ETV Bharat / state

ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಚೆನ್ನೇನಹಳ್ಳಿ ಆಯ್ದುಕೊಂಡ ಕೇಂದ್ರ ಸಚಿವ ಡಿವಿಎಸ್​

ಸದಾನಂದಗೌಡ
author img

By

Published : Jun 9, 2019, 8:18 AM IST

ಬೆಂಗಳೂರು: ಎರಡನೇ ಅವಧಿಗೆ ಕೇಂದ್ರ ಸಚಿವರಾದ ಡಿ ವಿ ಸದಾನಂದಗೌಡರು ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಈ ಬಾರಿ ಯಶವಂತಪುರ ವಿಧಾನಸಭಾ ಕ್ಷೇತ್ರದ “ಚೆನ್ನೇನಹಳ್ಳಿ“ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕಳೆದ ಬಾರಿ 15 ಗ್ರಾಮಗಳನ್ನು ಹೊಂದಿದ್ದ ಸೋಮನಹಳ್ಳಿ ಗ್ರಾಮ ಪಂಚಾಯತ್‌ನ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆ ಮಾಡಿಕೊಂಡಿದ್ದ ಸದಾನಂದಗೌಡ, ಸ್ಮಾರ್ಟ್‌ ಕಾರ್ಡ್‌, ಪಡಿತರ ಕಾರ್ಡ್‌, ಕುಡಿಯುವ ನೀರಿಗಾಗಿ ಓವರ್‌ಹೆಡ್‌ ಟ್ಯಾಂಕ್‌ಗಳ ನಿರ್ಮಾಣ, ವೈಯಕ್ತಿಕ ಮನೆಗಳಿಗೆ ಶೌಚಾಲಯ ನಿರ್ಮಾಣ, ಜಾನುವಾರುಗಳ ಆರೋಗ್ಯ ತಪಾಸಣೆ, ಬೀದಿ ದೀಪ ಸೌಲಭ್ಯ, ನೇತ್ರ ತಪಾಸಣೆ, ಶೇಕಡಾ ನೂರರಷ್ಟು ಮಣ್ಣು ಪರೀಕ್ಷೆ ಕಾರ್ಡ್‌ ವಿತರಣೆ, ವಿವಿಧ ವಸತಿ ಯೋಜನೆಗಳಲ್ಲಿ ಮನೆ ನಿರ್ಮಾಣ, ಕೃಷಿ ಸೇವಾ ಕೇಂದ್ರಗಳ ಸ್ಥಾಪನೆ ಸೇರಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರು.

ಕಳೆದ ಬಾರಿ ಶೇ. 80 ರಷ್ಟು ಪ್ರಗತಿ ಸಾಧಿಸಿದ್ದಕ್ಕೆ ಕೇಂದ್ರ ಸರ್ಕಾರದಿಂದ ಪ್ರಶಂಸೆ ಕೂಡ ಪಡೆದುಕೊಂಡಿದ್ದರು. ಇದೀಗ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೆನ್ನೇನಹಳ್ಳಿ ಗ್ರಾಮವನ್ನು ಅಭಿವೃದ್ದಿಗಾಗಿ ಆರಿಸಿಕೊಂಡಿದ್ದು, ಈ ಗ್ರಾಮವನ್ನೂ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸುವ ರೀತಿ ಅಭಿವೃದ್ಧಿಪಡಿಸುವ ವಿಶ್ವಾಸವನ್ನು ಸದಾನಂದಗೌಡರು ವ್ಯಕ್ತಪಡಿಸಿದ್ದಾರೆ.

Intro:ಬೆಂಗಳೂರು:ಎರಡನೇ ಅವಧಿಗೆ ಕೇಂದ್ರ ಸಚಿವರಾದ ಡಿ.ವಿ ಸದಾನಂದಗೌಡ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಈ ಬಾರಿ ಯಶವಂತಪುರ ವಿಧಾನಸಭಾ ಕ್ಷೇತ್ರದ “ಚೆನ್ನೇನಹಳ್ಳಿ “ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
Body:
ಕಳೆದ ಬಾರಿ 15 ಗ್ರಾಮಗಳನ್ನು ಹೊಂದಿದ್ದ ಸೋಮನಹಳ್ಳಿ ಗ್ರಾಮ ಪಂಚಾಯತಿಯನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆ ಮಾಡಿಕೊಂಡಿದ್ದ ಸದಾನಂದಗೌಡ
ಸ್ಮಾರ್ಟ್‌ ಕಾರ್ಡ್‌, ಪಡಿತರ ಕಾರ್ಡ್‌, ಕುಡಿಯುವ ನೀರಿಗಾಗಿ ಓವರ್‌ಹೆಡ್‌ ಟ್ಯಾಂಕ್‌ಗಳ ನಿರ್ಮಾಣ, ವೈಯಕ್ತಿಕ ಮನೆಗಳಿಗೆ ಶೌಚಾಲಯ ನಿರ್ಮಾಣ, ಜಾನುವಾರುಗಳ ಆರೋಗ್ಯ ತಪಾಸಣೆ, ಬೀದಿ ದೀಪ ಸೌಲಭ್ಯ ನೇತ್ರ ತಪಾಸಣೆ, ಶೇಕಡಾ ನೂರರಷ್ಟು ಮಣ್ಣು ಪರೀಕ್ಷೆ ಕಾರ್ಡ್‌ ವಿತರಣೆ, ವಿವಿಧ ವಸತಿ ಯೋಜನೆಗಳಲ್ಲಿ ಮನೆ ನಿರ್ಮಾಣ, ಕೃಷಿ ಸೇವಾ ಕೇಂದ್ರಗಳ ಸ್ಥಾಪನೆ ಸೇರಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರು ಶೇ. 80 ರಷ್ಟು ಪ್ರಗತಿ ಸಾಧಿಸಿದ್ದಕ್ಕೆ ಕೇಂದ್ರ ಸರ್ಕಾರದಿಂದ ಪ್ರಶಂಸೆ ಕೂಡ ಪಡೆದುಕೊಂಡಿದ್ದರು.

ಇದೀಗ ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ
ಚೆನ್ನೇನಹಳ್ಳಿ ಗ್ರಾಮವನ್ನು ಅಭಿವೃದ್ದಿಗಾಗಿ ಆರಿಸಿಕೊಂಡಿದ್ದು,ಈ ಗ್ರಾಮವನ್ನೂ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸುವ ರೀತಿ ಅಭಿವೃದ್ಧಿಪಡಿಸುವ ವಿಶ್ವಾಸವನ್ನು ಸದಾನಂದಗೌಡರು ವ್ಯಕ್ತಪಡಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.