇಡಿಗೆ ವಹಿಸಲಾಗುವುದು ಎಂದು ಇತ್ತೀಚೆಗಷ್ಟೇ ಸಿಎಂ ಬೊಮ್ಮಾಯಿ ತಿಳಿಸಿದ್ದರು. ಈ ಮಧ್ಯೆ ಬೆಂಗಳೂರು ಮತ್ತು ಗೋವಾ ಇಡಿ ವಲಯದ ಜಂಟಿ ನಿರ್ದೇಶಕರನ್ನು ವರ್ಗಾವಣೆ ಗೊಳಿಸಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.
ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನು ಇಡಿಗೆ ವಹಿಸುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ ಮಾಡಿರುವುದು, ಜೊತೆಗೆ ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರು ತಳುಕು ಹಾಕುತ್ತಿರುವುದಕ್ಕೂ ಇಡಿ ಜಂಟಿ ನಿರ್ದೇಶಕರ ವರ್ಗಾವಣೆಗೂ ಸಂಬಂಧ ಇದೆಯೇ ಎಂಬ ಪ್ರಶ್ನೆ ಮೂಡಿದೆ. ಒಟ್ನಲ್ಲಿ ಕೇಂದ್ರ ಸರ್ಕಾರ ಇಡಿ ಜಂಟಿ ನಿರ್ದೇಶಕ ರಮಣ ಗುಪ್ತಾರ ವರ್ಗಾವಣೆ ಮಾಡುವ ಮೂಲಕ ಕುತೂಹಲ ಮೂಡಿಸಿದೆ.