ETV Bharat / state

ಕೆಹೆಚ್​ಡಿಸಿಎಲ್ ವಂಚನೆ ಪ್ರಕರಣ: ವಿಜಯ ಬ್ಯಾಂಕ್ ಮಾಜಿ ವ್ಯವಸ್ಥಾಪಕನ ಆಸ್ತಿ ಮುಟ್ಟುಗೋಲು

ಕೆಹೆಚ್​ಡಿಸಿಎಲ್​ಗೆ ಕೊಟ್ಯಾಂತ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಜಯಾ ಬ್ಯಾಂಕ್ ಮಾಜಿ ಹಿರಿಯ ವ್ಯವಸ್ಥಾಪಕರಾಗಿದ್ದ ಬಿ.ವೈ.ಶ್ರೀನಿವಾಸ್ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿದೆ.

KH DCL fraud case
ಕೆಹೆಚ್​ಡಿಸಿಎಲ್ ವಂಚನೆ ಪ್ರಕರಣ
author img

By

Published : Nov 12, 2020, 9:00 PM IST

ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (ಕೆಹೆಚ್​ಡಿಸಿಎಲ್ ) ಗೆ ಕೊಟ್ಯಾಂತರ ರೂ. ವಂಚನೆ ಮಾಡಿದ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಆರೋಪಿ ಬಿ.ವೈ.ಶ್ರೀನಿವಾಸ್​ರ 1.30 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿದ್ದಾರೆ.

ವಿಜಯಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕರಾಗಿದ್ದ ಬಿ.ವೈ ಶ್ರೀನಿವಾಸ್, ನಕಲಿ ಖಾತೆ ಸೃಷ್ಟಿಸಿ ಸರ್ಕಾರಿ ಇಲಾಖೆಯಾದ ಕೆಹೆಚ್​ಡಿಸಿಎಲ್‌ಗೆ ಕೊಟ್ಯಾಂತ ರೂ. ವಂಚಿಸಿದ್ದರು. ಸುಮಾರು 16.67 ಕೋಟಿ ರೂ. ನಕಲಿ ಖಾತೆಗೆ ರವಾನಿಸಲಾಗಿತ್ತು. ಪ್ರಕರಣದಲ್ಲಿ ಕೆಹೆಚ್​ಡಿಸಿಎಲ್‌ನ ಅಂದಿನ ವ್ಯವಸ್ಥಾಪಕ ಕಿಶೋರ್ ಕುಮಾರ್ ವಿರುದ್ಧವೂ ಆರೋಪ ಕೇಳಿ ಬಂದಿತ್ತು.

  • ED attaches land, building and balances in bank accounts totaling to ₹1.30 crores belonging to B.Y. Srinivas, former Senior Manager, Vijaya Bank & others in a case related to siphoning off the funds of Karnataka State Handicraft Development Corporation Limited.

    — ED (@dir_ed) November 12, 2020 " class="align-text-top noRightClick twitterSection" data=" ">

ಈ ಕುರಿತು ಅಶೋಕನಗರ ಠಾಣೆಯಲ್ಲಿ ಕೆಎಚ್‌ಡಿಸಿಎಲ್‌ನ ವ್ಯವಸ್ಥಾಪಕ ಸಲಹೆಗಾರ ದೂರು ದಾಖಲಿಸಿದ್ದರು. ಆ ಹಿನ್ನೆಲೆ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ಕೈಗೆತ್ತಿಕೊಂಡಿದ್ದ ಇಡಿ ಅಧಿಕಾರಿಗಳು, ಆರೋಪಿ ಬಿ.ವೈ.ಶ್ರೀನಿವಾಸ್ ಒಡೆತನದ 1.30 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.