ETV Bharat / state

30 ದಿನದಲ್ಲಿ ಇ ಖಾತಾ ಮಂಜೂರು ಆಗುವ ವ್ಯವಸ್ಥೆ ಮಾಡಿ : ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - ಪಂಚಾಯತ್​ ರಾಜ್​ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ

ಬೆಂಗಳೂರು ನಗರ ಜಿಲ್ಲೆಯ ದೊಡ್ಡಜಾಲ ಗ್ರಾಪಂ ವಿರುದ್ಧ ರೇಣುಕಾ ಮಂಘ್ನಾನಿ ಅವರು ಇ ಖಾತಾ ವಿತರಣೆ ಮಾಡದ ಕ್ರಮ ಪ್ರಶ್ನಿಸಿ ಹೈಕೋರ್ಟ್​ದಲ್ಲಿ ಅರ್ಜಿ ಸಲ್ಲಿಸಿದ್ದರು. ಮೂರು ವರ್ಷ ಕಳೆದರೂ ಇ ಖಾತಾ ವಿತರಣೆ ಮಾಡದ ಕ್ರಮಕ್ಕೆ ಅಚ್ಚರಿ ವ್ಯಕ್ತಪಡಿಸಿದ ಹೈಕೋರ್ಟ್​ ನ್ಯಾಯಪೀಠ.

high court
ಹೈಕೋರ್ಟ್
author img

By

Published : Mar 25, 2023, 6:01 PM IST

ಬೆಂಗಳೂರು: ಹಸ್ತ ಚಾಲಿತ(ಮ್ಯಾನ್ಯುಯಲ್​) ಖಾತೆ ನೀಡಿದ(ಆಸ್ತಿ ದಾಖಲೆಗಳು) ತಕ್ಷಣ ಇ-ಖಾತಾ ಸಹ ನೀಡಬೇಕು. ಇಲ್ಲವಾಗಿದ್ದಲ್ಲಿ ಸರ್ಕಾರ ಜಾರಿಗೆ ತಂದಿರುವ ಇ-ಖಾತಾ ವ್ಯವಸ್ಥೆ ಉದ್ದೇಶ ಈಡೇರಿದಂತಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಇ ಗೌರ್ನೆನ್ಸ್​ ಇಲಾಖೆಗೆ ಸೂಚನೆ ನೀಡಿ ಅರ್ಜಿ ಇತ್ಯರ್ಥ:ರೇಣುಕಾ ಮಂಘ್ನಾನಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ನ್ಯಾಯಪೀಠ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಇ- ಗೌರ್ನೆನ್ಸ್​ ಇಲಾಖೆಗೆ ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ. ಅಲ್ಲದೇ ಪ್ರತಿ ಗ್ರಾಪಂ​ ವ್ಯಾಪ್ತಿ ಪಂಚಾಯತ್​ ರಾಜ್​ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ವೆಬ್​ಸೈಟ್​ನಲ್ಲಿ ಅರ್ಜಿಗಳ ಸ್ವೀಕಾರ, ಪರಿಶೀಲನೆ ಮತ್ತು ವಿಲೇವಾರಿ ಮಾಡುವ ಸಂಬಂಧ ಸೂಕ್ತ ವ್ಯವಸ್ಥೆ ಜಾರಿಯಾಗುವಂತೆ ಮಾಡಬೇಕು ಎಂದು ನಿರ್ದೇಶನ ನೀಡಿದೆ.

ಅಲ್ಲದೆ, ಇ-ಖಾತಾ ಪಡೆದುಕೊಳ್ಳುವುದಕ್ಕಾಗಿ ಅರ್ಜಿದಾರರ ಹೆಸರು, ಅರ್ಜಿ ಸಲ್ಲಿಸಿರುವ ಆಸ್ತಿಯ ಸಂಪೂರ್ಣ ವಿವರ, ಖಾತೆಗಾಗಿ ಕೋರಿ ಸಲ್ಲಿಸಿರುವ ಅರ್ಜಿಯ ದಿನಾಂಕ, ಇ-ಖಾತೆಯನ್ನು ವಿತರಣೆ ಮಾಡಿದ ದಿನಾಂಕವು ಕಡ್ಡಾಯವಾಗಿ ಪ್ರಸ್ತಾಪವಾಗಿರಬೇಕು ಎಂದು ಸೂಚನೆ ನೀಡಿದೆ.

ವೆಬ್​ಸೈಟ್​ ಮಾಹಿತಿ ತಿಳಿಸಿ: ಇ -ಖಾತೆಗಾಗಿ ಇ-ಸುಗಮಾ ನಿಯಮಗಳ ಪ್ರಕಾರ ಯಾವುದೇ ಅರ್ಜಿ ಸಲ್ಲಿಕೆ ಮಾಡಿದ್ದಲ್ಲಿ ಮೂವತ್ತು ದಿನಗಳ ಒಳಗಾಗಿ ಇತ್ಯರ್ಥ ಪಡಿಸಿಕೊಳ್ಳಬೇಕು. ಒಂದು ವೇಳೆ ಮೂವತ್ತು ದಿನಗಳಿಗೂ ಹೆಚ್ಚು ವಿಳಂಬವಾಗಿದ್ದಲ್ಲಿ ಅದಕ್ಕೆ ಸೂಕ್ತ ಕಾರಣವನ್ನು ವೆಬ್​ಸೈಟ್​ ಮೂಲಕ ತಿಳಿಸುವಂತಾಗಬೇಕು ಎಂದು ಪೀಠ ತಿಳಿಸಿದೆ.

ಖಾತೆ ಎನ್ನುವುದು ಶೀರ್ಷಿಕೆಯ ದಾಖಲೆಯಲ್ಲದಿದ್ದರೂ, ಆಸ್ತಿಯ ಅನುಭೋಗದ ಉದ್ದೇಶದಿಂದ ಇದು ಅತ್ಯಗತ್ಯವಾಗಿದೆ. ಅಂತಹ ಅನುಭೋಗವನ್ನು ವಿಳಂಬ ಮಾಡುವಂತಾಗಬಾರದು ಎಂದು ಹೈಕೋರ್ಟ್​ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

ಇದನ್ನೂಓದಿ:ಜನಪ್ರತಿನಿಧಿಗಳ ಸ್ವಯಂಚಾಲಿತ ಅನರ್ಹತೆ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಈ ಅರ್ಜಿಯಲ್ಲಿನ ಉಲ್ಲೇಖಗಳೇನು?

ಮೂರು ವರ್ಷ ಕಳೆದರೂ ಇ ಖಾತೆ ವಿತರಣೆ ವಿಳಂಬ: ಸುಮಾರು ಮೂರು ವರ್ಷ ಕಳೆದರೂ ಇ-ಖಾತೆ ವಿತರಣೆ ಮಾಡದ ಕ್ರಮಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ನ್ಯಾಯಪೀಠ, ಅವರ ಪರಿಹಾರ ಕೋರಿ ಹೈಕೋರ್ಟ್ ಮೆಟ್ಟಿಲೇರುವಂತಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಮುಂದಿನ ಮೂರು ವಾರಗಳಲ್ಲಿ ಅರ್ಜಿದಾರರಿಗೆ ಇ-ಖಾತೆ ಮಂಜೂರು ಮಾಡಬೇಕು ಎಂದು ದೊಡ್ಡಜಾಲ ಗ್ರಾಪಂ​ಗೆ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿದೆ. ಅಲ್ಲದೆ, ಆದೇಶದ ಅನುಪಾಲನಾ ವರದಿಯನ್ನು ಏಪ್ರಿಲ್​ 6 ರಂದು ಸಲ್ಲಿಸುವಂತೆ ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ ಏನು ? ರೇಣುಕಾ ಮಂಘ್ನಾನಿ ಎಂಬುವರಿಗೆ ಬೆಂಗಳೂರು ನಗರ ಜಿಲ್ಲೆಯ ದೊಡ್ಡಜಾಲ ಗ್ರಾಪಂ ಅಧಿಕಾರಿಗಳು ಹಸ್ತಪ್ರತಿ ಖಾತೆ ವಿತರಣೆ ಮಾಡಿದ್ದರು. ಆದರೆ, ಇ-ಖಾತಾ ವಿತರಣೆ ಮಾಡಿರಲಿಲ್ಲ. ಇ-ಖಾತೆ ವಿತರಣೆ ಮಾಡುವಂತೆ ಕೋರಿ 2019ರ ಫೆಬ್ರವರಿ 16 ರಂದು ಅರ್ಜಿ ಸಲ್ಲಿಸಿದ್ದರು. ಆದರೂ ಇ- ಖಾತಾ ವಿತರಣೆ ಮಾಡದ ಕ್ರಮ ಪ್ರಶ್ನಿಸಿ ಹೈಕೋಟ್​ದಲ್ಲಿ ಅರ್ಜಿ ಸಲ್ಲಿಸಿದ್ದರು.

ಇದನ್ನೂಓದಿ:36 ಉಪಗ್ರಹಗಳ ಉಡಾವಣೆಗೆ ಸಿದ್ಧವಾಗುತ್ತಿವೆ ಒನ್‌ವೆಬ್‌ ಮತ್ತು ಇಸ್ರೋ: ಐತಿಹಾಸಿಕ ಮಿಷನ್​ಗೆ ಕ್ಷಣಗಣನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.