ನವದೆಹಲಿ: ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ 10 ಪೊಲೀಸ್ ಅಧಿಕಾರಿಗಳನ್ನು ವರ್ಗ ಮಾಡಿ ಚುನಾವಣಾ ಆಯೋಗ ಆದೇಶಿಸಿದೆ. "ಚುನಾವಣೆ ಸಂಹಿತೆಯ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ಸುಗಮ ಚುನಾವಣೆಗಾಗಿ" ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸೇರಿದಂತೆ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಡಿಸಿಪಿ (ಉತ್ತರ) ಬೆಂಗಳೂರು, ಯಶವಂತಪುರ ಮತ್ತು ಬೆಂಗಳೂರಿನ ಎಸಿಪಿ ಮತ್ತು ರಾಜ ರಾಜೇಶ್ವರಿ ನಗರ, ಯಶವಂತಪುರ, ನಂದಿನಿ ಲೇಔಟ್ ಪೊಲೀಸ್ ಠಾಣೆ ಮತ್ತು ರಾಜಗೋಪಾಲ್ ನಗರ ಪೊಲೀಸ್ ಠಾಣೆಯ ನಾಲ್ವರು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ವರ್ಗಾವಣೆಗೊಂಡಿದ್ದಾರೆ.
ಈ ಅಧಿಕಾರಿಗಳನ್ನು ರಾಜ್ಯ ಸಚಿವರೊಬ್ಬರ ಸಲಹೆಯ ಮೇರೆಗೆ ಬೇರೆಗೆ ನಿಯೋಜಿಸಲಾಗಿದೆ. ರಾಜ್ಯದಲ್ಲಿ ಚುನಾವಣಾ ಅಕ್ರಮ ಮತ್ತು ನ್ಯಾಯಸಮ್ಮತ ಪ್ರಕ್ರಿಯೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ವರ್ಗವಾದ ಅಧಿಕಾರಿಗಳು ಪ್ರತಿಯಾಗಿ ಯಾವುದೇ ದೂರು ಹೇಳಿಲ್ಲ. ಚುನಾವಣೆಯನ್ನು ಉತ್ತಮವಾಗಿ ನಡೆಸಲು ಆಯೋಗ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.
ಜಿಲ್ಲೆಗಳಲ್ಲಿ ಅಧಿಕಾರಿಗಳ ವರ್ಗ: ಈ ತಿಂಗಳ ಆರಂಭದಲ್ಲಿ ಯಾದಗಿರಿಯ ಸುರಪುರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಪರಿಸ್ಥಿತಿಯನ್ನು ಅಸಮರ್ಪಕವಾಗಿ ನಿಭಾಯಿಸಿದ್ದಕ್ಕಾಗಿ ಸ್ಥಳೀಯ ಡಿಎಸ್ಪಿ ಮತ್ತು ಒಬ್ಬ ಸರ್ಕಲ್ ಇನ್ಸ್‌ಪೆಕ್ಟರ್ ಅವರನ್ನು ವರ್ಗಾವಣೆ ಮಾಡಲು ಆಯೋಗ ಆದೇಶಿಸಿದೆ.
ರಾಯಚೂರು ಜಿಲ್ಲೆಯ ದೇವದುರ್ಗದ ಓರ್ವ ಡಿಎಸ್ಪಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ವಿರುದ್ಧ ಅಭ್ಯರ್ಥಿಗಿಗೆ ಬೆದರಿಕೆ ಮತ್ತು ಪ್ರಚಾರಕ್ಕೆ ತಡೆ ಒಡ್ಡಿ ಕಾರಣದ ಮೇಲೆ ಇದ್ದ ಕಾರ್ಯಸ್ಥಳದಿಂದ ವರ್ಗ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ. 224 ಸದಸ್ಯ ಬಲದ ವಿಧಾನಸಭೆಗೆ ಮೇ 10ರಂದು ಚುನಾವಣೆ ನಡೆಯಲಿದೆ. ಮೇ 13 ರಂದು ಫತಾಂಶ ಘೋಷಣೆಯಾಗಲಿದೆ.
ಓದಿ: ಚುನಾವಣಾ ಅಖಾಡಕ್ಕಿಳಿದ ಪಿಎಸ್ಐ ಪರೀಕ್ಷೆ ಹಗರಣದ ಆರೋಪಿ.. 6.5 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ ಆರ್ಡಿಪಿ