ETV Bharat / state

ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿಕೆಶಿ ವಿರುದ್ಧ ಇಡಿ ಚಾರ್ಜ್‌ಶೀಟ್‌

author img

By

Published : May 26, 2022, 11:55 AM IST

Updated : May 26, 2022, 1:08 PM IST

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್​ ವಿರುದ್ಧ ಜಾರಿ ನಿರ್ದೇಶನಾಲಯವು ಇಂದು ಚಾರ್ಜ್​​ಶೀಟ್​ ಸಲ್ಲಿಸಿದೆ.

ED chargesheet against DK Shivakumar and others
ಡಿಕೆ ಶಿವಕುಮಾರ್​ ವಿರುದ್ಧ ಚಾರ್ಜ್​​ಶೀಟ್ ದಾಖಲು

ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ​ ಮತ್ತೆ ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಡಿಕೆಶಿ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯವು ದೋಷಾರೋಪಣೆ ಪಟ್ಟಿ​ ಸಲ್ಲಿಸಿದೆ.

ಆದಾಯ ತೆರಿಗೆ ಇಲಾಖೆಯಲ್ಲಿ ದಾಖಲಾದ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ತನಿಖೆ ನಡೆಸುತ್ತಿದೆ. ಇದೇ ಪ್ರಕರಣದಲ್ಲಿ ಡಿಕೆಶಿ​ ತಿಹಾರ್‌ ಜೈಲಿಗೂ ಹೋಗಿದ್ದರು. ಬಳಿಕ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು.

ಹಿನ್ನೆಲೆ: 2018ರಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಕುರಿತಂತೆ ಇಡಿಯು ಡಿ.ಕೆ.ಶಿವಕುಮಾರ್​ ಮತ್ತು ದೆಹಲಿಯ ಕರ್ನಾಟಕ ಭವನದ ನೌಕರ ಎ.ಹನುಮಂತಯ್ಯ ಹಾಗೂ ಇತರರ ವಿರುದ್ಧ ಕೇಸು ದಾಖಲಿಸಿತ್ತು. ಈ ಸಂಬಂಧ ದೆಹಲಿ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ.

ಇತ್ತ, ತೆರಿಗೆ ವಂಚನೆ ಮತ್ತು ಹವಾಲಾ ವಹಿವಾಟು ಸಂಬಂಧ ಆದಾಯ ತೆರಿಗೆ ಇಲಾಖೆಯು ಬೆಂಗಳೂರಿನ ಕೋರ್ಟ್‌ನಲ್ಲಿ ಈಗಾಗಲೇ ಚಾರ್ಜ್​ಶೀಟ್​ ದಾಖಲಿಸಿದೆ. ಡಿಕೆಶಿ ತನ್ನ ಆಪ್ತ ಎಸ್​.ಕೆ.ಶರ್ಮಾ ಹಾಗು ಇತರ ಮೂವರ ನೆರವಿನೊಂದಿಗೆ ಭಾರಿ ಮೊತ್ತದ ಹಣವನ್ನು ಸಾಗಾಟ ಮಾಡಿದ್ದರು ಎಂದು ಐಟಿ ಹೇಳಿತ್ತು. ಇದೇ ಪ್ರಕರಣದಲ್ಲಿ 2019ರಲ್ಲಿ ಜಾರಿ ನಿರ್ದೇಶನಾಲಯವು ಡಿಕೆಶಿ​ ಅವರನ್ನು ಬಂಧಿಸಿತ್ತು. ಅಲ್ಲದೇ, ಪುತ್ರಿ ಐಶ್ವರ್ಯ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್​ ಸೇರಿ ಇತರರನ್ನು ವಿಚಾರಣೆಗೂ ಒಳಪಡಿಸಿತ್ತು.

ಇದನ್ನೂ ಓದಿ: ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪರಬ್​ಗೆ ಸೇರಿದ 7 ಸ್ಥಳಗಳ ಮೇಲೆ ಇಡಿ ದಾಳಿ

Last Updated : May 26, 2022, 1:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.