ETV Bharat / state

ರಾಜ್ಯದಲ್ಲಿ ಮುಂದಿನ 4 ದಿನ ಗುಡುಗು ಮಿಂಚು ಸಹಿತ ಪೂರ್ವ ಮುಂಗಾರು ಆಲಿಕಲ್ಲು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ - pre mansoon rain in kanrnataka

ಮಾರ್ಚ್ 26 ರಿಂದ ಮಾರ್ಚ್ 29ರವರೆಗೆ ರಾಜ್ಯದ ಹಲವೆಡೆ ಗುಡುಗು ಮಿಂಚು ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ ಎಂದು ಮಾಹಿತಿ ಹವಮಾನ ವಿಜ್ಞಾನಿ ಪ್ರಸಾದ್​ ಹೇಳಿದ್ದಾರೆ.

east-monsoon-hail-with-thunder-and-lightning-for-the-next-4-days
ಮುಂದಿನ 4 ದಿನ ಗುಡುಗು ಮಿಂಚು ಸಹಿತ ಪೂರ್ವ ಮುಂಗಾರು ಆಲಿಕಲ್ಲು ಮಳೆ
author img

By

Published : Mar 25, 2023, 10:38 PM IST

Updated : Mar 26, 2023, 6:34 AM IST

ಹವಾಮಾನ ವಿಜ್ಞಾನಿ ಪ್ರಸಾದ್ ಅವರಿಂದ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಮುಂದಿನ 4 ದಿನ ಗುಡುಗು ಮಿಂಚು ಸಹಿತ ಪೂರ್ವ ಮುಂಗಾರು ಆಲಿಕಲ್ಲು ಮಳೆ ಸುರಿಯಲಿದೆ. ಶನಿವಾರ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬಿದ್ದಿದೆ ಎಂದು ಹವಾಮಾನ ವಿಜ್ಞಾನಿ ಪ್ರಸಾದ್ ಹೇಳಿದ್ದಾರೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಹಾಸನ, ಮೈಸೂರು ಹಾಗೂ ರಾಮನಗರದಲ್ಲಿ ಮಾರ್ಚ್ 26 ರಿಂದ ಮಾರ್ಚ್ 29ರವರೆಗೆ ಗುಡುಗು ಮಿಂಚು ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.

ಕೊಡಗು, ಬಳ್ಳಾರಿ, ಕಲಬುರಗಿ, ರಾಯಚೂರು ಮತ್ತು ಬೀದರ್‌ನಲ್ಲಿ ಮಾರ್ಚ್​ 26 ರಂದು ಸಾಧಾರಣ ಮಳೆ ಸುರಿಯಲಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಏರಿಳಿತವಾಗಿದ್ದು, ಶನಿವಾರ ಕಲಬುರಗಿಯಲ್ಲಿ 38.2 ಡಿಗ್ರಿ ಸೆಲ್ಸಿಯಸ್ ಅಧಿಕ ತಾಪಮಾನ ದಾಖಲಾದರೆ, ಧಾರವಾಡದಲ್ಲಿ ಕಡಿಮೆ ತಾಪಮಾನ 15.6 ಉಷ್ಣಾಂಶ ವರದಿಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರ ಬಿಡುಗಡೆ

Last Updated : Mar 26, 2023, 6:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.